ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಕೋ: ಐಎಫ್‍ಎಸ್‍ಸಿ ಸಂಖ್ಯೆ ಪಡೆದ ಉತ್ತರ ಕರ್ನಾಟಕದ ಪ್ರಥಮ ಸಹಕಾರಿ ಬ್ಯಾಂಕ್

|
Google Oneindia Kannada News

ಬಳ್ಳಾರಿ, ಮಾರ್ಚ್, 09: ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕ್‍ಆಗಿರುವ ಸುಕೋ ಬ್ಯಾಂಕ್ ಬ್ಯಾಂಕಿಂಗ್‍ಕ್ಷೇತ್ರದ ಹಣ ವರ್ಗಾವಣೆಯ ವ್ಯವಸ್ಥೆಯಾದ RTGSನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ನೇರ ಸದಸ್ಯತ್ವ ಪಡೆದು ಎಲೆಕ್ಟ್ರಾನಿಕ ಹಣ ವರ್ಗಾವಣೆಯಲ್ಲಿ ಎಲ್ಲಾ ವಾಣಿಜ್ಯ ಬ್ಯಾಂಕುಗಳಂತೆ ನೇರ ಭಾಗಿಯಾಗಲು ಅರ್ಹತೆ ಪಡೆದಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕದ 259 ಸಹಕಾರಿ ಬ್ಯಾಂಕ್‍ಗಳ ಪೈಕಿ ಸ್ವತಂತ್ರವಾದ ಐಎಫ್‍ಎಸ್‍ಸಿ ಸಂಖ್ಯೆ ಪಡೆದ ಉತ್ತರ ಕರ್ನಾಟಕದ ಪ್ರಪ್ರಥಮ ಬ್ಯಾಂಕ್ ಮತ್ತು ರಾಜ್ಯದ ಎರಡನೇಯ ಪಟ್ಟಣ ಸಹಕಾರಿ ಬ್ಯಾಂಕ್ ಆಗಿದೆ ಎಂದು ಅವರು ವಿವರಿಸಿದರು.

ಸುಕೋ ಬ್ಯಾಂಕ್ ಶೀಘ್ರದಲ್ಲೇ ತನ್ನ 28 ಶಾಖೆಗಳಲ್ಲೂ ಸ್ವತಂತ್ರವಾದ ಪ್ರತ್ಯೇಕ IFSC ದ ವ್ಯವಹಾರ ನಡೆಸಲಿದೆ. ಹಲವಾರು ಗ್ರಾಹಕರು ಸ್ವತಂತ್ರವಾದ ಐಎಫ್‍ಎಸ್‍ಸಿ ಸಂಖ್ಯೆಯನ್ನು ನಮೂದು ಮಾಡಿ ದೇಶದ ಬೇರೆ ಬೇರೆ ಬ್ಯಾಂಕ್‍ಗಳಿಂದ ನಮ್ಮ ಬ್ಯಾಂಕ್‍ನ 28 ಶಾಖೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

Suko Bank first bank from North Karnataka to get IFSC code

ನಮ್ಮ ಶಾಖೆಗಳಿಂದ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಗ್ರಾಹಕರ ಸೇವೆಗೆ ಅರ್ಪಣೆ ಮಾಡಲಾಗುತ್ತದೆ. ಗ್ರಾಹಕರು ತ್ವರಿತವಾಗಿ ಹಣವನ್ನು ವಿಲೇವಾರಿ ಮಾಡಲು ದಿನದ24 ತಾಸುಗಳ ಕಾಲ RGTSಅಥವಾ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ NEFTಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Suko Bank first bank in co operative sector from North Karnataka to get IFSC code.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X