• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನೀಗ ಯಾರಿಗೂ ಬೇಡವಾದ ಶಿಶು, ಆದರೆ ಕೈ ಕಟ್ಟಿ ಕೂರಲ್ಲ: ಅನುಪಮಾ ಶೆಣೈ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಅಕ್ಟೋಬರ್ 9: ನಿತ್ಯ‌ ನಾನಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುತ್ತಿರುವ ನಮ್ಮ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆಯುತ್ತಿದೆ, ನಾನೀಗ ಯಾರಿಗೂ ಬೇಡವಾದ ಶಿಶುವಾಗಿದ್ದೇನೆ, ಆದರೆ ಕೈ ಕಟ್ಟಿ ಕೂರಲ್ಲ ಎಂದು ಅನುಪಮಾ ಶೆಣೈ ತಿಳಿಸಿದ್ದಾರೆ.

ತಳಮಟ್ಟದಿಂದ ಪಕ್ಷವನ್ನು ಇನ್ನೂ ಗಟ್ಟಿಯಾಗಿ ಸಂಘಟಿಸಲು ಮುಂದಾಗಿದ್ದು, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪದಾಧಿಕಾರಿಗಳ ನೇಮಕಾತಿಗೆ ಚಾಲನೆ ನೀಡಿರುವೆ ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷೆ ಅನುಪಮಾ ಶಣೈ ಅವರು ಹೇಳಿದರು.

ಶಾಸಕ ಭೀಮಾನಾಯ್ಕ್ ವಿರುದ್ಧ ಅಡವಿ ಆನಂದದೇವನಹಳ್ಳಿ ಗ್ರಾಮಸ್ಥರ ಆಕ್ರೋಶ

ಬಳ್ಳಾರಿ ನಗರದಲ್ಲಿ‌ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೀದರ್, ಬಳ್ಳಾರಿ, ಬೆಂಗಳೂರು, ಬೆಳಗಾವಿ ಹಾಗೂ ಬಸವಕಲ್ಯಾಣದಲ್ಲಿ ನೇಮಕಾತಿ ಪ್ರಕ್ರಿಯೆ ಬಹುತೇಕ‌ ಪೂರ್ಣಗೊಂಡಿದೆ ಎಂದರು. ಅದರಂತೆ ಎಲ್ಲ ಜಿಲ್ಲೆಗಳಲ್ಲೂ ಪದಾಧಿಕಾರಿಗಳ ನೇಮಕಾತಿ ಮಾಡಲಾಗುವುದು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಯುವ ಮುಖಂಡರು, ಮಹಿಳೆಯರು, ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದವರು ಭಾಗವಹಿಸಬಹುದು ಎಂದು ಕರೆ ನೀಡಿದರು.

ಪಕ್ಷಕ್ಕೆ ಬಂದರೆ ದೊಡ್ಡ ನಾಯಕರಾಗಿ ಬೆಳೆಯಬಹುದು

ಪಕ್ಷಕ್ಕೆ ಬಂದರೆ ದೊಡ್ಡ ನಾಯಕರಾಗಿ ಬೆಳೆಯಬಹುದು

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾದರೆ, ನಿರಂತರ ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ರಾಜಕೀಯ ಮಾಡುವುದು ಸಾಮಾನ್ಯ. ಎರಡನೇ ಹಂತದ ನಾಯಕರು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡವರು, ಮುಂದೆ‌ ಬರಲು ಸಾಧ್ಯವಾಗುವುದಿಲ್ಲ, ಈ ಹಿನ್ನೆಲೆಯಲ್ಲಿ ಅಂತವರು ನಮ್ಮ ಪಕ್ಷಕ್ಕೆ ಬಂದರೆ ಖಂಡಿತ ದೊಡ್ಡಮಟ್ಟದ ನಾಯಕರಾಗಿ ಬೆಳೆಯಬಹುದು ಎಂದರು. ಪೊಲೀಸ್ ಇಲಾಖೆಯಲ್ಲಿ ನನಗೆ ಆದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸಿರುವೆ.ಈ ಕುರಿತು ತನಿಖೆ ನಡೆದು, ನನಗೆ ನ್ಯಾಯ ಸೀಗುವ ವಿಶ್ವಾಸವಿದೆ ಮಾಜಿ ಡಿವೈಎಸ್ಪಿ ಅನುಪಮಾ ಶೈಣೈ ಹೇಳಿದ್ದಾರೆ.

