ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ ವಿರೂಪಾಕ್ಷನ ದರ್ಶನ ಪಡೆದು ಪುನೀತರಾದ ಭಕ್ತರು

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಜುಲೈ 05; ಕೋವಿಡ್ ಲಾಕ್‌ಡೌನ್‌ನಿಂದ ಹಲವು ವಿನಾಯಿತಿಗಳನ್ನು ನೀಡಲಾಗಿದೆ. ಸೋಮವಾರದಿಂದ ದೇವಾಲಯಗಳಿಗೆ ಭಕ್ತರು ಭೇಟಿ ನೀಡಲು ಸರ್ಕಾರ ಅವಕಾಶ ನೀಡಿದೆ.

ವಿಜಯನಗರ ಜಿಲ್ಲೆಯ ವಿಶ್ವ ವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾದ ಹಿನ್ನಲೆಯಲ್ಲಿ ದೇವಾಲಯಗಳನ್ನು ತೆರೆಯಲಾಗಿದೆ.

ಪ್ರವಾಸಿಗರ ಭೇಟಿಗೆ ವಿಶ್ವ ವಿಖ್ಯಾತ ಹಂಪಿ ಮುಕ್ತ ಪ್ರವಾಸಿಗರ ಭೇಟಿಗೆ ವಿಶ್ವ ವಿಖ್ಯಾತ ಹಂಪಿ ಮುಕ್ತ

ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ದೇವಾಲಯಗಳನ್ನು ತೆರೆಯಲಾಗಿದೆ. ವಿಜಯನಗರ ಜಿಲ್ಲೆಯಾದ್ಯಂತ ಇರುವ ಎಲ್ಲಾ ಪ್ರಮುಖ ದೇವಾಲಯಗಳಲ್ಲೂ ಭಕ್ತರ ಭೇಟಿಗೆ ಅವಕಾಶವನ್ನು ನೀಡಲಾಗಿದೆ.

ಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲುಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲು

Thousands Of Devotees Come To Hampi Virupaksha Temple

ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ, ಹೂವಿನ ಹಡಗಲಿಯ ಸುಕ್ಷೇತ್ರ ಮೈಲಾರ, ಉಜ್ಜೈನಿ ಶ್ರೀ ಮುರುಳ ಸಿದ್ದೇಶ್ವರ, ಹರಪನಹಳ್ಳಿಯ ಶ್ರೀಕ್ಷೇತ್ರ ಉಚ್ಚೆಂಗಿ ದುರ್ಗಾ ದೇವಾಲಯಗಳನ್ನು ತೆರೆಯಲಾಗಿದೆ.

ಡಾ. ಸಿದ್ದಲಿಂಗಯ್ಯ ನೆನಪು ಮಾಡಿಕೊಂಡ ಹಂಪಿ ಕನ್ನಡ ವಿವಿ ಡಾ. ಸಿದ್ದಲಿಂಗಯ್ಯ ನೆನಪು ಮಾಡಿಕೊಂಡ ಹಂಪಿ ಕನ್ನಡ ವಿವಿ

ಕಳೆದ ಎರಡು ತಿಂಗಳಿಂದ ದೇವಾಲಯಗಳನ್ನು ಮುಚ್ಚಲಾಗಿತ್ತು. ದೇವರ ದರ್ಶನಕ್ಕೆ ಅನುಮತಿ ನೀಡಿರುವುದರಿಂದ ಭಕ್ತರಲ್ಲಿ ಸಂತಸ ಮನೆ ಮಾಡಿದೆ. ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

ಸರ್ಕಾರದ ಮಾರ್ಗಸೂಚಿಯಂತೆ ದೇವಾಲಯಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಲು ಸಹ ವ್ಯವಸ್ಥೆ ಮಾಡಲಾಗಿದೆ.

ದೇವಾಲಯದ ಬಾಗಿಲು ತೆರೆದ ಹಿನ್ನಲೆಯಲ್ಲಿ ರಂಗೋಲಿಗಳನ್ನು ಹಾಕಿ ಸಿಂಗರಿಸಲಾಗಿತ್ತು. ಭಕ್ತರು ಎರಡು ತಿಂಗಳ ಬಳಿಕ ದೇವರ ದರ್ಶನ ಮಾಡಿ ಪುನೀತರಾದರು.

English summary
Karnataka government allowed to open darshan in temple from July 5. Thousands of visitors come to Hampi Virupaksha temple at Vijayanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X