ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಪೊಲೀಸ್ ಶಕ್ತಿ ಸಾಕು: ಶೆಣೈ

By Mahesh
|
Google Oneindia Kannada News

Recommended Video

ನ.1 ರಂದು ಹೊಸ ರಾಜಕೀಯ ಪಕ್ಷ ಘೋಷಣೆ: ಅನುಪಮಾ ಶಣೈ | Oneindia Kannada

ಬಳ್ಳಾರಿ, ಅಕ್ಟೋಬರ್ 30: ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅವರು ಹೊಸ ರಾಜಕೀಯ ಪಕ್ಷ ಕಟ್ಟಲು ಮುಂದಾಗಿರುವುದು ಹೊಸ ಸುದ್ದಿಯೇನಲ್ಲ, ಉಡುಪಿ, ಕಲಬುರಗಿಯಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು. ಸೋಮವಾರದಂದು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಎಷ್ಟು ಕ್ಷೇತ್ರದಲ್ಲಿ ಸ್ಪರ್ಧೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಈ ಮೊದಲೇ ಘೋಷಿಸಿದ್ದಮ್ತೆ ನವೆಂಬರ್ ಮೊದಲ ವಾರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ. ಬಹುಶಃ ನವೆಂಬರ್ 01ರ ಕನ್ನಡ ರಾಜ್ಯೋತ್ಸವ ದಿನದಂದು ಪಕ್ಷದ ಹೆಸರು ಘೋಷಣೆ, ಪಕ್ಷದ ಕಚೇರಿ ಉದ್ಘಾಟನೆಯಾಗಲಿದೆ.

ಶೆಣೈ ಎಲ್ಲಿಂದ ಸ್ಪರ್ಧೆ?: ನಾನು ಚುನಾವಣೆಗೆ ಸ್ಪರ್ಧಿಸಲು ಆಸೆ ಹೊಂದಿದ್ದೇನೆ, ಆದರೆ, ಕ್ಷೇತ್ರ ಯಾವುದು ಎಂದು ಇನ್ನೂ ಅಂತಿಮವಾಗಿಲ್ಲ ಎಂದರು.

ಮೊದಲ ಹಂತದಲ್ಲಿ 80 ಕ್ಷೇತ್ರಗಳನ್ನು ಪ್ರಮುಖವಾಗಿ ಪರಿಗಣಿಸಿದ್ದೇವೆ, ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಗಳನ್ನು ಕಣಕ್ಕಿಳಿಸುವ ಇರಾದೆ ಇದೆ ಎಂದರು. ಸುದ್ದಿಗೋಷ್ಠಿ ಮುಖ್ಯಾಂಶಗಳು ಮುಂದಿವೆ...

ಹೊಸ ಪಕ್ಷ ಉದ್ಘಾಟನೆ ಯಾವಾಗ?

ಹೊಸ ಪಕ್ಷ ಉದ್ಘಾಟನೆ ಯಾವಾಗ?

ಈ ಮೊದಲೇ ಘೋಷಿಸಿದ್ದಂತೆ ನವೆಂಬರ್ ಮೊದಲ ವಾರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ. ಬಹುಶಃ ನವೆಂಬರ್ 01ರ ಕನ್ನಡ ರಾಜ್ಯೋತ್ಸವ ದಿನದಂದು ಪಕ್ಷದ ಹೆಸರು ಘೋಷಣೆ, ಪಕ್ಷದ ಕಚೇರಿ ಉದ್ಘಾಟನೆಯಾಗಲಿದೆ. ಪಕ್ಷದ ಉದ್ದೇಶ, ಪ್ರಣಾಳಿಕೆ ವಿವರ ನಂತರ ಪ್ರಕಟಿಸಲಾಗುವುದು.ನನ್ನ ಪಕ್ಷದಲ್ಲಿ ಕೃಷಿ, ಆರೋಗ್ಯ, ಕಾನೂನು ಮತ್ತು ಸುವ್ಯವಸ್ಥೆ. ಸಾರಿಗೆ ಮತ್ತು ಶಿಕ್ಷಣದಲ್ಲಿರುವವರಿಗೆ ಪಕ್ಷದಿಂದ ಸ್ಪರ್ದಿಸಲು ಹೆಚ್ಚು ಒತ್ತುಕೊಡಲಿದ್ದೇವೆ.

