ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರಿಗೆ ಸಿಹಿಸುದ್ದಿ; ದರೋಜಿ ಕರಡಿಧಾಮದಲ್ಲಿ ಸಫಾರಿ ಆರಂಭ

By ಭೀಮರಾಜ.ಯು. ವಿಜಯನಗರ
|
Google Oneindia Kannada News

ವಿಜಯನಗರ, ಸೆಪ್ಟೆಂಬರ್ 02; ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದಲ್ಲಿ ಸಫಾರಿ ಆರಂಭಗೊಂಡಿದೆ. ಪ್ರವಾಸಿಗರು ಇನ್ನು ಮುಂದೆ ಕರಡಿಧಾಮದಲ್ಲಿ ಕರಡಿಗಳನ್ನು ಸಮೀಪದಿಂದಲೇ ನೋಡುವುದಕ್ಕೆ ಅರಣ್ಯ ಇಲಾಖೆ ಈ ಮೂಲಕ ಅವಕಾಶ ಮಾಡಿಕೊಟ್ಟಿದೆ.

ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಕರಡಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ದರೋಜಿ ಕರಡಿಧಾಮ. ಇಲ್ಲಿ ಸರಿ ಸುಮಾರು 100 ರಿಂದ 125 ಕರಡಿಗಳಿವೆ. ನೂರಾರು ಪ್ರವಾಸಿಗರು ಇಲ್ಲಿಗೆ ಕರಡಿ ನೋಡುವುದಕ್ಕೆ ಆಗಮಿಸುತ್ತಾರೆ.

ದರೋಜಿ ಕರಡಿಧಾಮದಲ್ಲಿ ಬೃಹತ್ ಹಸಿರೀಕರಣ ಯೋಜನೆ ದರೋಜಿ ಕರಡಿಧಾಮದಲ್ಲಿ ಬೃಹತ್ ಹಸಿರೀಕರಣ ಯೋಜನೆ

ಕರಡಿಗಳಿಗೆ ಹೇಳಿ ಮಾಡಿಸಿದಂತೆ ಇದೆ ಇಲ್ಲಿನ ವಾತಾವರಣ. ದರೋಜಿ ಕರಡಿಧಾಮ ಕಲ್ಲು-ಬಂಡೆಗಳಿಂದ ಆವೃತ್ತವಾದ ಬೆಟ್ಟ-ಗುಡ್ಡಗಳ ನಡುವೆ ಇದೆ. ಗುಡ್ಡಗಾಡು ಪ್ರದೇಶ, ಕುರುಚಲ ಗುಡ್ಡ, ಪೊದೆಗಳು ಇದ್ದು ಕರಡಿಗಳ ವಾಸ್ತವ್ಯಕ್ಕೆ ವಾತಾವರಣ ಪ್ರಶಸ್ತವಾಗಿದೆ. ಹಾಗಾಗಿ ಇಲ್ಲಿ ಕರಡಿಗಳು ಹೆಚ್ಚಿನ‌ ಸಂಖ್ಯೆಯಲ್ಲಿ ಇವೆ.

ಕೊಡಗಿನ ಕಾಫಿ ಬೆಳೆಗಾರರಿಗೆ ಇದೀಗ ಕರಡಿ ಕಾಟ ಕೊಡಗಿನ ಕಾಫಿ ಬೆಳೆಗಾರರಿಗೆ ಇದೀಗ ಕರಡಿ ಕಾಟ

ಪ್ರವಾಸಿಗರು ಕರಡಿಧಾಮಕ್ಕೆ ಭೇಟಿ ನೀಡಿದರೆ ಆಟವಾಡುತ್ತಿರುವ ಕರಡಿ ಮರಿಗಳು ಕಾಣಸಿಗುತ್ತವೆ. ಈಗ ಸಫಾರಿ ಆರಂಭಗೊಂಡಿರುವುದರಿಂದ ಹತ್ತಿರದಿಂದಲೇ ಕರಡಿ ಮರಿಗಳು ಸ್ವಚ್ಚಂದವಾಗಿ ಆಟ ಆಡುತ್ತಿರು ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. (ಚಿತ್ರಗಳು; ಶಿವಶಂಕರ್ ಬಣಗಾರ್)

ಅಮೆರಿಕ ಅಧ್ಯಕ್ಷರಾಗಲಿರುವ ಬಿಡೆನ್, ಕರಡಿ ನುಡಿಯಿತು ಭವಿಷ್ಯ..!ಅಮೆರಿಕ ಅಧ್ಯಕ್ಷರಾಗಲಿರುವ ಬಿಡೆನ್, ಕರಡಿ ನುಡಿಯಿತು ಭವಿಷ್ಯ..!

