ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ ಕಂಬಗಳನ್ನು ಧ್ವಂಸಗೊಳಿಸಿದ ಆರೋಪಿಗಳ ಹೆಸರು ಬಹಿರಂಗವಾಗಿಲ್ಲ ಏಕೆ?

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಫೆಬ್ರವರಿ 07: ಕಳೆದ ವಾರ ಹಂಪಿ ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯದ ಮಂಟಪದ ಕಲ್ಲುಗಂಬಗಳನ್ನು ನಾಲ್ವರು ಯುವಕರು ಬೀಳಿಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆ ಕೈಗೊಂಡು, ಆ ನಾಲ್ವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಇದೀಗ ವಿಚಾರಣೆ ವೇಳೆ ಆರೋಪಿಗಳು ತಾವೇ ಈ ಕೃತ್ಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಯುವಕರ ಹೇಳಿಕೆಗೂ ಘಟನೆಗೂ ತಾಳೆಯಾಗುತ್ತಿರುವುದರಿಂದ ಆ ಯುವಕರೇ ಆರೋಪಿಗಳು ಎನ್ನುವುದು ಬಹುತೇಕ ಖಚಿತವಾಗಿದೆ.

ಹಂಪಿಯನ್ನು ಉಳಿಸುವ ಕೆಲಸ ನಾವೆಲ್ಲರೂ ಮಾಡಬೇಕು:ಯದುವೀರ ಒಡೆಯರ್ಹಂಪಿಯನ್ನು ಉಳಿಸುವ ಕೆಲಸ ನಾವೆಲ್ಲರೂ ಮಾಡಬೇಕು:ಯದುವೀರ ಒಡೆಯರ್

ಆದರೆ ಎಲ್ಲೋ ಒಂದು ಕಡೆ ಈ ತನಿಖೆ ಹಾದಿ ತಪ್ಪುವ ಮುನ್ಸೂಚನೆ ಕಾಣುತ್ತಿದೆ. ಯಾಕೆಂದರೆ ಆ ನಾಲ್ವರು ಯುವಕರು ಆರೋಪಿಗಳೆಂದು ಗೊತ್ತಿದ್ದರೂ ಹೆಸರು ಬಹಿರಂಗಪಡಿಸದಂತೆ ಮೇಲ್ಮಟ್ಟದಲ್ಲಿ ರಾಜಕೀಯ ಒತ್ತಡ ಹೇರಲಾಗಿದೆ.

Vandalism at Hampi:Name of the accused not revealed

ಆರೋಪಿಗಳು ಮೂಲತಃ ಎಲ್ಲಿಯವರು?ಯಾರೆಂಬುದನ್ನು ಹೇಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅವರೆಲ್ಲಾ ಮಧ್ಯಪ್ರದೇಶದವರು ಎಂಬುದು ತಿಳಿದು ಬಂದಿದೆ. ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಆರೋಪಿಗಳ ಹೆಸರು ಹೇಳಲು ಹಿಂದೇಟು ಹಾಕುತ್ತಿರುವುದು ಅನುಮಾನ ಸೃಷ್ಟಿಸಿದೆ.

 ಹಂಪಿ ಸ್ಮಾರಕ ಧ್ವಂಸ ಪ್ರಕರಣ: ತನಿಖೆಗೆ ಆಗ್ರಹ, ಪ್ರತಿಭಟನೆ ಹಂಪಿ ಸ್ಮಾರಕ ಧ್ವಂಸ ಪ್ರಕರಣ: ತನಿಖೆಗೆ ಆಗ್ರಹ, ಪ್ರತಿಭಟನೆ

Vandalism at Hampi:Name of the accused not revealed

ಸರ್ಕಾರ ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ಚುರುಕುಗೊಳಿಸಿತ್ತು. ಬೆಂಗಳೂರು ಮತ್ತು ಮುಂಬಯಿಗೂ ತೆರಳಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದರು.

 ವೈರಲ್ ವಿಡಿಯೋ: ಸುಂದರ ಹಂಪೆ ಸ್ಮಾರಕ ಕಿಡಿಗೇಡಿಗಳಿಂದ ಧ್ವಂಸ ವೈರಲ್ ವಿಡಿಯೋ: ಸುಂದರ ಹಂಪೆ ಸ್ಮಾರಕ ಕಿಡಿಗೇಡಿಗಳಿಂದ ಧ್ವಂಸ

Vandalism at Hampi:Name of the accused not revealed

ಈ ಘಟನೆಯ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಪುರಾತತ್ವಸರ್ವೇಕ್ಷಣಾ ಇಲಾಖೆ, ಹಂಪಿ ವಿಶ್ವಪರಂಪರೆ ನಿರ್ವಹಣಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಗಳು ಹಂಪಿಯ ಸ್ಮಾರಕಗಳ ಕಾವಲಿಗೆ ಹೆಚ್ಚಿನ ಭಧ್ರತೆ ನಿಯೋಜನೆಗೆ ಆಯೋಜಿಸಿವೆ.

English summary
Four persons caught by Police in connection with the vandalism at Hampi.Accused are in custody and have accepted the mistake. Police Investigation is underway.But name of the accused not revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X