• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್ ಸರಣಿ ರಜೆ: ತುಂಗಭದ್ರಾ ನದಿಯಲ್ಲಿ ಈಜಲು ಹೋದ ಮೂವರು ನೀರುಪಾಲು

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಏಪ್ರಿಲ್ 17: ಲಾಕ್ ಡೌನ್ ನಿಂದಾಗಿ ಸರಣಿ ರಜೆಯಿದ್ದು, ಇಂದು ನದಿಯಲ್ಲಿ ಈಜಲು ಹೋಗಿದ್ದ ಮೂವರು ಕಾರ್ಮಿಕರು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋವೇನಹಳ್ಳಿಯ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಜಿಲ್ಲೆಯ ಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಮಾರ್ಗವಾಗಿ ಹರಿಯುವ ತುಂಗಭದ್ರಾ ಜಲಾಶಯದ ನದಿಯಲ್ಲಿ ಈಜಾಡಲು ಐದು ಮಂದಿ ತೆರಳಿದ್ದು, ಆ ಪೈಕಿ ಮೂವರು ನೀರು ಪಾಲಾಗಿದ್ದಾರೆ.

ರಜೆಯ ಮಜಾ: ಬೆಳಗಾವಿಯಲ್ಲಿ ತಂದೆ ಮಗನ ಸಾವು

ಸೋವೇನಹಳ್ಳಿ ಗ್ರಾಮದ ನಿವಾಸಿ ಕೋಗಳಿ ಮಾರುತಿ (23) ಮಲ್ಲಿನಕೆರೆ ಸುರೇಶ (25) ಹಾಗೂ ಹಂಪಸಾಗರ ಗ್ರಾಮದ ಪಿ.ಫಕರುದ್ದೀನ್ (25) ಎಂಬುವರು ನೀರು ಪಾಲಾಗಿದ್ದಾರೆ. ಮಲ್ಲಿನಕೆರೆ ಸುರೇಶ ಎಂಬಾತನು ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿದ್ದರು. ಉಳಿದ ಇಬ್ಬರು ಕೂಲಿ ಕಾರ್ಮಿಕರಾಗಿದ್ದಾರೆ. ನೀರು ಪಾಲಾದ ಮೃತದೇಹಗಳ ಪತ್ತೆಗೆ ಹಡಗಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Three workers who went to swim in tungabhadra river in huvinahadagali has drowned in water today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X