ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯುಸಿ ಫಲಿತಾಂಶ:ಕೊಟ್ಟೂರಿನ 'ಇಂದೂ' ಕಾಲೇಜಿಗೆ 9 Rank

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಏಪ್ರಿಲ್ 15 : ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಒಟ್ಟು ಟಾಪ್ 10ರಲ್ಲಿ 9 ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸೋಮವಾರ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿರುವುದು ವಿಶೇಷ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಕಾಲೇಜಿನ ಕುಸುಮಾ ಉಜ್ಜಿನಿ (594), ಹೊಸಮನಿ ಚಂದ್ರಪ್ಪ (591), ನಾಗರಾಜ್ (591), ಎಸ್ ಓಮೇಶ್ (591), ಕೆಜಿ ಸಚಿನ್ (589), ಹರಿಜನಸೊಪ್ಪಿನ ಹುಚ್ಚೆಂಗಮ್ಮ (588), ನಂದೀಶ್ ಮಠದ (588) ಮತ್ತು ಸರಸ್ವತಿ ಅಂಗಡಿ (587) ರಾಜ್ಯದಲ್ಲಿಯೇ ಅತಿ ಹೆಚ್ಚು ಅಂಕ ಪಡೆದಿದ್ದಾರೆ.

Students of Indu PU college from Kottur got 9 ranks

ದ್ವಿತೀಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್ದ್ವಿತೀಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್

ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತದಲ್ಲಿ 96 ಅಂಕ ಪಡೆದುಕೊಂಡಿದ್ದಾರೆ. ಐಚ್ಛಿಕ ಕನ್ನಡ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಮೂರು ವಿಷಯದಲ್ಲೂ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕೊನೆಯದಾಗಿ ಶಿಕ್ಷಣದಲ್ಲಿ 99 ಅಂಕವನ್ನು ಪಡೆದುಕೊಂಡಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿಗೆ ಪ್ರಥಮ ಸ್ಥಾನ

ಕುಸುಮ ಉಜ್ಜಿನಿ ಅವರು ದೇವೇಂದ್ರಪ್ಪ-ಜಯಮ್ಮ ದಂಪತಿಯ ಪುತ್ರಿಯಾಗಿದ್ದು, ದೇವೇಂದ್ರಪ್ಪ ಅವರು ಸೈಕಲ್ ಪಂಕ್ಚರ್ ಶಾಪ್ ನಡೆಸಿ ಜೀವನ ನಡೆಸುತ್ತಿದ್ದಾರೆ. ತಮ್ಮ ಯಶಸ್ಸಿಗೆ ಪೋಷಕರ ಆಶೀರ್ವಾದ ಮತ್ತು ಶಿಕ್ಷಕ, ಸ್ನೇಹಿತರ ಪ್ರೋತ್ಸಾಹವೇ ಕಾರಣ ಎಂದು ಕುಸುಮ ಹೇಳಿದ್ದಾರೆ.

English summary
PUC Examination Results-2019:Students of Indu PU college from Kottur got 9 ranks in the arts department.These students have the highest score in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X