• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸಪೇಟೆ; ಹೆದ್ದಾರಿಯಲ್ಲಿ ಲಾರಿಗಳ ಘರ್ಜನೆ; ಸಂಚಾರ ದಟ್ಟಣೆ

By ಭೀಮರಾಜ.ಯು. ವಿಜಯನಗರ
|

ಹೊಸಪೇಟೆ , ಏಪ್ರಿಲ್ 07; ವಿಜಯನಗರ ಜಿಲ್ಲೆಯ ಬಿಎಂಎಂ ಕಂಪನಿಯಿಂದ ಹೊಸಪೇಟೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ನಿತ್ಯವೂ ವಾಹನ ಸವಾರರು ಪರದಾಡುತ್ತಿದ್ದು, ಅಧಿಕಾರಿಗಳು ಏನೂ ಆಗಿಲ್ಲ ಎಂಬಂತೆ ಇದ್ದಾರೆ.

ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿ ಡಣಾಪುರದ ಬಳಿ ಬಿಎಂಎಂ ಕಾರ್ಖಾನೆ ಇದೆ. ಇಲ್ಲಿ ಸ್ಪಾಂಜ್ ಐರೊನ್, ಟಿಎಂಟಿ ರಾಡು, ಸಿಮೆಂಟ್, ಇನ್ನಿತರ ಕಬ್ಬಿಣದ ಉತ್ಪನ್ನಗಳು ತಯಾರಾಗುತ್ತವೆ.

ಬೀಡಿ ಎಲೆ ಸಾಗಿಸುತ್ತಿದ್ದ ಲಾರಿ ಬೆಂಕಿಗೆ ಆಹುತಿ: ಲಕ್ಷಾಂತರ ರೂ. ನಷ್ಟಬೀಡಿ ಎಲೆ ಸಾಗಿಸುತ್ತಿದ್ದ ಲಾರಿ ಬೆಂಕಿಗೆ ಆಹುತಿ: ಲಕ್ಷಾಂತರ ರೂ. ನಷ್ಟ

ಕಬ್ಬಿಣ ಉತ್ಪನ್ನಗಳಿಗೆ ಬೇಕಾದ ಕಚ್ಚಾ ವಸ್ತುಗಳಾದ ಕಬ್ಬಿಣದ ಅದಿರು ಈ ಕಾರ್ಖಾನೆಗೆ ಗಣಿಗಳಿಂದ ಲಾರಿಗಳ ಮೂಲಕ ಸಾಗಣೆ ಆಗುತ್ತದೆ. ತಿಂಗಳ 15 ರಿಂದ 20 ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಬ್ಬಿಣದ ಅದಿರನ್ನು ಹೊತ್ತು ಲಾರಿಗಳು ಕಾರ್ಖಾನೆಯತ್ತ ಆಗಮಿಸುತ್ತವೆ.

ಹೊಸಪೇಟೆ; ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ಕೆ ಸೆಲ್ಯೂಟ್ಹೊಸಪೇಟೆ; ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ಕೆ ಸೆಲ್ಯೂಟ್

ಹೊಸಪೇಟೆ ಮತ್ತು ಸಂಡೂರು ತಾಲೂಕುಗಳ ಗಣಿಗಳಾದ ಜೆಟಿಸಿ, ಯಸ್ಕೋ, ಬಿಎಂಎಂ, ಕವಿರಾಜ, ಎಸ್. ಕೆ ಎಂಫಿಎಲ್, ಬಿಕೆಜಿ, ಚೌಕಳಿ, ಕೆ. ಡಿ. ಮೈನ್ಸ್ ಇನ್ನು ಹಲವು ಗಣಿಗಳಿಂದ ಬಿಎಂಎಂ ಕಾರ್ಖಾನೆಗೆ ಕಬ್ಬಿಣದ ಅದಿರನ್ನು ಹೊತ್ತು ಲಾರಿಗಳು ಬರುತ್ತವೆ.

