• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಂಗಭದ್ರಾ ಜಲಾಶಯ ಕೂಗಳತೆಯ ದೂರದಲ್ಲಿದ್ದರೂ ಕುಡಿಯೋ ನೀರಿಗೆ ಬರ ತಪ್ಪಿಲ್ಲ

By ಭೀಮರಾಜ.ಯು.ವಿಜಯನಗರ
|

ವಿಜಯನಗರ, ಮೇ 1: ತುಂಗಭದ್ರಾ ಜಲಾಶಯ ಕೂಗಳತೆಯ ದೂರದಲ್ಲಿದ್ದರೂ ಮರಿಯಮ್ಮಹಳ್ಳಿಯ ಪಟ್ಟಣಕ್ಕೆ ಕುಡಿಯುವ ನೀರಿಗೆ ಬರ ತಪ್ಪಿಲ್ಲ. ಹೌದು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ನಿತ್ಯದ ಗೋಳು ಸಾಮಾನ್ಯವಾಗಿ ಬಿಟ್ಟಿದೆ. ಇಲ್ಲಿನ ಜನತೆ ಕಿ.ಮೀಗಟ್ಟಲೆ ನೀರಿಗಾಗಿ ಬೈಕ್ ಗಳಲ್ಲಿ ನೀರಿನ ಬಂಡೆಗಳಿಗೆ ಹೋಗಿ ಕೊಡಪಾನಗಳಿಂದ ಹೊತ್ತು ತರುತ್ತಾರೆ.

ಮರಿಯಮ್ಮನಹಳ್ಳಿಯು ಗ್ರಾಮ ಪಂಚಾಯಿತಿಯಿಂದ ನೂತನವಾಗಿ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಕೆಯಾಗಿದೆ. ಮರಿಯಮ್ಮನಹಳ್ಳಿಯಲ್ಲಿ 2011ರ ಜನಗಣತಿ ಪ್ರಕಾರ 17,140 ಸಾವಿರ ಜನ ಸಂಖ್ಯೆಯನ್ನು ಹೊಂದಿದ್ದು, ಅಲ್ಲಿಂದ 2021ರವರೆಗೆ 25,000 ಸಾವಿರ ಜನ ಸಂಖ್ಯೆಯನ್ನು ಹೊಂದಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ

2011ರಲ್ಲಿ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಅವರ ಅವಧಿಯಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರನ್ನು ತೆಗೆದುಕೊಂಡು ಹನುಮನಹಳ್ಳಿ ಮತ್ತು ಮರಿಯಮ್ಮನಹಳ್ಳಿಯ ಕೆಇಬಿ ಬಳಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಯಿತು. ಈ ಯೋಜನೆಯಲ್ಲಿ ಮರಿಯಮ್ಮನಹಳ್ಳಿ ಒಳಗೊಂಡಂತೆ ವಿವಿಧ ಗ್ರಾಮಗಳಾದ ವೆಂಕಟಾಪುರ, ಹನುಮನಹಳ್ಳಿ, ಡಣಾಪುರ, ಮರಿಯಮ್ಮನಹಳ್ಳಿ ತಾಂಡ, ದೇವಲಾಪುರ, ನಂದಿಬಂಡಿ, ಡಣನಾಯಕನಕೆರೆ, ಗೊಲ್ಲರಹಳ್ಳಿ ಸೇರಿದಂತೆ ಹಲವು ಹಳ್ಳಿಗಳಿಗೆ ಈ‌ ಯೋಜನೆಯನ್ನು ರೂಪಿಸಲಾಗಿತ್ತು.

ಪಟ್ಟಣ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಸಂಖ್ಯೆ

ಪಟ್ಟಣ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಸಂಖ್ಯೆ

ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯು ಒಟ್ಟು 18 ವಾರ್ಡ್‌ಗಳನ್ನು ಹೊಂದಿದೆ, ಅದರಲ್ಲಿ ಮರಿಯಮ್ಮನಹಳ್ಳಿ ತಾಂಡದಲ್ಲಿ ಒಟ್ಟು 3 ವಾರ್ಡ್‌ಗಳನ್ನು ಹೊಂದಿದ್ದು, ಮರಿಯಮ್ಮನಹಳ್ಳಿಯಲ್ಲಿ 15 ವಾರ್ಡ್‌ಗಳಿವೆ.

