ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಸರ್ಕಾರ ಪತನದ ಬಗ್ಗೆ ಶ್ರೀರಾಮುಲು ಹೇಳಿದ್ದೇನು?

|
Google Oneindia Kannada News

Recommended Video

ಕರ್ನಾಟಕ ಮೈತ್ರಿ ಸರ್ಕಾರ ಪತನದ ಬಗ್ಗೆ ಬಿ ಶ್ರೀರಾಮುಲು ಪ್ರತಿಕ್ರಿಯೆ | Oneindia Kannada

ಬಳ್ಳಾರಿ, ಜೂನ್ 03 : 'ನಮ್ಮ ಹೈಕಮಾಂಡ್ ಸರ್ಕಾರ ಉರುಳಿಸುವ ಬಗ್ಗೆ ಎಲ್ಲೂ ಮಾತನಾಡದಂತೆ ಸೂಚಿಸಿದೆ. ಅಮಿತ್ ಶಾ ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಆದ್ದರಿಂದ, ಸರ್ಕಾರ ಬೀಳುವ ವಿಚಾರದಲ್ಲಿ ನೋ ಕಮೆಂಟ್ಸ್' ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಹೇಳಿದರು.

ಸೋಮವಾರ ಬಳ್ಳಾರಿಯಲ್ಲಿ ಮಾತನಾಡಿದ ಬಿ.ಶ್ರೀರಾಮುಲು ಅವರು, 'ಸರ್ಕಾರ ಉರುಳಿಸುವ ಬಗ್ಗೆ ಮಾತನಾಡಲ್ಲ. ನಮ್ಮ ಹೈಕಮಾಂಡ್ ಈ ಬಗ್ಗೆ ಎಲ್ಲೂ ಮಾತನಾಡದಂತೆ ಸೂಚಿಸಿದೆ. ನಾವು ಸರ್ಕಾರ ಬೀಳಿಸಲ್ಲ' ಎಂದರು.

ಮೈತ್ರಿ ಸರ್ಕಾರ ಪತನ, ರಕ್ತದಲ್ಲಿ ಬರೆದುಕೊಡುವೆ : ರೇಣುಕಾಚಾರ್ಯಮೈತ್ರಿ ಸರ್ಕಾರ ಪತನ, ರಕ್ತದಲ್ಲಿ ಬರೆದುಕೊಡುವೆ : ರೇಣುಕಾಚಾರ್ಯ

'ಅವರು ಸುಮ್ಮನೆ ಬಾಯಿದೆ ಎಂದು ನಮ್ಮ ಜೊತೆ ಬಿಜೆಪಿ ಶಾಸಕರಿದ್ದಾರೆ ಎನ್ನುತ್ತಾರೆ. ಅವರಿಗೆ ಧಮ್ ಇದ್ದರೆ ಒಬ್ಬ ಶಾಸಕನನ್ನು ಸೆಳೆಯಲಿ ನೋಡೋಣ. ಬಿಜೆಪಿಯಿಂದ ಯಾರೂ ಬೇರೆ ಪಕ್ಷಕ್ಕೆ ಹೋಗೋಲ್ಲ' ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ಸಂಪುಟ ವಿಸ್ತರಣೆ : ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ?ಬುಧವಾರ ಸಂಪುಟ ವಿಸ್ತರಣೆ : ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ?

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ 25 ಸ್ಥಾನಗಳಲ್ಲಿ ಜಯಗಳಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರವಿದ್ದು, ಅದು ಪತನಗೊಳ್ಳಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಸರ್ಕಾರ ಈಗಾಗಲೇ ಒಂದು ವರ್ಷ ಪೂರೈಸಿದೆ....

ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ

ರಾಜ್ಯಾಧ್ಯಕ್ಷ ಹುದ್ದೆ ಆಕಾಂಕ್ಷಿಯಲ್ಲ

ರಾಜ್ಯಾಧ್ಯಕ್ಷ ಹುದ್ದೆ ಆಕಾಂಕ್ಷಿಯಲ್ಲ

'ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ. ಆದರೆ, ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ರಾಷ್ಟ್ರಾಧ್ಯಕ್ಷರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ರಾಷ್ಟ್ರಾಧ್ಯಕ್ಷರ ಸ್ಥಾನದಿಂದ ಎಲ್ಲಾ ಸ್ಥಾನಗಳ ಬದಲಾವಣೆಗಳಿವೆ' ಎಂದು ಶ್ರೀರಾಮುಲು ಹೇಳಿದರು.

ಜನರ ಮಧ್ಯೆ ಇದ್ದು ಸಮಸ್ಯೆಗಳಿಗೆ ಸ್ಪಂದಿಸಲಿ

ಜನರ ಮಧ್ಯೆ ಇದ್ದು ಸಮಸ್ಯೆಗಳಿಗೆ ಸ್ಪಂದಿಸಲಿ

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಗ್ಗೆ ಮಾತನಾಡಿದ ಬಿ.ಶ್ರೀರಾಮುಲು, 'ಗ್ರಾಮ ವಾಸ್ತವ್ಯ ಮಾಡುವುದು ಒಳ್ಳೆಯದು. ಇದರಿಂದ ಸಮಸ್ಯೆಗಳು ಅರ್ಥವಾಗುತ್ತದೆ. ಕುಮಾರಸ್ವಾಮಿ ಅವರ ಆರೋಗ್ಯ ಸರಿ ಇಲ್ಲ. ತಮಗೆ ತೊಂದರೆ ಮಾಡಿಕೊಳ್ಳದಂತೆ ಸಮಸ್ಯೆಗೆ ಸ್ಪಂದಿಸಲಿ' ಎಂದು ಹೇಳಿದರು.

ಕನ್ನಡಕ್ಕೆ ಮೊದಲ ಆದ್ಯತೆ

ಕನ್ನಡಕ್ಕೆ ಮೊದಲ ಆದ್ಯತೆ

ಭಾಷಾ ನೀತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಪ್ರಾದೇಶಿಕ ಭಾಷೆಗೆ ಮಹತ್ವವಿರಬೇಕು. ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು. ದೇಶದಲ್ಲಿ ಇಂಗ್ಲಿಷ್, ಹಿಂದಿ ಸಂವಹನ ಮಾಡಲು ಬೇಕಾಗುತ್ತದೆ' ಎಂದರು.

ಸರ್ಕಾರದ ನಿರ್ಧಾರ ಸರಿಯಲ್ಲ

ಸರ್ಕಾರದ ನಿರ್ಧಾರ ಸರಿಯಲ್ಲ

'ಜಿಂದಾಲ್ ಭೂಮಿ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಲ್ಲ. ಯಡಿಯೂರಪ್ಪ ಅವರ ಜೊತೆ ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಸಂಸತ್‌ನಲ್ಲಿ ವಿಷಯ ಪ್ರಸ್ತಾಪಿಸುವಂತೆ ದೇವೇಂದ್ರಪ್ಪ ಅವರಿಗೆ ಹೇಳಿದ್ದೇನೆ' ಎಂದರು.

English summary
As per high command leaders direction i will not speak about Karnataka government collapses said Molakalmuru BJP MLA B.Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X