ಕರಡಿಧಾಮದಲ್ಲಿ ಸಫಾರಿ ಆರಂಭ

ಕರಡಿಧಾಮದಲ್ಲಿ ಸಫಾರಿ ಆರಂಭ

ಸಿಂಹಧಾಮದ ಸಫಾರಿ, ಹುಲಿ ಸಫಾರಿ ನೋಡಿದ್ದೇವೆ. ಆದರೆ ಇಲ್ಲಿ ಅರಣ್ಯ ಇಲಾಖೆಯವರು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕರಡಿ ಸಫಾರಿ ಆರಂಭ ಮಾಡಿದ್ದಾರೆ. ಸುಮಾರು 82 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ದರೋಜಿ ಕರಡಿಧಾಮ‌ ಹಬ್ಬಿದೆ. ಮೊದಲು ಕರಡಿಗಳನ್ನು ವೀಕ್ಷಣೆ ಮಾಡುವುದಕ್ಕೆ ತಮ್ಮ ವಾಹನ ಅಥವಾ ಖಾಸಗಿ ವಾಹನಗಳಲ್ಲಿ ಬರುತ್ತಿದ್ದರು. ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಅರಣ್ಯ ಇಲಾಖೆಯವರು ಖಾಸಗಿ ವಾಹನಗಳಿಗೆ ತಡೆ ಹಾಕಿದ್ದು, ಇನ್ನು ಮುಂದೆ ನಿಗದಿತ ಹಣ ಪಡೆದು ಜನರನ್ನು ಕರಡಿ ಸಫಾರಿಗೆ ಇಲಾಖೆ ವಾಹನದಲ್ಲೇ ಕರೆದುಕೊಂಡು ಹೋಗುತ್ತಾರೆ.

ಕರಡಿಧಾಮ‌ ಆರಂಭ

ಕರಡಿಧಾಮ‌ ಆರಂಭ

ದರೋಜಿಯ ಕರಡಿಧಾಮ ಆರಂಭಗೊಂಡಿದ್ದು 1994ರಲ್ಲಿ. ಇದರ ಒಟ್ಟು ವಿಸ್ತೀರ್ಣ 8,272 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಸುಮಾರು 100 ರಿಂದ 125 ಕರಡಿಗಳು ಇಲ್ಲಿವೆ. ಆಗಿನ ಸಚಿವ ಎಂ. ವೈ. ಘೋರ್ಪಡೆ ದರೋಜಿ ಕರಡಿಧಾಮವನ್ನು ಆರಂಭಿಸುವ ಮೂಲಕ ವನ್ಯಜೀವಿ ಪ್ರೇಮ ಮೆರೆದಿದ್ದರು. ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಗಳನ್ನು ಬೆಸೆಯುವ ಈ ಕರಡಿಧಾಮ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

"ನಮ್ಮ ಕರಡಿಧಾಮದಲ್ಲಿ ಕುರುಚಲ ಪ್ರದೇಶ ಲಭ್ಯವಾಗುತ್ತದೆ. ಹಾಗಾಗಿ ವನ್ಯಜೀವಿಗಳು ವಾಸಿಸುವುದಕ್ಕೆ ಅನುಕೂಲವಾಗುತ್ತದೆ. ವಿವಿಧ ಬಗೆಯ ಪಕ್ಷಿಗಳಿವೆ. ಕರಡಿಗೆ ಪೂರಕವಾಗುವ ಗೆದ್ದಿಲ ಹುಳಗಳಿವೆ ಹಾಗಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರಡಿಗಳಿವೆ" ಎನ್ನುತ್ತಾರೆ ವಲಯ ಅರಣ್ಯಾಧಿಕಾರಿಗಳಾದ ಉಷಾ.

ಕರಡಿ ಸಫಾರಿಗೆ ದರ ಎಷ್ಟು?

ಕರಡಿ ಸಫಾರಿಗೆ ದರ ಎಷ್ಟು?

