ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಕಾರು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜುಲೈ 30: ಆಂಧ್ರಪ್ರದೇಶ ಗಡಿ ಭಾಗದಲ್ಲಿ ಕೆಲವು ದಿನಗಳಿಂದ ಅಪಾರ ಮಳೆಯಾಗುತ್ತಿದೆ. ಹೀಗಾಗಿ ಆ ಭಾಗದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಹಳ್ಳ ದಾಟಲು ಹೋಗಿ ಇಂದು ಬೆಳಗಿನ ಜಾವ ಕಾರೊಂದು ಕೊಚ್ಚಿ ಹೋದ ಘಟನೆ ನಡೆದಿದೆ.

ಆಂಧ್ರ ಪ್ರದೇಶದ ಗೂಟಿ ಬಳಿ ಈ ಘಟನೆ ನಡೆದಿದೆ. ಗೂಟಿ ಬಳಿಯ ಹಳ್ಳವು ತುಂಬಿ ಹರಿಯುತ್ತಿದ್ದು, ಆ ಹಳ್ಳವನ್ನು ಬಸ್ ದಾಟಲು ಮುಂದಾಗಿದೆ. ಬಸ್ ದಾಟುವುದನ್ನು ನೋಡಿದ ಕಾರು ಚಾಲಕ, ಕಾರನ್ನೂ ನೀರಿನ ನಡುವೆಯೇ ಚಲಾಯಿಸಲು ಮುಂದಾಗಿದ್ದಾರೆ. ಆದರೆ ಬಸ್ ಮುಂದಕ್ಕೆ ಹಾದು, ನೀರಿನ ರಭಸಕ್ಕೆ ಕಾರು ಸಿಲುಕಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿದೆ.

Video of A Car Washed Away With Two People In Andhra Pradesh Border

 ಚಿತ್ರದುರ್ಗದಲ್ಲಿ ನಿನ್ನೆಯಿಂದ ಭಾರೀ ಮಳೆ; ತುಂಬಿಹರಿದ ಹಳ್ಳಗಳು ಚಿತ್ರದುರ್ಗದಲ್ಲಿ ನಿನ್ನೆಯಿಂದ ಭಾರೀ ಮಳೆ; ತುಂಬಿಹರಿದ ಹಳ್ಳಗಳು

ಬಳ್ಳಾರಿಯಿಂದ ಕಡಪಾ ಕಡೆಗೆ ಕಾರು ಹೋಗುತ್ತಿತ್ತು. ಕಾರಿನಲ್ಲಿ ಬಳ್ಳಾರಿ ನಿವಾಸಿಗಳಾದ ರಾಕೇಶ್ ಹಾಗೂ ಯೂಸುಫ್ ಇದ್ದರು. ನೀರಿನ ರಭಸ ಹೆಚ್ಚಾದ್ದರಿಂದ ಎಷ್ಟೇ ಪ್ರಯತ್ನಿಸಿದರೂ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಲಿಲ್ಲ. ಹಳ್ಳದಲ್ಲೇ ಕಾರು ಕೊಚ್ಚಿಕೊಂಡು ಹೋಗಿದೆ. ಸ್ವಲ್ಪ ದೂರ ಹೋದ ಮೇಲೆ ಕಾರು ನಿಂತಿದೆ. ಸ್ಥಳೀಯರು ನೀರಿನ ನಡುವೆ ಸಿಲುಕಿದ್ದ, ಕಾರಿನಲ್ಲಿದ್ದ ಇಬ್ಬರನ್ನೂ ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

English summary
Ponds and lakes are overflowing by heavy rain since few days in border areas of andhra pradesh. Today the incident of car washed away with two people from ballari happened in guti
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X