ಹೊಸಪೇಟೆ ಬಳಿ ಲಾರಿಗೆ ಬೈಕ್ ಡಿಕ್ಕಿ, ಜಿಂದಾಲ್ ನೌಕರ ಸಾವುಹೊಸಪೇಟೆ ಬಳಿ ಲಾರಿಗೆ ಬೈಕ್ ಡಿಕ್ಕಿ, ಜಿಂದಾಲ್ ನೌಕರ ಸಾವು

ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ

ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ

ಲಾರಿಗಳು ಕಬ್ಬಿಣದ ಅದಿರು ಹೊತ್ತು ಬಂದಾಗ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸುಮಾರು ಅರ್ಧ ಕಿ. ಮೀ. ತನಕ ನಿಲ್ಲುತ್ತವೆ. ಇದರಿಂದಾಗಿ ಕಾರು ಮತ್ತು ಬೇರೆ ವಾಹನಗಳ ಸವಾರರು ತೊಂದರೆಗೆ ಸಿಲುಕುತ್ತಾರೆ. ಇದು ಏಕಮುಖ ರಸ್ತೆಗಾಗಿದ್ದು, ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಒಂದೇ ಸಮಯಕ್ಕೆ ನೂರಾರು ವಾಹನಗಳು ಆಗಮಿಸುವುದರಿಂದ ಸಮಸ್ಯೆ ಹೆಚ್ಚುತ್ತಿದೆ.

ಲಾರಿಗಳಿಂದ ಧೂಳಿನ ಸಮಸ್ಯೆ

ಲಾರಿಗಳಿಂದ ಧೂಳಿನ ಸಮಸ್ಯೆ

ಅದಿರು ಹೊತ್ತ ಲಾರಿಗಳು ಕಾರ್ಖಾನೆ ಹತ್ತಿರ ಬರುತ್ತಿದ್ದಂತಯೇ ಲಾರಿಗಳ‌ ಮೇಲೆ ಹಾಕಿರುವ ತಾಡಪಾಲ್ ತೆರೆಯಲಾಗುತ್ತದೆ. ಆಗ ಅದಿರಿನ ಸಣ್ಣ ಪುಡಿಯು ಗಾಳಿಯಲ್ಲಿ ಹಾರಿ ಹೋಗುತ್ತದೆ. ಆಗ ಬೈಕ್ ಸವಾರರಿಗೆ ಧೂಳಿನ ಸಮಸ್ಯೆ ಎದುರಾಗುತ್ತದೆ. ಹೆದ್ದಾರಿಯಲ್ಲಿ ಸಂಚಾರದ ಸಮಸ್ಯೆ ಜೊತೆಗೆ ಧೂಳು ಸಹ ಕುಡಿಯಬೇಕಿದೆ.

ಬಿಎಂಎಂ ಕಂಪನಿ ಭದ್ರತಾ ಸಿಬ್ಬಂದಿ

ಬಿಎಂಎಂ ಕಂಪನಿ ಭದ್ರತಾ ಸಿಬ್ಬಂದಿ

ಬಿಎಂಎಂ ಕಂಪನಿಯವರು ಸಂಚಾರ ದಟ್ಟಣೆ ಆಗದ ಹಾಗೆ ನೋಡಿ ಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದಾರೆ. ಲಾರಿಗಳ ಚಾಲರು ತಾವು ಮೊದಲು ಎಂದು ಲಾರಿಗಳನ್ನು ಹೆದ್ದಾರಿಯಲ್ಲಿ ತಂದು ನಿಲ್ಲಿಸುತ್ತಾರೆ. ಆಗ ಹೊಸಪೇಟೆ-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಭದ್ರತಾ ಸಿಬ್ಬಂದಿಗಳಿದ್ದೂ ಉಪಯೋಗ ಇಲ್ಲದಂತಾಗಿದೆ.

ಪೊಲೀಸರ ಹರಸಾಹಸ

ಪೊಲೀಸರ ಹರಸಾಹಸ

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಿತ್ಯವು ಸಾವಿರಾರು ಸಂಖ್ಯೆಯಲ್ಲಿ ವಾಹನ ಸಂಚಾರ ನಡೆಸುತ್ತದೆ. ಸಂಚಾರ ದಟ್ಟಣೆ ಆದಾಗ ಮರಿಯಮ್ಮನಹಳ್ಳಿಯ ಪೊಲೀಸರು ಲಾಠಿ ಹಿಡಿದು ರಸ್ತಗೆ ಇಳಿಯುತ್ತಾರೆ. ಆದರೆ, ಬಿಎಂಎಂ ಕಂಪನಿಗೆ ಬರುವ ಲಾರಿಗಳಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಎಲ್ಲವೂ ಗೊತ್ತಿದ್ದರೂ ತಾಲೂಕು ಮಟ್ಟದ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಸಂಚಾರ ದಟ್ಟಣೆಗೆ ಪರಿಹಾರ ಏನು? ಕಾದು ನೋಡಬೇಕು.

English summary
Traffic jam in national highway 50 which connects Bengaluru-Hospet. Due to hundreds of trucks come to BMM Ispat plant other vehicles facing traffic jam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X