ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

45 ಸಾವಿರ ರೂ. ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಹೂವಿನಹಡಗಲಿ ಜೆಸ್ಕಾಂ ಅಧಿಕಾರಿ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ವಿಜಯನಗರ, ಮಾರ್ಚ್ 20: ರೈತ ನ ಬಳಿ 45 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಜೆಸ್ಕಾಂ ಇಲಾಖೆಯ ಎಇಇ ಅಧಿಕಾರಿ ಭಾಸ್ಕರ್ ಎಸಿಬಿ ಬಲೆಗೆ ಬಿದ್ದ ಘಟನೆ ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ನಡೆದಿದೆ.

ಹೂವಿನಹಡಗಲಿ ತಾಲ್ಲೂಕಿನ ಬಸರಹಳ್ಳಿ ತಾಂಡಾದ ರೈತ ಉಮೇಶ್ ನಾಯ್ಕ್ ವಿದ್ಯುತ್ ಪರಿವರ್ತಕ(ಟಿಸಿ) ಬೇಕೆಂದು ಎಲ್ಲಾ ದಾಖಲೆಗಳೊಂದಿಗೆ ಜೆಸ್ಕಾಂ ಕಚೇರಿಗೆ ಹೋಗಿದ್ದಾನೆ.

ಲಂಚ ಪ್ರಕರಣ: ಚಳ್ಳಕೆರೆ ತಾ.ಪಂ ಇಒ ಮನೆ ಮೇಲೆ ಎಸಿಬಿ ದಾಳಿ; 6 ಲಕ್ಷ ನಗದು ವಶಲಂಚ ಪ್ರಕರಣ: ಚಳ್ಳಕೆರೆ ತಾ.ಪಂ ಇಒ ಮನೆ ಮೇಲೆ ಎಸಿಬಿ ದಾಳಿ; 6 ಲಕ್ಷ ನಗದು ವಶ

ನಂತರ ಜೆಸ್ಕಾಂ ಇಲಾಖೆ ಎಇಇ ಅಧಿಕಾರಿ ಭಾಸ್ಕರ್ ಅವರು ವಿದ್ಯುತ್ ಪರಿವರ್ತಕ(ಟಿಸಿ) ಅಳವಡಿಸಿಕೊಡಲು 45 ಸಾವಿರ ರೂ. ಬೇಡಿಕೆಯನ್ನಿಟ್ಟಿದ್ದಾನೆ. ರೈತ ಇದಕ್ಕೆ ಒಪ್ಪಿ ಮುಂಗಡವಾಗಿ 25 ಸಾವಿರ ರೂ.ಗಳನ್ನು ಅಧಿಕಾರಿಗೆ ಹಣವನ್ನು ಕೊಟ್ಟಿದ್ದಾನೆ.

Vijayanagara: ACB Trap Hoovinahadagli Jescom AEE; Arrested For Taking Rs 45000 Bribe

ಬಸರಹಲ್ಳಿ ತಾಂಡದ ರೈತ ಎಚ್ಚೆತ್ತುಕೊಂಡು ಎಸಿಬಿಗೆ ದೂರನ್ನು ದಾಖಲಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಎಸಿಬಿ ಅಧಿಕಾರಿಗಳು ಭ್ರಷ್ಟ ಭಾಸ್ಕರ್‌ಗೆ ಬಲೆಯನ್ನು ಬೀಸುವುದಕ್ಕೆ ಎಲ್ಲಾ ತಯಾರಿ ಮಾಡಿಕೊಂಡು, ಇನ್ನುಳಿದ ಮೊತ್ತ 20 ಸಾವಿರ ರೂ. ಜೊತೆಗೆ ರೈತ ಉಮೇಶ್ ನಾಯ್ಕ ನೊಂದಿಗೆ ಹೋಗಿ ಜೆಸ್ಕಾಂ ಇಲಾಖೆ ಎಇಇ ಭಾಸ್ಕರ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

Vijayanagara: ACB Trap Hoovinahadagli Jescom AEE; Arrested For Taking Rs 45000 Bribe

ರೈತನ ದೂರಿನಂತೆ ಎಸಿಬಿ ಅಧಿಕಾರಿಗಳು ಜೆಸ್ಕಾಂ ಎಇಇ ಭಾಸ್ಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
ACB officials raided on Hoovinahadagli JESCOM AEE Bhaskar in Vijayanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X