ತುಂಗಭದ್ರಾ ಜಲಾಶಯದ ಗೇಟ್ ಓಪನ್: 4539 ಕ್ಯೂಸೆಕ್ ನೀರು ಬಿಡುಗಡೆ
ಬಳ್ಳಾರಿ, ಆಗಸ್ಟ್ 17: ಗಣಿನಾಡು ಬಳ್ಳಾರಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್ ನಿಂದ ಭಾನುವಾರ ಸಂಜೆ 7 ಗಂಟೆಗೆ ಅಂದಾಜು 4539 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.
ಸದ್ಯ ತುಂಗಭದ್ರಾ ಜಲಾಶಯದಲ್ಲಿ 1632.20 ಅಡಿಯಷ್ಟು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿ ಅಷ್ಟೇ ಬಾಕಿಯಿದೆ. 33, 737 ಕ್ಯೂಸೆಕ್ ನಷ್ಟು ನೀರು ಈ ಜಲಾಶಯಕ್ಕೆ ಹರಿದು ಬರುತ್ತಿದೆ.
ಭರ್ತಿ ಹಂತಕ್ಕೆ ನವಿಲು ತೀರ್ಥ ಜಲಾಶಯ; 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ
ಭಾನುವಾರ ಸಂಜೆ ಜಲಾಶಯದಿಂದ ಮೂರು ಕ್ರಸ್ಟ್ ಗೇಟ್ ಮೂಲಕ ಸುಮಾರು 1513 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು. ಒಟ್ಟಾರೆಯಾಗಿ 6533 ಕ್ಯೂಸೆಕ್ ನೀರನ್ನು ಹರಿಬಿಡಲು ನಿರ್ಧರಿಸಲಾಗಿದೆ. ಹೀಗಾಗಿ, ನದಿ ಪಾತ್ರದ ಜನರು-ಜಾನುವಾರಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯ ಮಂಡಳಿ ಕೋರಿದೆ.
Comments
tungabhadra reservoir river heavy rain people kannada news ballari ತುಂಗಭದ್ರಾ ಜಲಾಶಯ ನದಿ ಜನರು ಕನ್ನಡ ಸುದ್ದಿ ಬಳ್ಳಾರಿ
English summary
An estimated 4539 cusecs of water were flowed into the river on Sunday evening from the three crust gates of the Tungabhadra Reservoir.