ಅರಣ್ಯ ಇಲಾಖೆಯವರು ಪ್ರವಾಸಿಗರಿಗೆ ಸಫಾರಿ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಒಬ್ಬರಿಗೆ 400 ರೂ. ಹಾಗೂ ಮಕ್ಕಳಿಗೆ 200 ರೂ. ದರ ನಿಗದಿಪಡಿಸಲಾಗಿದೆ. ಒಟ್ಟು 28 ಕಿಮೀ ಸಫಾರಿಯಲ್ಲಿ ಕರಡಿಧಾಮದಲ್ಲಿನ ಪರಿಸರವನ್ನೂ ಪರಿಚಯಿಸಲಾಗುತ್ತದೆ. ಬರೋಬ್ಬರಿ ಎರಡು ತಾಸಿಗೂ ಹೆಚ್ಚು ಕಾಲದ ಸಫಾರಿ ಇದಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ನೈಸರ್ಗಿಕ ಪರಿಸರವನ್ನು ಉಳಿಸುವ ಹಾಗೂ ಬೆಳೆಸುವ ಮಹತ್ವ, ನೈಸರ್ಗಿಕವಾಗಿ ದೊರೆಯುವ ಹಣ್ಣು ಹಂಪಲುಗಳಿಂದ ಆಹಾರ ಪೂರೈಕೆ ಸೇರಿದಂತೆ ಜೀವವೈವಿಧ್ಯತೆಯನ್ನು ಪರಿಚಯಿಸುವ ಕಾರ್ಯ ಈ ಕರಡಿಧಾಮದಲ್ಲಿ ನಡೆಯುತ್ತಿದೆ.

ವಿವಿಧ ವನ್ಯ ಜೀವಿಗಳ ಪ್ರದೇಶ ಕರಡಿಧಾಮ

ವಿವಿಧ ವನ್ಯ ಜೀವಿಗಳ ಪ್ರದೇಶ ಕರಡಿಧಾಮ

ಈ ಕರಡಿಧಾಮ ಕೇವಲ ಕರಡಿಗಳಿಗೆ ಮಾತ್ರ ಮೀಸಲಾಗಿಲ್ಲ. ಇಲ್ಲಿ ಬೇರೆ-ಬೇರೆ ಪ್ರಾಣಿಗಳು ಸಹ ಇವೆ‌. ಕರಡಿ, ಚಿರತೆ, ಕತ್ತೆ ಕಿರುಬ, ಕಾಡು ಹಂದಿ, ಮುಳ್ಳಹಂದಿ, ನರಿ, ಗುಳ್ಳೆನರಿ, ತೋಳ, ಚುಕ್ಕೆ ಪುನಗು, ಮುಂಗುಸಿ, ಮೊಲ, ನಾನಾ ಪ್ರಬೇಧದ ಬಾವಲಿಗಳು, ನವಿಲು, ಕಲ್ಲುಕೋಳಿ, ಬುರ್ಲ, ಹದ್ದು, ಪಾರಿವಾಳ, ಗಿಳಿ, ಬೆಳ್ಳಕ್ಕಿ, ಗೂಬೆ, ಉಡ, ಆಮೆ, ಚಿಟ್ಟೆಗಳು ಸೇರಿ 150 ಹೆಚ್ಚು ವಿವಿಧ ಪ್ರಕಾರದ ಹಕ್ಕಿಗಳು ಇವೆ.

ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ಕರಡಿಧಾಮಕ್ಕೆ ಸೆಳೆಯುವ ಯೋಜನೆಯನ್ನೂ ಧಾಮದ ಅಧಿಕಾರಿಗಳು ಹಾಕಿಕೊಂಡಿದ್ದಾರೆ. ಹಂಪಿ ಪ್ರವಾಸೋದ್ಯಮದ ಜೊತೆ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕರಡಿಸಫಾರಿ ಆರಂಭಿಸಲಾಗಿದೆ. ಹೀಗಾಗಿ ಹಂಪಿಗೆ ಬರೋ ಪ್ರವಾಸಿಗರು ಕರಡಿ ಸಫಾರಿ ಮಾಡಲೇಬೇಕು.

English summary
Karnataka forest department started the safari services at Daroji bear sanctuary at Vijayanagara district. Bear sanctuary has more than 100 bear and other animals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X