ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ವಿಮ್ಸ್ ಆಸ್ಪತ್ರೆ ರೋಗಿಗಳ ಭೇಟಿ ಸಮಯ ಬದಲಾವಣೆ

|
Google Oneindia Kannada News

ಬಳ್ಳಾರಿ, ಜುಲೈ 16 : ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ವಿಮ್ಸ್‌ ಆಸ್ಪತ್ರೆಗೆ ರೋಗಿಗಳು ಭೇಟಿ ನೀಡುವ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.

Recommended Video

ರಂಗಭೂಮಿಯಲ್ಲಿ ಮಿಂಚಿ ಮರೆಯಾದ ಅನರ್ಘ್ಯ ರತ್ನ

ಕೋವಿಡ್ -19 ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರ ಆರೋಗ್ಯವನ್ನು ಕಾಪಾಡಲು ಜಿಲ್ಲಾಧಿಕಾರಿಗಳ ಆದೇಶದಂತೆ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಭೇಟಿಯ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.

ಅಂತರರಾಜ್ಯ ಸಂಚಾರಕ್ಕೆ ಬಳ್ಳಾರಿ ಜಿಲ್ಲಾಡಳಿತದ ನಿರ್ಬಂಧ ಅಂತರರಾಜ್ಯ ಸಂಚಾರಕ್ಕೆ ಬಳ್ಳಾರಿ ಜಿಲ್ಲಾಡಳಿತದ ನಿರ್ಬಂಧ

ಪರಿಷ್ಕರಣೆಯಾದ ಸಮಯ ಜುಲೈ 21ರಿಂದ ಜಾರಿಗೆ ಬರಲಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ತನಕ ಎಲ್ಲಾ ವಿಭಾಗಕ್ಕೆ ಸಂಬಂಧಿಸಿದ ಹೊರರೋಗಿಗಳ ಚಿಕಿತ್ಸೆಯನ್ನು ನೀಡಲಾಗುತ್ತದೆ. ಮಧ್ಯಾಹ್ನ 2 ರಿಂದ 4ರ ವರೆಗೆ ಚಿಕಿತ್ಸೆಯನ್ನು ತಾತ್ಕಲಿಕವಾಗಿ ರದ್ದುಪಡಿಸಲಾಗಿದೆ.

ಬಳ್ಳಾರಿ: ಗಂಡುಮಗು ಹುಟ್ಟಿದ್ದಕ್ಕೆ ಪಾರ್ಟಿ ಕೊಟ್ಟ ಪಿಎಸ್ಐ, ಸೋಂಕು ಹಚ್ಚಿಕೊಂಡ ಸಿಪಿಐಬಳ್ಳಾರಿ: ಗಂಡುಮಗು ಹುಟ್ಟಿದ್ದಕ್ಕೆ ಪಾರ್ಟಿ ಕೊಟ್ಟ ಪಿಎಸ್ಐ, ಸೋಂಕು ಹಚ್ಚಿಕೊಂಡ ಸಿಪಿಐ

VIMS Hospital Outpatient Unit Timings Changed

ಆದರೆ, ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಗಳಲ್ಲಿ ಈ ಹಿಂದಿನಂತೆ ದಿನದ 24 ಗಂಟೆಗಳ ಕಾಲ ಸೇವೆ ಲಭ್ಯವಿರಲಿದೆ. ಜನರು ಆಸ್ಪತ್ರೆಯ ಆಡಳಿತ ಮಂಡಳಿ ಜೊತೆ ಸಹಕಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

 ಕೊರೊನಾ ರೋಗಿಗಳ ಶವಸಂಸ್ಕಾರ ವಿಡಿಯೋ; ತನಿಖೆಗೆ ಬಳ್ಳಾರಿ ಡಿಸಿ ಆದೇಶ ಕೊರೊನಾ ರೋಗಿಗಳ ಶವಸಂಸ್ಕಾರ ವಿಡಿಯೋ; ತನಿಖೆಗೆ ಬಳ್ಳಾರಿ ಡಿಸಿ ಆದೇಶ

ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ 136 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2023. 47 ಜನರು ಇದುವರೆಗೂ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ.

English summary
Ballari Vijayanagar Institute of Medical Sciences (VIMS) hospital outpatient unit timings changed. New timings will come to effect from July 21, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X