ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ 21ರ ಬಳಿಕ ಹಂಪಿ ಪ್ರವಾಸಿಗರ ವೀಕ್ಷಣೆಗೆ ಮುಕ್ತ

|
Google Oneindia Kannada News

ವಿಜಯನಗರ, ಜೂನ್ 14; ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿತ್ತು. ಜೂನ್ 16ರಂದು ಪಾರಂಪರಿಕ ಸ್ಮಾರಕ, ಮ್ಯೂಸಿಯಂ ಸೇರಿದಂತೆ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ.

ಸೋಮವಾರ ಕೇಂದ್ರ ಪುರಾತತ್ವ ಇಲಾಖೆ ಪಾರಂಪರಿಕ ತಾಣ, ಮ್ಯುಸಿಯಂಗಳಿಗೆ ಪ್ರವಾಸಿಗರು ಜೂನ್ 16ರಿಂದ ಭೇಟಿ ನೀಡಬಹುದುದ ಎಂದು ಆದೇಶ ಹೊರಡಿಸಿದೆ. ಈ ಮೂಲಕ ಪ್ರವಾಸಿ ತಾಣಗಳ ಸುತ್ತಮುತ್ತಲಿನ ವಾಣಿಜ್ಯ ಚಟುವಟಿಕೆಗೆ ಅನುಮತಿ ಸಿಕ್ಕಿದಂತಾಗಿದೆ.

ಡಾ. ಸಿದ್ದಲಿಂಗಯ್ಯ ನೆನಪು ಮಾಡಿಕೊಂಡ ಹಂಪಿ ಕನ್ನಡ ವಿವಿ ಡಾ. ಸಿದ್ದಲಿಂಗಯ್ಯ ನೆನಪು ಮಾಡಿಕೊಂಡ ಹಂಪಿ ಕನ್ನಡ ವಿವಿ

ಏಪ್ರಿಲ್ 15ರಂದು ಪ್ರವಾಸಿತಾಣಗಳ ವೀಕ್ಷಣೆಗೆ ನಿರ್ಬಂಧ ಹೇರಿ ಪುರಾತತ್ವ ಇಲಾಖೆ ಆದೇಶ ನೀಡಿತ್ತು. ಇದರಿಂದಾಗಿ ಪ್ರವಾಸಿತಾಣಗಳಲ್ಲಿ ಕೆಲಸ ಮಾಡುವ ಗೈಡ್‌ಗಳು ಸೇರಿದಂತೆ ಇತರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.

ಸಂಕಷ್ಟದಲ್ಲಿದ್ದ ಹಂಪಿ ಗೈಡ್‌ಗಳಿಗೆ ಸಹಾಯ ಮಾಡಿದ ಸುಧಾಮೂರ್ತಿ ಸಂಕಷ್ಟದಲ್ಲಿದ್ದ ಹಂಪಿ ಗೈಡ್‌ಗಳಿಗೆ ಸಹಾಯ ಮಾಡಿದ ಸುಧಾಮೂರ್ತಿ

UNESCO World Heritage Site Hampi To Open For Tourist After June 21

ಹಂಪಿ ಭೇಟಿಗೆ ಅವಕಾಶ; ಕೇಂದ್ರ ಪುರಾತತ್ವ ಇಲಾಖೆ ಆದೇಶ ಹೊರಡಿಸಿದರೂ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಹಂಪಿಗೆ ಭೇಟಿ ನೀಡಲು ಪ್ರವಾಸಿಗರು ಜೂನ್ 21ರ ತನಕ ಕಾಯಬೇಕು.

ಹಂಪಿ ಬಡವಿಲಿಂಗ ದೇವಾಲಯದ ಅರ್ಚಕ ಕೃಷ್ಣ ಭಟ್ ನಿಧನ ಹಂಪಿ ಬಡವಿಲಿಂಗ ದೇವಾಲಯದ ಅರ್ಚಕ ಕೃಷ್ಣ ಭಟ್ ನಿಧನ

ಕರ್ನಾಟಕ ಸರ್ಕಾರ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಜೂನ್ 21ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಆದ್ದರಿಂದ ಪ್ರವಾಸಿಗರ ಭೇಟಿ, ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.

ಜೂನ್ 21ರ ಬಳಿಕ ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸುಮಾರು ಎರಡು ತಿಂಗಳ ಬಳಿಕ ಹಂಪಿಗೆ ಪುನಃ ಪ್ರವಾಸಿಗರು ಭೇಟಿ ನೀಡಬಹುದು.

ಕಳೆದ ವರ್ಷ ಸಹ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದ್ದ ಕಾರಣ ಹಂಪಿಯ ಗೈಡ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅಗ ಇನ್ಫೋಸಿಸ್‌ನ ಸುಧಾಮೂರ್ತಿ ಗೈಡ್‌ಗಳಿಗೆ ನೆರವು ನೀಡಿದ್ದರು. ಈ ಬಾರಿ ಸಹ ಅವರು ಗೈಡ್‌ಗಳಿಗೆ 10 ಸಾವಿರ ರೂ. ಧನ ಸಹಾಯ ಮಾಡಿದ್ದಾರೆ.

English summary
Hampi UNESCO world heritage site open for tourist after June 21, 2021. Due to Covid 2nd wave tourist visit to Hampi banned in the month of April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X