ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಂದೆಯ ಸಾವಿನ ದುಃಖದಲ್ಲಿಯೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಜುಲೈ 23: ತಂದೆಯ ಸಾವಿನ ದುಃಖದಲ್ಲಿಯೇ ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ನಡೆದಿದೆ.

ಸಣ್ಣ ಓಬಯ್ಯ (51) ಎಂಬ ವ್ಯಕ್ತಿ ಬುಧವಾರ ರಾತ್ರಿ ಬಳ್ಳಾರಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್​ಗೆ ಮೃತಪಟ್ಟಿದ್ದರು. ತಂದೆಯ ಸಾವಿನ ದುಃಖದಿಂದ ಕೂಡಿದ್ದರಿಂದ ಮಗಳು ಚಂದನಾಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ‌ ಬರೆಯುವ ಮನೋಸ್ಥಿತಿ ಇರಲಿಲ್ಲ.

ಚಿಕ್ಕಮ್ಮ ಗಿರಿಜಾ ಹಾಗೂ ಚಿಕ್ಕಪ್ಪ ಅಂಜಿನಪ್ಪ ಮನೆಯಲ್ಲಿ ದುಃಖದಲ್ಲಿದ್ದ ಚಂದನಾಳನ್ನು ಸಮಾಧಾನಪಡಿಸಿ, ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದ್ದಾರೆ.

Vijayanagara: Student Wrote SSLC Exam In The Grief Of Her Fathers Death In Hosahatti

ಗುರುವಾರದಂದು ಹಿರೇಮಠ ವಿದ್ಯಾಪೀಠದ ಪದವಿ ಪೂರ್ವ ಕಾಲೇಜಿನಲ್ಲಿ ದುಃಖತಪ್ತ ಚಂದನಾ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆ ಮುಗಿಸಿದ ನಂತರ ಚಂದನ ಮಧ್ಯಾಹ್ನ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಳೆ.

ಕೂಡ್ಲಿಗಿ ತಾಲೂಕಿನ ಹೊಸಹಟ್ಟಿ ಗ್ರಾಮದ ಮೃತ ಓಬಯ್ಯ ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದು, ತಂದೆ ಸಾವಿನ ದುಃಖದಲ್ಲಿಯೂ ವಿದ್ಯಾರ್ಥಿನಿ ಚಂದನಾ ಪರೀಕ್ಷೆ ಬರೆದಿದ್ದಾಳೆ.

English summary
student wrote the SSLC exam in the grief of her father's death at Hosahhatti village in Kudligi taluk in Vijayanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X