• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮರಳಲ್ಲಿ ಮೂಡುತ್ತಿರುವ ತಾಜ್‍ ಮಹಲ್ ನೋಡಲು ಬನ್ನಿ

|

ಬಳ್ಳಾರಿ, ಜನವರಿ 09 : ಹಂಪಿ ಉತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ವಿವಿಧ ಕಲೆಗಳ ಸಮಾಗಮವು ನಡೆಯುತ್ತದೆ. ಈ ಬಾರಿಯ ಉತ್ಸವದಲ್ಲಿ ಮರಳು ಕಲಾ ಪ್ರದರ್ಶನವನ್ನು ಬಳ್ಳಾರಿ ಜಿಲ್ಲಾಡಳಿತ ಆಯೋಜನೆ ಮಾಡಿದೆ.

ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ಸಜ್ಜಾಗುತ್ತಿರುವ ಮರಳು ಕಲಾ ಪ್ರದರ್ಶನವು ಈ ಬಾರಿಯ ಮುಖ್ಯ ಆಕರ್ಷಣೆ. ಒಡಿಶಾಸದ ಕಲಾವಿದ ನಾರಾಯಣ ಸಾಹು ನೇತೃತ್ವದ ತಂಡವು ವಿವಿಧ ಕಲಾಕೃತಿಗಳನ್ನು ರಚನೆ ಮಾಡುತ್ತಿದೆ.

ಆಗಸದಿಂದ ಹಂಪಿ ಸೌಂದರ್ಯ ಸವಿಯಲು 'ಹಂಪಿ ಬೈಸ್ಕೈ'

ಮರಳಿನಲ್ಲಿ ಹಂಪಿ ವಿರುಪಾಕ್ಷ ದೇವಾಲಯದ ಗೋಪುರ, ಉಗ್ರ ನರಸಿಂಹ, ಆನೆಲಾಯ ಮತ್ತು ಹಂಪಿಯ ಕಲ್ಲಿನ ರಥದ ಜೊತೆಗೆ ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್ ಮಹಲ್ ನಿರ್ಮಾಣ ಮಾಡಲಾಗುತ್ತಿದೆ.

ಹಂಪಿ ಉತ್ಸವ ಆಚರಣೆ ಬಗ್ಗೆ ಬಿಜೆಪಿ ನಿರ್ಲಕ್ಷ್ಯ, ಕಾಂಗ್ರೆಸ್ ವಕ್ತಾರರಿಂದ ಖಂಡನೆ

ಜನವರಿ 10ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2020ನೇ ಸಾಲಿನ ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮರಳು ಕಲಾ ಪ್ರದರ್ಶನವು ಎರಡು ದಿನಗಳ ಕಾಲ ನಡೆಯುವ ನಡೆಯುವ ಹಂಪಿ ಉತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ.

ಕೊನೆಗೂ ಹಂಪಿ ದೇವಾಲಯ ಕಂಬಗಳನ್ನು ಬೀಳಿಸಿದ್ದವರೇ ನಿಲ್ಲಿಸಿದರು

ಮರಳು ಕಲಾ ಪ್ರದರ್ಶನ

ಮರಳು ಕಲಾ ಪ್ರದರ್ಶನ

ಜನವರಿ 10ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2020ನೇ ಸಾಲಿನ ಹಂಪಿ ಉತ್ಸವ ಉದ್ಘಾಟಿಸಲಿದ್ದಾರೆ. ಮರಳು ಕಲಾ ಪ್ರದರ್ಶನವು ಎರಡು ದಿನಗಳ ಕಾಲ ನಡೆಯುವ ನಡೆಯುವ ಹಂಪಿ ಉತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ. ಉಗ್ರ ನರಸಿಂಹ, ಆನೆಲಾಯ ಮತ್ತು ಹಂಪಿಯ ಕಲ್ಲಿನ ರಥದ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಗಣಿ ನಾಡಿನಲ್ಲಿ ಮತ್ಸ್ಯ ಮೇಳ

ಗಣಿ ನಾಡಿನಲ್ಲಿ ಮತ್ಸ್ಯ ಮೇಳ

ಹಂಪಿ ಉತ್ಸವದ ಅಂಗವಾಗಿ ಈ ಬಾರಿ ವಿಶೇಷವಾಗಿ ಮತ್ಸ್ಯಮೇಳ ಆಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಬಳ್ಳಾರಿ ಹಾಗೂ ಮೀನುಗಾರಿಕೆ ವತಿಯಿಂದ ಆಯೋಜಿಸಲಾಗಿರುವ ಮತ್ಸ್ಯಮೇಳ ಹಂಪಿಯ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ನಡೆಯಲಿದೆ.

ಜನವರಿ 10ರಂದು ಮತ್ಸ್ಯಮೇಳ ಉದ್ಘಾಟನೆಯಾಗಲಿದೆ. ಮೇಳದಲ್ಲಿ 11 ಅಡಿಯ ಸುರಂಗ ಮಾದರಿಯ ಅಕ್ವೇರಿಯಮ್ ನಿರ್ಮಿಸಲಾಗಿದೆ. 50ಕ್ಕೂ ಹೆಚ್ಚು ಫಿಶ್‌ ಟ್ಯಾಂಕ್‌ಗಳಲ್ಲಿ 10 ರಿಂದ 15 ಬಗೆಬಗೆಯ ಜಾತಿಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ.

ಅಂತಿಮ ಹಂತದ ಸಿದ್ಧತೆಗಳು

ಅಂತಿಮ ಹಂತದ ಸಿದ್ಧತೆಗಳು

ಎರಡು ದಿನಗಳ ಹಂಪಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹಂಪಿ ಬೈಸ್ಕೈ, ಸಾಸುವೆಕಾಳು ಗಣಪ ಮುಂಭಾಗದಲ್ಲಿ ಸಾಹಸಕ್ರೀಡೆಗಳು, ಕಮಲಾಪುರ ಕೆರೆಯಲ್ಲಿ ಪಾರಂಪರಿಕ ಸ್ಪರ್ಧೆ, ಮಾತಂಗಪರ್ವತ ಮೈದಾನದ ಆವರಣದಲ್ಲಿ ಮತ್ಸ್ಯಮೇಳ, ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ರಂಗೋಲಿ ಹಾಗೂ ಮೆಹಂದಿ ಪ್ರದರ್ಶನ ಮುಂತಾದ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಹಂಪಿ ಉತ್ಸವದ ಸಮಾರೋಪ ಸಮಾರಂಭ ಜನವರಿ 11ರಂದು ಸಂಜೆ 6ಕ್ಕೆ ಕೃಷ್ಣದೇವರಾಯ ವೇದಿಕೆಯಲ್ಲಿ ನಡೆಯಲಿದೆ.

ಕೇಂದ್ರ ಸಚಿವರಾದ ಪ್ರಲ್ಹಾದ್‍ ಸಿಂಗ್ ಪಟೇಲ್, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Hampi Utsav 2020 will be held from January 10 and 11. Taj Mahal by sand sculpture main attraction of two days utsav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more