ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಶೀಲ್ಡ್ ಲಸಿಕೆಯಿಂದ ಹಲವು ಕಾಯಿಲೆಗಳು ಗುಣಮುಖ!

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಜೂನ್ 19: ಕಳೆದ 10 ವರ್ಷಗಳಿಂದ ವಾಸಿಯಾಗದ ಕಾಯಿಲೆ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಬಳಿಕ ಗುಣಮುಖವಾದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.

ಗುಡೇಕೋಟೆ ಗ್ರಾಮದಲ್ಲಿ ಪಾಲಾಕ್ಷ( 49), ಬಸವೇಶ(50) ಕೀಲುನೋವು ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ ವ್ಯಕ್ತಿಗಳಾಗಿದ್ದರು. ಕೋವಿಶೀಲ್ಡ್ ಹಾಕಿಸಿಕೊಂಡ ಬಳಿಕ 10 ವರ್ಷಗಳಿಂದ ವಾಸಿಯಾಗದ ಕಾಯಿಲೆ ವ್ಯಾಕ್ಸಿನ್ ಪಡೆದ ಬಳಿಕ ಕಾಯಿಲೆ ಇಲ್ಲವಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬಸವೇಶ ಎಂಬುವರಲ್ಲಿ ಹಲವು ವರ್ಷದಿಂದ ಕೀಲುನೋವು ಕಾಣಿಸಿಕೊಂಡಿತ್ತು. ಈ ಕಾಯಿಲೆಯಿಂದ ಮೈ- ಕೈ ನೋವು ಸಮಸ್ಯೆಯಿಂದ ನರಳುತ್ತಿದ್ದರು.

Vijayanagara: Many Diseases Are Cured After Getting Covishield Vaccine

ಮೈ, ಕೀಲು ನೋವು ವಾಸಿಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೂ ಸಹ ಕಾಯಿಲೆ ವಾಸಿಯಾಗಿರಲಿಲ್ಲ. ದಾವಣಗೆರೆ ಆಸ್ಪತ್ರೆ, ಸಂಡೂರು, ಹೊಸಪೇಟೆ ಆಸ್ಪತ್ರೆಗಳಿಗೆ ಹೀಗೆ ನಾನಾ ಕಡೆ ಸಾಕಷ್ಟು ಬಾರಿ ಆಸ್ಪತ್ರೆಗೆ ತೋರಿಸಿದರೂ ವಾಸಿಯಾಗಿರಲಿಲ್ಲ.

ಕೊರೊನಾ ವೈರಸ್‌ಗಾಗಿ ಹಾಕಿಸಿದ ಎಪ್ರಿಲ್ 05 ರಂದು ಫಸ್ಟ್ ಡೋಸ್ ಕೋವಿಶಿಲ್ಡ್ ಲಸಿಕೆ ಪಡೆದ ಬಳಿಕ ಕಾಯಿಲೆ ವಾಸಿಯಾಗಿದೆ. ಈ ಕುರಿತು ಒನ್ಇಂಡಿಯಾ ಕನ್ನಡದೊಂದಿಗೆ ಡಿಎಚ್ಒ ಜನಾರ್ಧನ್ ಮಾತನಾಡದರು.

"ಬಸವೇಶ ಎನ್ನುವವರಿಗೆ ಕಾಯಿಲೆಗಳು ಗುಣಮುಖರಾಗಿರುವುದು ಸಂತಸ ಸಂಗತಿಯಾಗಿದೆ. ಆದರೆ, ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಕಾಯಿಲೆ ಗುಣಮುಖವಾಗಿರುವುದು ವೈಜ್ಞಾನಿಕ ಪುರಾವೆಗಳು ಇಲ್ಲ. ಪಾಲಕ್ಷ ಎನ್ನುವವರಿಗೂ ಸಹ ಕಾಯಿಲೆ ಗುಣಮುಖವಾಗಿವೆ ಎಂದು ಹೇಳಲಾಗುತ್ತಿದೆ. ಕೋವಿಶೀಲ್ಡ್‌ನಿಂದ ಗುಣಮುಖವಾಗಿರುವುದರ ಬಗ್ಗೆ ಸಂಶೋಧನೆಯಿಂದ ಖಚಿತತೆಗೊಳ್ಳಬೇಕಾಗಿದೆ. ಬಸವೇಶ, ಪಾಲಾಕ್ಷ ಅವರಿಂದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಬಳಿಕ ಈ ಕುರಿತು ತಿಳಿಯಲಿದೆ," ಎಂದು ಹೇಳಿದರು.

Recommended Video

ಎಚ್ಚರ!! ರಾಜ್ಯದ 3 ಲಕ್ಷಕ್ಕಿಂತ ಅಧಿಕ ಮಕ್ಕಳು ಕೊರೊನಾ ಮೂರನೇ ಅಲೆಯ ಟಾರ್ಗೆಟ್! | Oneindia Kannada

English summary
Several Diseases have been cured after the vaccination of the Covishield in Gudekote village in Kudligi taluk in Vijayanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X