ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ಆರಾಧನೆಯ ಅವಕಾಶ ಯಾರಿಗೆ? ಮಂತ್ರಾಲಯ ಮಠಕ್ಕೆ ಮೇಲುಗೈ

|
Google Oneindia Kannada News

ಬೆಂಗಳೂರು, ಡಿ; 4: ಕೊಪ್ಪಳ ಜಿಲ್ಲೆ, ಆನೆಗೊಂದಿಯಲ್ಲಿರುವ ನವವೃಂದಾವನ ಗಡ್ಡೆಯ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ಮುಗಿಯುವವರೆಗೆ, ಮೊದಲ ಪೂಜೆಗೆ ನಮಗೇ ಅವಕಾಶ ನೀಡಬೇಕು ಎನ್ನುವ ಮಂತ್ರಾಲಯ ಮಠದ ಆರ್ ಎಸ್ ಎ (Regular second appeal) ಕೈಗೆತ್ತೆಕೊಂಡ ಕೋರ್ಟ್, ಸುದೀರ್ಘ ವಾದಮಂಡನೆಯನ್ನು ಆಲಿಸಿ, ತೀರ್ಪು ನೀಡಿದೆ.

ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಮೊದಲ ಆರಾಧನೆಯ ಅವಕಾಶವನ್ನು ಮಂತ್ರಾಲಯ ಮಠಕ್ಕೆ ನೀಡಿದೆ. ಆ ಮೂಲಕ, ಉತ್ತರಾದಿ ಮಠ ಹಿನ್ನಡೆಯನ್ನು ಅನುಭವಿಸಿದೆ.

ಜಮೀನು ವಿವಾದ: ಮಂತ್ರಾಲಯ, ಉತ್ತರಾದಿ ಮಠದ ಶ್ರೀಗಳಿಗೆ ಹೈಕೋರ್ಟ್ ಉಪದೇಶ ಜಮೀನು ವಿವಾದ: ಮಂತ್ರಾಲಯ, ಉತ್ತರಾದಿ ಮಠದ ಶ್ರೀಗಳಿಗೆ ಹೈಕೋರ್ಟ್ ಉಪದೇಶ

ಆಚಾರ್ಯ ಮಧ್ವರ ಮೊದಲ ಶಿಷ್ಯ ಪದ್ಮನಾಭ ತೀರ್ಥರ ಮೂರು ದಿನಗಳ ಆರಾಧನಾ ಮಹೋತ್ಸವ, ಬುಧವಾರದಿಂದ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಮೊದಲ ಆರಾಧನೆಯ ಅವಕಾಶವನ್ನು ರಾಘವೇಂದ್ರ ಮಠಕ್ಕೆ ನೀಡಬೇಕೆಂದು, ಮಂತ್ರಾಲಯ ಮಠ, ಹೈಕೋರ್ಟ್ ಮೊರೆ ಹೋಗಿತ್ತು.

Uttaradi Mutt and Mantralaya Mutt first pooja issue in Anegundi, Karnataka High Court direction

ಈ ಸಂಬಂಧ, ಎರಡೂ ಮಠಗಳ ವಾದವನ್ನು ಆಲಿಸಿದ ನ್ಯಾ. ದೀಕ್ಷಿತ್, ಡಿಸೆಂಬರ್ 5ರಿಂದ, ಡಿ.6 ಮಧ್ಯಾಹ್ನ ಮೂರು ಗಂಟೆಯವರೆಗೆ, ನಂತರ ಅಂದರೆ ಡಿ. 6 ಮಧ್ಯಾಹ್ನ ಮೂರು ಗಂಟೆಯ ನಂತರ, ಡಿ 7 ಸಂಜೆಯ ವರೆಗೆ ಉತ್ತರಾದಿ ಮಠಕ್ಕೆ ಆರಾಧನೆ ನಡೆಸಲು, ಹೈಕೋರ್ಟ್ ಸೂಚಿಸಿದೆ.

ಉತ್ತರಾದಿ- ರಾಯರ ಮಠದವರು ನೀವೇ ನವವೃಂದಾವನ ಗೊಂದಲ ಬಗೆಹರಿಸಿಕೊಳ್ಳಿಉತ್ತರಾದಿ- ರಾಯರ ಮಠದವರು ನೀವೇ ನವವೃಂದಾವನ ಗೊಂದಲ ಬಗೆಹರಿಸಿಕೊಳ್ಳಿ

ಕಳೆದ ವರ್ಷ, ನವೆಂಬರ್ 16 ರಿಂದ 18ರವರೆಗೆ ಪದ್ಮನಾಭ ತೀರ್ಥ ಆರಾಧನೆಯನ್ನು, ಎರಡೂ ಮಠದವರು ತಲಾ ಒಂದೂವರೆ ದಿನದಂತೆ ಆರಾಧನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಮೊದಲ, ಒಂದೂವರೆ ದಿನ ಉತ್ತರಾದಿ ಮಠ, ನಂತರ ಮಂತ್ರಾಲಯ ಮಠ ಆರಾಧನೆಯನ್ನು ಮಾಡಿತ್ತು.

English summary
Uttaradi Mutt and Mantralaya Mutt first pooja issue in Nava Vrundavana Gaddi, Anegundi, Koppal district. Karnataka High Court directed, Mantralaya Mutt to do the first pooja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X