ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿ: ರಾಮುಲು ಆಗ್ರಹ

|
Google Oneindia Kannada News

ಬಳ್ಳಾರಿ, ಏಪ್ರಿಲ್ 01: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಅಧಿಕಾರ ದುರಪಯೋಗ ಮಾಡಿಕೊಂಡಿದ್ದಾರೆ. ಸಿ ಎಂ ಮಗನನ್ನು ಬಚಾವ್ ಮಾಡಿದ ಮಂಡ್ಯ ಜಿಲ್ಲಾಧಿಕಾರಿಯವರನ್ನು ಈ ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀರಾಮುಲು ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ವೈ ದೇವೇಂದ್ರಪ್ಪ ಅವರ ಪರ ಬಿರುಸಿನ ಪ್ರಚಾರ ನಡೆಸಿದ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ, ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದಲ್ಲಿ ಎಲ್ಲೂ ಕಾಣಸಿಗುತ್ತಿಲ್ಲ ಕನಿಷ್ಠ ಕಾಂಗ್ರೆಸ್ ಪಕ್ಷದ ಫ್ಲೆಕ್ಸನಲ್ಲೂ ಕಾಣಿಸ್ತಿಲ್ಲ. ಅವರನ್ನು ಯಾರಾದ್ರೂ ಸ್ವಲ್ಪ ತೋರಿಸಿಕೊಡಿ ಎಂದು ವ್ಯಂಗ್ಯವಾಡಿದರು. ಬಳ್ಳಾರಿಯ ಹಿರಿಯ ಕಾಂಗ್ರೆಸ್ ನಾಯಕರು ಕಲಬುರಗಿಗೆ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಉಗ್ರಪ್ಪ ಅವರು ಬಳ್ಳಾರಿಯಲ್ಲಿ ಒಂಟಿಯಾಗಿದ್ದಾರೆ ಎಂದರು.

ನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿ ನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿ

ಬಳ್ಳಾರಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ವೈ ದೇವೇಂದ್ರಪ್ಪ ಮಾತನಾಡಿ, ನಾನು ಗೆಲ್ಲಬೇಕೆಂದು ನನ್ನ ಪತ್ನಿ ಸುಶೀಲಮ್ಮ ಅವರು ಪಾದಯಾತ್ರೆಯ ಮೂಲಕ ಮತ ಯಾಚಿಸುತ್ತಿದ್ದಾರೆ. ಹಡಗಲಿಯ ಮದಲಗಟ್ಟೆ ಆಂಜನೇಯ ದೇವಸ್ಥಾನದಿಂದ ನೂರಕ್ಕೂ ಹೆಚ್ಚು ಮಹಿಳೆಯರೊಂದಿಗೆ ಪಾದಯಾತ್ರೆ ಮಾಡ್ತಿದ್ದಾರೆ. ಹೀಗಾಗಿ ನನ್ನ ಪತ್ನಿ ಕಾಂಗ್ರೆಸ್ ನಲ್ಲಿ ಉಳಿಯಲಿಕ್ಕೆ ಇನ್ನೇನು ಉಳಿದಿದೆ. ಎಲ್ಲಾ ವಿಚಾರಗಳನ್ನು ನನ್ನ ಬಾಯಿಯಿಂದ ಹೊರಡಿಸುವ ಪ್ರಯತ್ನ ಬೇಡ ನನ್ನ ಪತ್ನಿಯನ್ನೇ ಪ್ರಶ್ನಿಸಿ. ಅವರು ಸರಿಯಾದ ಉತ್ತರವನ್ನು ನೀಡಲಿದ್ದಾರೆ ಎಂದರು.

Transfer Mandya District collector says Sriramulu

ಕಂಪ್ಲಿ ವಿಧಾನಸಭಾ ಕ್ಷೇತ್ರದ ಹೆಚ್ ವೀರಾಪುರ, ಗುತ್ತಿಗನೂರು, ಎಮ್ಮಿಗನೂರು, ಸಾಣಾಪುರ, ಮುದ್ದಾಪುರ, ಮೇಟ್ರಿ, ದೇವಲಾಪುರ ಹಾಗೂ ಕಂಪ್ಲಿಯಲ್ಲಿ ಇಂದು ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು. ಚುನಾವಣಾ ಪ್ರಚಾರದಲ್ಲಿ ಕಂಪ್ಲಿ ಮಾಜಿ ಶಾಸಕ ಟಿ ಹೆಚ್ ಸುರೇಶ್ ಬಾಬು ಸೇರಿದಂತೆ ಹಲವು ಪ್ರಮುಖ ಬಿಜೆಪಿ ಮುಖಂಡರುಗಳು ಭಾಗವಹಿಸಿದ್ದರು.

English summary
BJP leader Sriramulu said election commission should ask government to transfer district collector of Mandya district. He alleged that she was join hands with JDS party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X