ನಗರ ಬೆಳದಂತೆ ಮೂಲ ಸೌಕರ್ಯಗಳು ಬೇಕಾಗುತ್ತವೆ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 25,000 ಜನಸಂಖ್ಯೆಗೆ ಬೇಕಾಗುವ ಸರಾಸರಿ ನೀರು ಒಂದು ದಿನಕ್ಕೆ 25 ಲಕ್ಷ ಲೀ.ನೀರು ಬಳಕೆಯಾಗುತ್ತಿದೆ. ಆದರೆ ಈಗ 9 ಲಕ್ಷ ಲೀ.ನೀರು ಪೂರೈಕೆಯಾಗುತ್ತಿದೆ. ಅಂದರೆ ಒಂದು ದಿನಕ್ಕೆ 16 ಲಕ್ಷ ಲೀ.ನೀರು ಕೊರತೆಯಾಗುತ್ತಿದೆ. ಇಂದಿರಾ ನಗರದಿಂದ ಡಣಾಪುರ, ವೆಂಕಡಾಪುರ, ಮರಿಯಮ್ಮನಹಳ್ಳಿ ತಾಂಡಾಗಲಿಗೆ ನೀರಿನ‌ ಅಭಾವ ಕಾಡುತ್ತಿದೆ.

ಎಷ್ಟು ನೀರಿನ‌ ಟ್ಯಾಂಕ್‌ಗಳಿವೆ ಮತ್ತು ಎಲ್ಲಿವೆ

ಎಷ್ಟು ನೀರಿನ‌ ಟ್ಯಾಂಕ್‌ಗಳಿವೆ ಮತ್ತು ಎಲ್ಲಿವೆ

ಪಟ್ಟಣದ ವ್ಯಾಪ್ತಿಯಲ್ಲಿ ಒಟ್ಟು 18 ವಾರ್ಡ್‌ಗಳಿವೆ, ಅದರಲ್ಲಿ ಇಂದಿರಾ ನಗರದಲ್ಲಿರುವ 5 ಲಕ್ಷ ಲೀಟರ್ ನೀರಿನ ಟ್ಯಾಂಕರ್, ಇಂದಿರಾ ನಗರದಲ್ಲಿ ಇನ್ನೊಂದು ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿದೆ. ವೆಂಕಟಾಪುರ ರಸ್ತೆಯಲ್ಲಿ ಒಂದು ಲಕ್ಷ ಲೀಟರ್ ನೀರಿನ ಟ್ಯಾಂಕ್, ಕೆಇಬಿ ಬಳಿ ಇರುವ ಹಳೆಯ ಒಳ ನೀರಿನ ಟ್ಯಾಂಕ್ ಒಂದು ಲಕ್ಷ ಮತ್ತು ಹೊಸ ನೀರಿನ ಟ್ಯಾಂಕ್ ಅದು ಒಂದು ಲಕ್ಷ ನೀರಿನದ್ದು, ಮುಸ್ಲಿಂ ಪ್ಲಾಟ್ ನಲ್ಲಿರುವ ಓವರ್ ಟ್ಯಾಂಕ್ ಎರಡು ಲಕ್ಷದ್ದು ಮತ್ತು 8ನೇ ವಾರ್ಡಿನಲ್ಲಿರುವ ನೀರಿನ ಟ್ಯಾಂಕ್ ಎರಡು ಲಕ್ಷದ್ದು ಇದೆ.

ಎಷ್ಟು ವರ್ಷಗಳಿಂದ‌ ನೀರಿನ ಸಮಸ್ಯೆ

ಎಷ್ಟು ವರ್ಷಗಳಿಂದ‌ ನೀರಿನ ಸಮಸ್ಯೆ

ಮರಿಯಮ್ಮನಹಳ್ಳಿಯಲ್ಲಿ ಒಟ್ಟು 6 ನೀರಿನ‌ ಟ್ಯಾಂಕರ್‌ಗಳಿದ್ದು, ಒಟ್ಟಾರೆ 13 ಲಕ್ಷ ನೀರನ್ನು ಹೊಂದಿರು ಟ್ಯಾಂಕರ್‌ಗಳಿವೆ. ಮರಿಯಮ್ಮನಹಳ್ಳಿ ತಾಂಡದಲ್ಲಿ ಒಂದು ಲಕ್ಷ ಎರಡು OHT ಟ್ಯಾಂಕರ್ ಮತ್ತು ಒಳ ನೀರಿನ ಟ್ಯಾಂಕರ್ ಎರಡು ಲಕ್ಷದ್ದು ಇದೆ. ತಾಂಡಕ್ಕೆ ಒಂದೆ ನಾಲ್ಕು ಲಕ್ಷದ ನೀರಿನ ಟ್ಯಾಂಕ್ ಗಳಿವೆ. ತುಂಗಭದ್ರಾ ಜಲಾಶಯ 1951ರಲ್ಲಿ ನಿರ್ಮಾಣ ಮಾಡಲಾಯಿತು ಆಗ ಮರಿಯಮ್ಮನಹಳ್ಳಿ ಅನಿವಾರ್ಯವಾಗಿ ವಲಸೆ ಬರಬೇಕಾಯಿತು. ಅಂದಿನಿಂದ ಇಂದಿನವರೆಗೂ ಅಂದರೆ 50 ವರ್ಷಗಳಿಂದ ಸಮರ್ಪಕವಾಗಿ ಕುಡಿಯುವ ನೀರಿನ ಕೊರತೆ ಕಾಣುತ್ತಿದೆ.

