ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸದಿಂದ ಹಂಪಿ ಸೌಂದರ್ಯ ಸವಿಯಲು 'ಹಂಪಿ ಬೈಸ್ಕೈ'

|
Google Oneindia Kannada News

ಬಳ್ಳಾರಿ, ಜನವರಿ 09 : ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿಯೂ 'ಹಂಪಿ ಬೈಸ್ಕೈ' ವ್ಯವಸ್ಥೆ ಮಾಡಿದೆ. 2020ನೇ ಸಾಲಿನ ಹಂಪಿ ಉತ್ಸವ ಜನವರಿ 10 ಮತ್ತು 11ರಂದು ನಡೆಯಲಿದೆ. ಅದ್ದೂರಿ ಉತ್ಸವಕ್ಕಾಗಿ ಕೊನೆ ಕ್ಷಣದ ತಯಾರಿ ನಡೆಯುತ್ತಿದೆ.

ಕಮಲಾಪುರದ ಮಯೂರ ಭುವನೇಶ್ವರಿ ಹೋಟಲ್ ಆವರಣದಲ್ಲಿ ತಾತ್ಕಾಲಿಕವಾದ ಹೆಲಿಪ್ಯಾಡ್‍ ನಿರ್ಮಾಣ ಮಾಡಲಾಗಿದೆ. ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕಆನಂದ್ ಸಿಂಗ್ ಹೆಲಿಕಾಪ್ಟರ್‌ಗೆ ಪೂಜೆ ಸಲ್ಲಿಸಿ, ' ಹಂಪಿ ಬೈಸ್ಕೈ'ಗೆ ಚಾಲನೆ ನೀಡಿದರು.

 ಹಂಪಿ ಉತ್ಸವ ಆಚರಣೆ ಬಗ್ಗೆ ಬಿಜೆಪಿ ನಿರ್ಲಕ್ಷ್ಯ, ಕಾಂಗ್ರೆಸ್ ವಕ್ತಾರರಿಂದ ಖಂಡನೆ ಹಂಪಿ ಉತ್ಸವ ಆಚರಣೆ ಬಗ್ಗೆ ಬಿಜೆಪಿ ನಿರ್ಲಕ್ಷ್ಯ, ಕಾಂಗ್ರೆಸ್ ವಕ್ತಾರರಿಂದ ಖಂಡನೆ

ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್, "ಇದೇ ಮೊದಲ ಬಾರಿಗೆ ನಮ್ಮ ಕುಟುಂಬದೊಂದಿಗೆ ಆಗಸದಿಂದ ಹಂಪಿಯನ್ನು ವೀಕ್ಷಿಸಿದೆ. ಈ ಬಾರಿ ಸೊಸೆಯೂ ನಮಗೆ ಸಾಥ್ ನೀಡಿದರು. ಅಗಸದಿಂದ ಹಂಪಿ ತುಂಬಾ ಸುಂದರವಾಗಿ ಕಾಣುತ್ತದೆ" ಎಂದರು.

ಈ ಬಾರಿಯ ಹಂಪಿ ಉತ್ಸವ ಆಚರಣೆಗೆ ನೀತಿ ಸಂಹಿತೆ ಅಡ್ಡಿ? ಈ ಬಾರಿಯ ಹಂಪಿ ಉತ್ಸವ ಆಚರಣೆಗೆ ನೀತಿ ಸಂಹಿತೆ ಅಡ್ಡಿ?

ಹಂಪಿ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಕಳೆದ ಮೂರು ವರ್ಷಗಳಿಂದ 'ಹಂಪಿ ಬೈಸ್ಕೈ' ಎಂಬ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಹಂಪಿಗೆ ಬರುವ ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ಹಂಪಿಯ ಸೌಂದರ್ಯ ಸವಿಯಬಹುದಾಗಿದೆ.

