• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆದೇಶಕ್ಕೂ ಕಿಮ್ಮತ್ತಿಲ್ಲ; ದೇವರಗುಡ್ಡದ ಬಡಿಗೆ ಬಡಿದಾಟದಲ್ಲಿ ಜನವೋ ಜನ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಅಕ್ಟೋಬರ್ 27: ಗಣಿ ಜಿಲ್ಲೆಯ ಭಕ್ತರ ಆರಾಧ್ಯ ದೈವ, ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಲಗುಂದ ಮಂಡಲದ ಮಾಳವಿ ಮಲ್ಲೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ದಸರಾ ಹಬ್ಬದ ನಿಮಿತ್ತ ದೇವರಗುಡ್ಡದ ಬಡಿಗೆ ಬಡಿದಾಟ (ಬನ್ನಿ ಉತ್ಸವ) ಹಬ್ಬವು ಅ.26ರಂದು ಜೋರಾಗಿ ನಡೆಯಿತು.

ಕೋವಿಡ್ ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಹಬ್ಬದ ಪ್ರಯುಕ್ತ ನಡೆಯುವ ದೇವರಗುಡ್ಡದ ಬಡಿಗೆ ಬಡಿದಾಟವನ್ನು ರದ್ದುಪಡಿಸಲಾಗಿತ್ತು. ಆದರೆ ಅದನ್ನು ಲೆಕ್ಕಿಸದೇ ಸಾವಿರಾರು ಭಕ್ತರು ಬಡಿಗೆ ಬಡಿದಾಟದಲ್ಲಿ ಪಾಲ್ಗೊಂಡಿದ್ದರು.

 ಕೊರೊನಾ ನಡುವೆಯೂ ಮೈಸೂರಲ್ಲಿ ವರಮಹಾಲಕ್ಷ್ಮಿ ಹಬ್ಬದ ಖರೀದಿ ಜೋರು ಕೊರೊನಾ ನಡುವೆಯೂ ಮೈಸೂರಲ್ಲಿ ವರಮಹಾಲಕ್ಷ್ಮಿ ಹಬ್ಬದ ಖರೀದಿ ಜೋರು

ಯಾರೊಬ್ಬರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸಿದ್ದು ಕಂಡುಬರಲಿಲ್ಲ.

   Rishab Pant ಅವರನ್ನು ODI ಹಾಗು T20 ಇಂದ ಕೈ ಬಿಟ್ಟ BCCI | Oneindia Kannada

   ಕರ್ನಾಟಕದ ಗಣಿನಾಡು ಬಳ್ಳಾರಿ ಜಿಲ್ಲೆ ಸೇರಿದಂತೆ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಈ ಬಡಿಗೆ ಬಡಿದಾಟ ಉತ್ಸವಕ್ಕೆ ಆಗಮಿಸಿದ್ದರು. ಕರ್ನೂಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಫಕೀರಪ್ಪ ಕಾಗಿನೆಲ್ಲಿ, ಡಿಎಸ್ ಪಿ ಕೆ.ಎಸ್.ವಿನೋದಕುಮಾರ, ಕಾರ್ಮಿಕ ಸಚಿವ ಗುಮ್ಮನೂರು ಜಯರಾಂ ಹಾಗೂ ಆದೋನಿ ತಾಲೂಕಿನ ಆರ್ ಡಿಓ ಜಿ.ರಾಮಕೃಷ್ಣಾರೆಡ್ಡಿ ಅವರು ಹೆಚ್ಚು ಜನ ಸೇರದಂತೆ ಮನವಿ ಮಾಡಿಕೊಂಡಿದ್ದರು. ಬಡಿಗೆ ಬಡಿದಾಟ ಹಬ್ಬವನ್ನೂ ರದ್ದು ಪಡಿಸಿ ಆದೇಶ ಹೊರಡಿಸಿದ್ದರು. ಆದರೆ ಆ ಆದೇಶಕ್ಕೆ ಯಾರೊಬ್ಬರೂ ಕಿವಿಗೊಟ್ಟಂತೆ ಕಾಣಲಿಲ್ಲ.
   English summary
   Due to the increased coronavirus cases, this time, the special tradition of fighting with stick at malavi malleshwara temple of karnool has been canceled. But regardless, thousands of devotees gathered and celebrated dasara,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X