ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದ ರದ್ದಾಯ್ತು ಅದ್ಧೂರಿ ಉಚ್ಚಂಗಿ ದುರ್ಗ ಜಾತ್ರೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಮಾರ್ಚ್ 16: ವಿಶ್ವವನ್ನೇ ನಡುಗಿಸಿರುವ ಕೊರೊನಾ ವೈರಸ್ ಈಗ ಐತಿಹಾಸಿಕ ಉಚ್ಚಂಗಮ್ಮನ ಜಾತ್ರೆಗೂ ಪರಿಣಾಮ ಬೀರಿದೆ. ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ ಉಚ್ಚಂಗಿದುರ್ಗ ಜಾತ್ರೆ ರದ್ದುಗೊಳಿಸಲು ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಅವರಿಂದ ಆದೇಶ ಬಂದಿದೆ.

ಉಚ್ಚಂಗಿ ದುರ್ಗದ ಬೆಟ್ಟದ ಮೇಲಿರುವ ಉತ್ಸವಾಂಬ ದೇವಿಯ ಜಾತ್ರೆ ಮಾರ್ಚ್ 23ರಿಂದ 27ರವರೆಗೆ ನಡೆಯಬೇಕಿತ್ತು. ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಜನ ಭಕ್ತರು ಸೇರುತ್ತಿದ್ದ ಈ ಜಾತ್ರೆ ಪ್ರಸ್ತುತ ವರ್ಷ ಕೊರೊನಾ ಸೋಂಕಿನ ಹಿನ್ನೆಲೆ ರದ್ದುಗೊಂಡಿದೆ.

ಕೊರೊನಾ ಲಸಿಕೆ ಕೊಟ್ಟ ಪ್ರಕರಣ; ಆರೋಗ್ಯ ಇಲಾಖೆಯಿಂದ ನೋಟೀಸ್ಕೊರೊನಾ ಲಸಿಕೆ ಕೊಟ್ಟ ಪ್ರಕರಣ; ಆರೋಗ್ಯ ಇಲಾಖೆಯಿಂದ ನೋಟೀಸ್

ಅಲ್ಲದೆ ಬೆಟ್ಟದ ತಪ್ಪಲಿನಲ್ಲಿರುವ ಹಾಲಮ್ಮನ ತೋಪಿನಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಕುರಿ, ಕೋಳಿ ಬಲಿ ನೀಡಿ ಜಾತ್ರೆಯನ್ನು ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಅವರು ಜಾತ್ರೆ ರದ್ದು ಮಾಡುವುದಾಗಿ ಆದೇಶ ಹೊರಡಿಸಿದ್ದು, ಭಕ್ತರಲ್ಲಿ ನಿರಾಸೆ ಉಂಟುಮಾಡಿದೆ.

Uchchangi Durga Jatre Cancelled In Harappanahalli Because Of Coronavirus

ಅರಸೀಕೆರೆ ಉಪತಹಶೀಲ್ದಾರ್ ಹಾಗೂ ಸಿಬ್ಬಂದಿಯಿಂದ ಆಟೋದಲ್ಲಿ ಮೈಕ್ ಮೂಲಕ ಜಾತ್ರೆ ರದ್ದು ಬಗ್ಗೆ ಮಾಹಿತಿ ನೀಡಿದರು.

English summary
Uchchangi Durga jatre, which is supposed to be held from march 23 to 27 cancelled due to corona effect in harappanahalli of ballary district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X