ವಿಜಯನಗರ ಉಪ ಚುನಾವಣೆ ಬಳಿಕ ಜಿಲ್ಲೆಯಾಗಲಿದೆಯೇ? ವಿಜಯನಗರ ಉಪ ಚುನಾವಣೆ ಬಳಿಕ ಜಿಲ್ಲೆಯಾಗಲಿದೆಯೇ?

ಆಗಸದಿಂದ ಹಂಪಿ

ಆಗಸದಿಂದ ಹಂಪಿ

ವಿಜಯನಗರ ಶಾಸಕ ಆನಂದ್ ಸಿಂಗ್ ಕುಟುಂಬದ 6 ಜನರೊಂದಿಗೆ ಹಣ ಪಾವತಿ ಮಾಡಿ ಹೆಲಿಕಾಪ್ಟರ್ ಮೂಲಕ ಹಂಪಿಯ ವಿಹಂಗಮ ನೋಟವನ್ನು ವೀಕ್ಷಿಸಿದರು. ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠ್ಠಲ ದೇವಾಲಯ, ಲೋಟಸ್ ಮಹಲ್ ಸೇರಿದಂತೆ ವಿವಿಧ ಸ್ಮಾರಕಗಳು, ತುಂಗಾಭದ್ರಾ ನದಿ, ಬೆಟ್ಟ-ಗುಡ್ಡಗಳು, ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಂಡರು.

ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ

ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ

ಹಂಪಿ ಬೈಸ್ಕೈಗಾಗಿಯೇ ಮಯೂರ ಭುವನೇಶ್ವವರಿ ಹೋಟಲ್ ಆವರಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್, ಎರಡು ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗಿದೆ. ಜನವರಿ 8 ರಿಂದ 12ರ ತನಕ ಹಂಪಿ ಬೈಸ್ಕೈ ಮೂಲಕ ಪ್ರವಾಸಿಗರು ಹಂಪಿ ಸೌಂದರ್ಯ ಸವಿಯಬಹುದು.

ವಿಹಂಗಮ ನೋಟ

ವಿಹಂಗಮ ನೋಟ

ಪ್ರವಾಸಿಗರು ಚಿಪ್ಸಾನ್ ಏವಿಯೇಶನ್ ಮತ್ತು ತುಂಬೆ ಏವಿಯೇಶನ್‍ ಹೆಲಿಕಾಪ್ಟರ್‌ಗಳ ಮೂಲಕ ಆಗಸದಿಂದ ಹಂಪಿಯ ಸೌಂದರ್ಯ ಸವಿಯಬಹುದು. ಹೆಲಿಕಾಪ್ಟರ್ ಹಂಪಿ, ಆನೆಗುಂದಿ ಸೇರಿದಂತೆ ಸುತ್ತಮುತ್ತಲಿನ ವಿಹಂಗಮ ನೋಟವನ್ನು ತೋರಿಸಲಿದೆ.

3 ಸಾವಿರ ರೂ. ದರವಿದೆ

3 ಸಾವಿರ ರೂ. ದರವಿದೆ

ಹಂಪಿ ಬೈಸ್ಕೈನಲ್ಲಿ 7 ನಿಮಿಷಗಳ ಹಾರಾಟಕ್ಕೆ 3 ಸಾವಿರ ರೂ.ಗಳ ದರ ನಿಗದಿ ಮಾಡಲಾಗಿದೆ. ಕಳೆದ ಬಾರಿಯ ಹಂಪಿ ಉತ್ಸವದಲ್ಲಿ 1600ಕ್ಕೂ ಹೆಚ್ಚು ಜನರು ಹಂಪಿಯ ಸೌಂದರ್ಯವನ್ನು ಆಗಸದ ಮೂಲಕ ಸವಿದಿದ್ದರು.

English summary
Hampi by sky organised in a view of Hampi Utsav 2020. Tourists can enjoy sight of Hampi from sky. Hampi Utsav will be held from January 10 and 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X