ಭ್ರಷ್ಟಾಚಾರದ ಜೊತೆ ದುಷ್ಟಾಚಾರ

ಭ್ರಷ್ಟಾಚಾರದ ಜೊತೆ ದುಷ್ಟಾಚಾರ

* ರಾಜ್ಯದಲ್ಲಿ ಭ್ರಷ್ಟಾಚಾರದ ಜೊತೆ ದುಷ್ಟಾಚಾರ ಕೂಡಾ ವ್ಯಾಪಕವಾಗಿದೆ. ಡಿಕೆ ರವಿ ಪ್ರಕರಣದಂತೆ ಎಂ ಕೆ ಗಣಪತಿ ಪ್ರಕರಣ ಸಹ ಮುಚ್ಚಿ ಹಾಕುವ ಸಾಧ್ಯತೆಯಿದೆ
* ಗಣಪತಿ ಆತ್ಮಹತ್ಯೆ ಪತ್ರ ದಾಖಲೆಗಳಲ್ಲಿ ಇಲ್ಲ ನಿಜ, ವಿಡಿಯೋ ಸಾಕ್ಷ್ಯವಿತ್ತು. ಆದರೆ, ಡೆಡ್ ಬಾಡಿ ಕೈಯಲ್ಲಿ ಡೆತ್ ನೋಟ್ ಇತ್ತು.

ಗಣಪತಿ ಪ್ರಕರಣ ಚುನಾವಣೆಯಲ್ಲಿ ಪ್ರಮುಖ ಅಂಶವಾಗುವ ಸಾಧ್ಯತೆಯಿದ್ದು, ಕಾಂಗ್ರೆಸ್ ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು ಎಂದರು.

ಅನುಪಮಾ ಅವರ ಮುಖ್ಯ ಗುರಿ

ಅನುಪಮಾ ಅವರ ಮುಖ್ಯ ಗುರಿ

ನಾನು ಕೆಲಸ ಮಾಡುವ ಸಂದರ್ಭದಲ್ಲಿ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಹಾಗಾಗಿ ರಾಜಕೀಯ ಪ್ರವೇಶ ಮಾಡಬೇಕಾಯಿತು. ಇದರ ಹಿನ್ನಲೆಯಲ್ಲಿ ರಾಜಕೀಯದಲ್ಲಿ ಪೊಲೀಸ್ ಶಕ್ತಿಯನ್ನು ಬಳಸಿ ಭ್ರಷ್ಟಾಚಾರವನ್ನ ನಿರ್ಮೂಲನೆ ಮಾಡಲು ಇಚ್ಛಿಸುತ್ತೇನೆ. ಸಂವಿಧಾನಕ್ಕೆ ಹೆಚ್ಚು ಒತ್ತುಕೊಟ್ಟು ಜನರಿಗೆ ಮತ್ತು ಸರ್ಕಾರಿ ನೌಕರರಿಗೆ ನೆಮ್ಮದಿ ಜೀವನ ನೀಡುವುದು ನಮ್ಮ ಮುಖ್ಯ ಗುರಿ

ಕಾನೂನು ಹೋರಾಟ ಮುಂದುವರೆದಿದೆ

ಕಾನೂನು ಹೋರಾಟ ಮುಂದುವರೆದಿದೆ

ಡಿವೈಎಸ್ಪಿ ರಾಜೀನಾಮೆ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆದಿದೆ,
ಕಾನೂನು ಹೋರಾಟದಲ್ಲಿ ಜಯ ಸಿಗದೆ ಮರಳಿ ಇಲಾಖೆಗೆ ಹೋಗಲು ಅಲ್ಲ, ಬದಲಾಗಿ ಸರ್ಕಾರಿ ನೌಕರರಿಗೆ ಆದ ಅನ್ಯಾಯ, ಮಹಿಳೆಯ ಆದ ಅಗೌರವದ ವಿರುದ್ದವಾಗಿ ಕಾನೂನು ಹೋರಾಟ ಮಾಡುತ್ತಿರುವೆ.

English summary
Anupama Shenoy, whistleblower and controversial former Karnataka police officer is all set to float her own political outfit ahead of assembly elections in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X