ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಆನ್ ಲೈನ್ ನಲ್ಲೇ ಲಕ್ಷ್ಮಿ ಪೂಜೆ ಮಾಡಿದ ಮಹಿಳೆಯರು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜುಲೈ 31: ಕೊರೊನಾ ಸೋಂಕಿನ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿಯೂ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ.

ಕೊರೊನಾ ಕಾರಣದಿಂದಾಗಿ ಹಬ್ಬದ ಆಚರಣೆಗೆ ಮಹಿಳೆಯರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ‌ಬಳ್ಳಾರಿಯ ತೋರಣಗಲ್ ಸುತ್ತಲಿನ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಹೀಗಾಗಿ ಜಿಂದಾಲ್ ಟೌನ್ ಶಿಪ್ ಬಳಿ ಇರುವ ವಿದ್ಯಾನಗರದ ಜಿಂದಾಲ್ ಉದ್ಯೋಗಿಗಳ ಕುಟುಂಬದ ಮಹಿಳೆಯರು ಆನ್ ಲೈನ್ ಪೂಜೆ ಮಾಡಿದ್ದಾರೆ.

ದೇಶದೆಲ್ಲೆಡೆ ಸಂಭ್ರಮ, ಸಡಗರದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆದೇಶದೆಲ್ಲೆಡೆ ಸಂಭ್ರಮ, ಸಡಗರದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ

Women In Ballari Jindal Township Performed Online Lakshmi Puja

ವರ ಮಹಾಲಕ್ಷ್ಮಿ ಹಬ್ಬದಲ್ಲಿ ಮಹಿಳೆಯರು ಮನೆ ಮನೆಗೆ ತೆರಳಿ ಮಹಾಲಕ್ಷ್ಮಿಯ ಆರತಿ ಮಾಡಿ ಉಡಿ ತುಂಬುವುದು ಸಂಪ್ರದಾಯ. ಆದರೆ ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಎಲ್ಲರೂ ಆನ್ ಲೈನ್ ವಿಡಿಯೋ ಕಾಲ್ ಮುಖಾಂತರವಾಗಿ ತಮ್ಮ ತಮ್ಮ ಮನೆಯಿಂದಲೇ ದೇವಿಗೆ ಆರತಿ ಮಾಡಿ ಉಡಿ ತುಂಬುವ ಸಂಪ್ರದಾಯ ನೆರವೇರಿಸಿದ್ದಾರೆ.

English summary
‌There are more coronavirus cases in toranagal of ballari district. So women in vidyanagar of jindal township performed online puja for lakshmi today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X