ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಪೇಟೆ; ಸಾರಿಗೆ ನೌಕರರ ಮುಷ್ಕರ, 3.94 ಕೋಟಿ ನಷ್ಟ

By ವಿಜಯನಗರ. ಭೀಮರಾಜ.ಯು
|
Google Oneindia Kannada News

ಹೊಸಪೇಟೆ, ಏಪ್ರಿಲ್ 19; ಸಾರಿಗೆ ನೌಕರರ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ವಿಭಾಗಕ್ಕೆ ಇದರಿಂದಾಗಿ 3.94 ಕೋಟಿ ನಷ್ಟ‌ ಸಂಭವಿಸಿದೆ. ಏಪ್ರಿಲ್ 7ರಂದು ಆರಂಭವಾದ ಮುಷ್ಕರ ಇನ್ನೂ ನಿಂತಿಲ್ಲ.

6ನೇ ವೇತನ ಆಯೋಗದ ಶಿಫಾರಸು ಪರಿಗಣಿಸುವುದು ಮತ್ತು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಏಪ್ರಿಲ್ 7ರಿಂದ ಸಾರಿಗೆ ನೌಕರರು ಮುಷ್ಕರವನ್ನು ನಡೆಸುತ್ತಿದ್ದಾರೆ.

ಬಸ್ ಮುಷ್ಕರ: ಕೋಲಾರದಲ್ಲಿ ಪ್ರತಿಭಟನೆಗಿಳಿದ ಸಾರಿಗೆ ನೌಕರರು; ಬಂಧನಬಸ್ ಮುಷ್ಕರ: ಕೋಲಾರದಲ್ಲಿ ಪ್ರತಿಭಟನೆಗಿಳಿದ ಸಾರಿಗೆ ನೌಕರರು; ಬಂಧನ

ಹೊಸಪೇಟೆ ವಿಭಾಗ ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ ಸೇರಿದಂತೆ ಒಟ್ಟು 5 ಡಿಪೋಗಳನ್ನು ಒಳಗೊಂಡಿದೆ. 6 ಡಿಪೋಗಳನ್ನು ಸೇರಿದಂತೆ ಒಟ್ಟು ನೌಕರರ ಸಂಖ್ಯೆ 19,947.

ಮುಷ್ಕರ; ಕೆಲಸಕ್ಕೆ ಬಂದ ನೌಕರರಿಗೆ ಮಾರ್ಚ್‌ ತಿಂಗಳ ವೇತನ ಮುಷ್ಕರ; ಕೆಲಸಕ್ಕೆ ಬಂದ ನೌಕರರಿಗೆ ಮಾರ್ಚ್‌ ತಿಂಗಳ ವೇತನ

bus

ಆದಾಯದ ನಷ್ಟ: ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿ ಸೇರಿದಂತೆ ವಿಭಾಗದಕ್ಕೆ ಏಪ್ರಿಲ್ 7 ರಿಂದ ಇಲ್ಲಿಯ ತನಕ ಬರೋಬ್ಬರಿ 3.94 ಕೋಟಿ. ರೂ ನಷ್ಟವಾಗಿದೆ.

ಸಾರಿಗೆ ಮುಷ್ಕರ; ಮಾಸಿಕ ಪಾಸು ಪಡೆದವರಿಗೆ ಸಿಹಿ ಸುದ್ದಿ ಸಾರಿಗೆ ಮುಷ್ಕರ; ಮಾಸಿಕ ಪಾಸು ಪಡೆದವರಿಗೆ ಸಿಹಿ ಸುದ್ದಿ

ಪ್ರತಿದಿನ ಒಂದು ಲಕ್ಷದಿಂದ ಐವತ್ತು ಸಾವಿರ ಕಿ.ಮೀ ಬಸ್ ಗಳು ಸಂಚರಿಸಬೇಕಿತ್ತು ಕೋವಿಡ್ ಮತ್ತು ಮುಷ್ಕರದ ಹಿನ್ನಲೆಯಿಂದ ನಿತ್ಯ 50-60 ಸಾವಿರ ಕಿ. ಮೀ. ಮಾತ್ರ ಬಸ್ ಗಳು ಸಂಚರಿಸುತ್ತಿವೆ.

ಕಳೆದ 13 ದಿನಗಳಿಂದ ಬಸ್ ಗಳು ಕ್ರಮಿಸಬೇಕಾಗಿದ್ದು 18,88,000 ಕಿ. ಮೀ.. ಆದರೆ, ಇದುವರಿಗೂ 4,09,000 ಕಿ. ಮೀ. ಮಾತ್ರ ಸಂಚಾರ ನಡೆಸಿವೆ. ಹೊಸಪೇಟೆ ವಿಭಾಗದಿಂದ ಪ್ರತಿ ನಿತ್ಯ 45-48 ಲಕ್ಷ ರೂ.‌ ಆದಾಯ ಬರುತಿತ್ತು, ಈಗ ನಿತ್ಯ 15 ರಿಂದ 16 ಲಕ್ಷ ರೂ. ಆದಾಯ ಬರುತ್ತಿದೆ.

ಬಸ್ ಸಂಚಾರ: ಮುಷ್ಕರ ಆರಂಭವಾದ ದಿನದಿಂದ ಒಟ್ಟು 200ಕ್ಕೂ ಅಧಿಕ ಬಸ್‌ಗಳು ಸಂಚಾರ ನಡೆಸಿವೆ. ಇದುವರೆಗೂ ಕರ್ತವ್ಯ ಲೋಪದ ಆರೋಪದ ಮೇಲೆ 4 ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಬಸ್ ಗಳಿಗೆ ಕಲ್ಲು ತೂರಿದವರ ವಿರುದ್ಧ ಮತ್ತು ಮುಷ್ಕರಕ್ಕೆ ಪ್ರಚೋದನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮುಷ್ಕರ ಆರಂಭವಾದಗಿನಿಂದ ಹೊಸಪೇಟೆ ವಿಭಾಗದಿಂದ ಇದುವರೆಗೂ 9 ಜನ‌ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.

"ನಮ್ಮ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ. ನಿತ್ಯವು 70 ರಿಂದ 80 ಜನ ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ಹೊಸಪೇಟೆ ನಿಯಂತ್ರಣಧಿಕಾರಿ ಜಿ. ಶೀನಯ್ಯ ಹೇಳಿದ್ದಾರೆ.

English summary
Transport employees strike in Karnataka entered 13th day. 3.94 crore loss for Hospet division from strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X