ಪಾವಗಡ ಯೋಜನೆ:

ಪಾವಗಡ ಯೋಜನೆ:

ಪಾವಗಡ ಯೋಜನೆಯು ಸುಮಾರು 2,200 ರೂ. ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿಗೆ ತುಂಗಭದ್ರಾ ಜಲಾಶಯದಿಂದ ಸುಮಾರು 220 ಕಿ.ಮೀ ದೂರದ ಊರಿಗೆ ನೀರನ್ನು ತೆಗೆದುಕೊಂಡು ಹೊಗಲಾಗುತ್ತಿದೆ. ಆದರೆ ತುಂಗಭದ್ರಾ ಜಲಾಶಯದಿಂದ ಕೇವಲ 9 ರಿಂದ 10 ಕಿ.ಮೀ ದಲ್ಲಿರುವ ಮರಿಯಮ್ಮನಹಳ್ಳಿಗೆ ಸಮರ್ಪಕ ಕುಡಿಯುವ ನೀರಿಲ್ಲ ಎಂದರೆ ವಿಪರ್ಯಾಸವೇ ಸರಿ.

ರಾಜಕೀಯ ಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆ

ರಾಜಕೀಯ ಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆ

ಮರಿಯಮ್ಮನಹಳ್ಳಿಯು ಮೊದಲು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ನಂತರ 2008ರ ಕ್ಷೇತ್ರ ಮರು ವಿಂಗಡಣೆ ಮಾಡಿದಾಗ ಹಗರಿಬೊಮ್ಮನಹಳ್ಳಿ‌ ಕ್ಷೇತ್ರಕ್ಕೆ ಒಳಗೊಂಡಿತು. ಇಲ್ಲಿ ಯಾವುದೇ ಜನಪ್ರತಿನಿಧಿ ಆಯ್ಕೆಯಾಗುವ ಮುಂಚೆ ಈ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಮಾಡುತ್ತೇವೆ ಎಂದು ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಹೊಗುತ್ತಿದ್ದಾರೆ. ಆದರೆ ನಿಜವಾಗಿಯೂ ಜನರ ನೀರಿನ ಸಮಸ್ಯೆಯನ್ನು ಯಾವೊಬ್ಬ ಪ್ರತಿನಿಧಿಯ ಅರ್ಥಮಾಡಿಕೊಳ್ಳುತ್ತಿಲ್ಲ. ಕೇವಲ ಆಶ್ವಾಸನೆಯಾಗಿ ಉಳಿದುಕೊಂಡಿದೆ. ಈಗ ಹಾಲಿ ಇರುವ ಕಾಂಗ್ರೆಸ್ ಶಾಸಕ ಭೀಮನಾಯ್ಕ್ ಇದ್ದು, ಇವರಾದರೂ ಶಾಶ್ವತ ನೀರನ್ನು ಜನರಿಗೆ ಒದಗಿಸುತ್ತಾರೆಯೇ ಅನ್ನುವುದನ್ನು ಕಾದು ನೋಡಬೇಕಿದೆ.

ಜನಪ್ರತಿನಿಧಿಗಳ ಸಬೂಬು

ಜನಪ್ರತಿನಿಧಿಗಳ ಸಬೂಬು

"ಬೇಸಿಗೆ ಇರುವುದರಿಂದ ನೀರಿನ ಅಭಾವ ಇದೆ, ಮೋಟಾರ್ ಆಗಾಗ ರಿಪೇರಿ ಬರುತ್ತಿರುತ್ತವೆ. ವಿದ್ಯುತ್ ತೊಂದರೆಯಿಂದ ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯಯಾಗಿದೆ ಮುಂದಿನ ದಿನಗಳಲ್ಲಿ ಸರಿ ಪಡಿಸಲಾಗುತ್ತದೆ'' ಎಂದು ಪ.ಪಂ ಅಧ್ಯಕ್ಷರಾದ ಬಿಎಂಎಸ್ ಕಂತಲಾತಾ ಪ್ರಕಾಶ ಹೇಳಿದರು. ""ತುಂಗಭದ್ರಾ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ನಾವು ವಲಸೆ ಬಂದವರು, 2011ರಲ್ಲಿ ಮಾಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣ ಫೇಲ್ ಆಗಿದೆ. ಮರಿಯಮ್ಮನಹಳ್ಳಿಯಲ್ಲಿ 15 ರಿಂದ 20 ದಿನಗಳಿಗೊಮ್ಮೆ ನೀರನ್ನು ಬಿಡಲಾಗುತ್ತಿದೆ'' ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೋವಿಂದರ ಪರಶುರಾಮ ತಿಳಿಸಿದರು.

English summary
Drinking water not supplied to Mariyammanahalli from Tungabhadra dam. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X