ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯನಗರ ಉಪ ಚುನಾವಣೆ ಬಳಿಕ ಜಿಲ್ಲೆಯಾಗಲಿದೆಯೇ?

|
Google Oneindia Kannada News

ಬಳ್ಳಾರಿ, ಡಿಸೆಂಬರ್ 5 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಶಾಸಕರ ರಾಜೀನಾಮೆಗೆ ನಾಂದಿ ಹಾಡಿದ್ದು ವಿಜಯನಗರದ ಆನಂದ್ ಸಿಂಗ್. ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜೀನಾಮೆ ನೀಡಿ ಶಾಸಕ ಸ್ಥಾನದಿಂದ ಅವರು ಅನರ್ಹರಾದರು.

ಗುರುವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆ ವಿಜಯನಗರ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಲಿದೆ. ಒಟ್ಟು ಮತದಾರರ ಸಂಖ್ಯೆ 2,36,206. ಇವರಲ್ಲಿ ಪುರುಷರು 1,15,717, ಮತದಾರರು 1,20,427, ಇತರರು 62. ಸಂಜೆ 6 ಗಂಟೆ ತನಕ ಮತದಾನ ಮಾಡಲು ಅವಕಾಶವಿದೆ.

ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆಗೆ ಡೇಟ್ ಫಿಕ್ಸ್: ಆನಂದ್ ಸಿಂಗ್ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆಗೆ ಡೇಟ್ ಫಿಕ್ಸ್: ಆನಂದ್ ಸಿಂಗ್

2018ರ ಚುನಾವಣೆ ಸಮಯದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಚುನಾವಣೆ ಗೆದ್ದಿದ್ದ ಆನಂದ್ ಸಿಂಗ್ 2019ರ ಉಪ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ವಿ. ವೈ. ಘೋರ್ಪಡೆ, ಜೆಡಿಎಸ್‌ನಿಂದ ಎನ್. ಎಂ. ನಬಿ ಚುನಾವಣಾ ಕಣದಲ್ಲಿದ್ದಾರೆ.

ಉಪಚುನಾವಣೆಗೆ ಆನಂದ್ ಸಿಂಗ್ ಹೊಸ ಆಡಿಯೋ ಅಸ್ತ್ರ ಉಪಚುನಾವಣೆಗೆ ಆನಂದ್ ಸಿಂಗ್ ಹೊಸ ಆಡಿಯೋ ಅಸ್ತ್ರ

Vijayanagara Assembly Seat By Elections 2019

ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ಪರಭಾರೆ ಮಾಡಬಾರದು ಮತ್ತು ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ರಾಜೀನಾಮೆ ನೀಡಿರುವ ಆನಂದ್‌ ಸಿಂಗ್‌ಗೆ ಇದು ಮಹತ್ವದ ಚುನಾವಣೆಯಾಗಿದೆ.

ವಿಜಯನಗರ ಜಿಲ್ಲೆ; ಯಡಿಯೂರಪ್ಪ ಕರೆದ ಸಭೆಯಲ್ಲಿ ಆಗಿದ್ದೇನು? ವಿಜಯನಗರ ಜಿಲ್ಲೆ; ಯಡಿಯೂರಪ್ಪ ಕರೆದ ಸಭೆಯಲ್ಲಿ ಆಗಿದ್ದೇನು?

ಕಾಂಗ್ರೆಸ್‌ ಪಕ್ಷಕ್ಕೆ ಕೈ ಕೊಟ್ಟ ಆನಂದ್‌ ಸಿಂಗ್‌ಗೆ ತಕ್ಕಪಾಠ ಕಲಿಸಬೇಕು ಎಂದು ಕಾಂಗ್ರೆಸ್ ಉದ್ಯಮಿ ವಿ. ವೈ. ಘೋರ್ಪಡೆಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಉಪ ಚುನಾವಣೆ ಫಲಿತಾಂಶ ಏನಾಗಲಿದೆ? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಜಾತಿವಾರು ಲೆಕ್ಕಾಚಾರ: ವಿಜಯನಗರ ಕ್ಷೇತ್ರದಲ್ಲಿ ಎಸ್.ಟಿ ಸಮುದಾಯದ ಅಂದಾಜು 50 ಸಾವಿರ ಮತದಾರರು ಇದ್ದಾರೆ. ಮುಸ್ಲಿಂ 40 ಸಾವಿರ, ಕುರುಬ 35 ಸಾವಿರ, ಎಸ್‌ಸಿ 40 ಸಾವಿರ, ಲಿಂಗಾಯತ 30 ಸಾವಿರ, ಬ್ರಾಹ್ಮಣ 15 ಸಾವಿರ ಮತಗಳಿವೆ. ವೈಶ್ಯ, ಕ್ಷತ್ರಿಯರು, ದೇವಾಂಗ ಸೇರಿದಂತೆ ಇತರೆ 35 ಸಾವಿರಕ್ಕೂ ಅಧಿಕ ಮತದಾರರು ಇದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಆನಂದ್ ಸಿಂಗ್ 83,214 ಮತಗಳನ್ನು ಪಡೆದಿದ್ದರು. ಬಿಜೆಪಿಯ ಎಚ್‌. ಆರ್. ಗವಿಯಪ್ಪ 74, 968 ಮತ, ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ದೀಪಕ್ ಸಿಂಗ್ 3835 ಮತಗಳನ್ನು ಪಡೆದಿದ್ದರು.

English summary
Karnataka's Ballari district Vijayanagara assembly seat by election 2019: Read all about Vijayanagara assembly constituency voting.Get By election news updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X