ಭ್ರಷ್ಟಾಚಾರ ರಹಿತವಾಗಿ ಸೇವೆ ಮಾಡಬೇಕು

ಭ್ರಷ್ಟಾಚಾರ ರಹಿತವಾಗಿ ಸೇವೆ ಮಾಡಬೇಕು

ಆದರೆ, ಭ್ರಷ್ಟಾಚಾರ ರಹಿತವಾಗಿ ಸೇವೆ ಮಾಡಬೇಕು ಎಂದು ತಿಳಿಸಿದ ಅವರು, ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಖಂಡಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಇದರಲ್ಲಿ ರಾಜಕೀಯ ಬೇಳೆ‌ ಬೇಯಿಸಿಕೊಳ್ಳುತ್ತಿದ್ದಾರೆ. ಕಾನೂನು ಬಾಹಿರವಾಗಿ ಮಾಡಿದ ವರ್ಗಾವಣೆ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಅಲ್ಲದೆ ಕಾನೂನು ಹೋರಾಟ ಸಹ ಮುಂದುವರಿಸಿರುವೆ. ಸಂಪೂರ್ಣ ತನಿಖೆ ನಡೆದು ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಅಲ್ಲದೆ ಈ ಕುರಿತು ಮೋದಿ ಅವರಿಗೂ ಸಹ ಪತ್ರ ಬರೆದಿರುವೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದರು.

ಅಪರಾಧಿಗಳಿಗೆ ಶಿಕ್ಷೆಯಾಗುವುದು ಕಡಿಮೆ‌

ಅಪರಾಧಿಗಳಿಗೆ ಶಿಕ್ಷೆಯಾಗುವುದು ಕಡಿಮೆ‌

ಈ ಘಟನೆಯನ್ನು‌ ಖಂಡಿಸಿ ಸಂಪೂರ್ಣ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ‌ವಿಧಿಸಲು ಮುಂದಾಗಬೇಕು, ಇಂತಹ ಘಟನೆಗಳು‌ ದೇಶದಲ್ಲಿ‌ ಮತ್ತೆ‌ ಮರುಕಳಿಸದಂತೆ ನೊಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಬಹುತೇಕ ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದು ಕಡಿಮೆ‌ ಎನ್ನುವ ಮಾತುಗಳು ಜನರಿಂದ‌ ಕೇಳಿ ಬರುತ್ತಿದೆ ಎಂದು ಅನುಪಮಾ ಶೆಣೈ ತಿಳಿಸಿದರು.

ಎಲ್ಲವನ್ನು ಮರೆತು ಮುನ್ನುಗ್ಗುವೆ

ಎಲ್ಲವನ್ನು ಮರೆತು ಮುನ್ನುಗ್ಗುವೆ

ನಮ್ಮ ದೇಶದ ‌ಕಾನೂನಿನಲ್ಲಿ ಯಾವುದೇ ಕಾರಣಕ್ಕೂ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂದಿದೆ. ಈ ಕಾರಣಕ್ಕೆ ನಿಜವಾದ ಅಪರಾಧಿಗಳು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸಾಮಾಜಿಕ ಸೇವೆ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿರುವೆ.ಆದರೆ, ದುಡ್ಡಿಲ್ಲದೆ ರಾಜಕೀಯ ಮಾಡುವುದು ಕಷ್ಟ ಎಂಬುದು ನನಗೆ ಅರಿವಾಗಿದೆ. ಆದರೀಗ ನಾನೀಗ ಯಾರಿಗೂ ಬೇಡವಾದ ಶಿಶು, ಹಾಗಂತ ನಾನು ಕೈ ಕಟ್ಟಿರುವುದಿಲ್ಲ. ಹಿಂದಿನ ಪರಿಸ್ಥಿತಿ ನೆನೆಸಿಕೊಂಡು ಕೂರುವುದಿಲ್ಲ. ಎಲ್ಲವನ್ನು ಮರೆತು ಮುನ್ನುಗ್ಗುವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ‌ ತಾಲೂಕು ಘಟಕದ‌ ಅಧ್ಯಕ್ಷ ಹೊನ್ನುರು ಸ್ವಾಮಿ, ಯುವ ಮುಖಂಡ ಟಿ.ವೈ ಮೂರ್ತಿ ಇದ್ದರು.

English summary
"Our Bharatiya Janashakthi Congress Party, which is raising its voice on corruption, is getting good response across the state,' Anupama Shenoy said In Ballari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X