• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ಮೂವರ ಬಂಧನ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಅಕ್ಟೋಬರ್ 27: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದ ಮೂರು ಜನ ಆರೋಪಿಗಳನ್ನು ಬಳ್ಳಾರಿ ಪೊಲೀಸರು ಇಂದು ಬಂಧಿಸಿದ್ದಾರೆ.

ನಗರದ ಸಿದ್ದಾರ್ಥ ಕಾಲೋನಿಯ, ಶ್ರೀಹರಿ ನಿಲಯ ಅಪಾರ್ಟ್ ಮೆಂಟ್ ನ ಮನೆಯೊಂದರಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಮನೆಯ ದಾಳಿ ನಡೆಸಿ ಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಐಪಿಎಲ್ ಬೆಟ್ಟಿಂಗ್; ಹುಬ್ಬಳ್ಳಿಯಲ್ಲಿ ಮೂವರು ಅರೆಸ್ಟ್ಐಪಿಎಲ್ ಬೆಟ್ಟಿಂಗ್; ಹುಬ್ಬಳ್ಳಿಯಲ್ಲಿ ಮೂವರು ಅರೆಸ್ಟ್

ಜಿಲ್ಲಾ ಎಸ್ಪಿ ಸೈದುಲು ಅದಾವತ್ ಅವರ ಮಾರ್ಗದರ್ಶನದಲ್ಲಿ ಗಾಂಧಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಜಿ.ಆರ್.ಷಣ್ಮುಖಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ಎಸ್.ರಮೇಶ್, ಅಲಾಂ ಭಾಷ ಮತ್ತು ಬಾಲಾಜಿ ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರಿಂದ ರೂ 7,00,000 ನಗದು ಹಾಗೂ ಮೂರು ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಅಲ್ಲದೇ ದಾಳಿಯ ಸಂದರ್ಭ ಇನ್ನೂ ಇಬ್ಬರು ಆರೋಪಿಗಳಾದ ಹನುಮಂತ ರೆಡ್ಡಿ, ನಲ್ಲ ರಾಜು ಎಂಬುವರು ಪರಾರಿಯಾಗಿದ್ದಾರೆ. ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Ballari police have arrested three accused who involved in IPL cricket betting
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X