ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರ ಹಂಪಿಯಲ್ಲಿ!

|
Google Oneindia Kannada News

Recommended Video

ಹಂಪಿಯಲ್ಲಿ ರಾಜ್ಯದ 3ನೇ ಹುಲಿ ಸಫಾರಿ ಕೇಂದ್ರ ಸದ್ಯದಲ್ಲೇ ಆರಂಭ | Oneindia Kannada

ಬಳ್ಳಾರಿ, ಸೆಪ್ಟೆಂಬರ್ 19: ಹಂಪಿಯಲ್ಲಿ ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರ ಆರಂಭವಾಗಲಿದೆ, ಶೀಘ್ರದಲ್ಲಿ ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಹತ್ತಿರದಿಂದ ಹುಲಿಗಳನ್ನು ನೋಡುವ ಅವಕಾಶ ದೊರೆಯಲಿದೆ.

ಹುಲಿಗಳನ್ನು ನೋಡಲು ಬನ್ನೇರುಘಟ್ಟ, ಶಿವಮೊಗ್ಗ ಜಿಲ್ಲೆಯಲ್ಲಿರುವ ತಾವರೆಕೊಪ್ಪಕ್ಕೆ ಹೋಗಬೇಕಿತ್ತು ಆದರೆ ಇನ್ನುಮುಂದೆ ಹಂಪಿಯಲ್ಲೂ ನೋಡಬಹುದಾಗಿದೆ, ಹಂಪಿ ಬಳಿ ಇರುವ ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ ನಲ್ಲಿ ಹುಲಿ ಮತ್ತು ಸಿಂಹ ಸಫಾರಿ ಕೇಂದ್ರ ನವೆಂಬರ್ ನಿಂದ ಆರಂಭವಾಗಲಿದೆ.

ಹಂಪಿ ಉತ್ಸವಕ್ಕೆ ಕೊನೆಗೂ ಮುಹೂರ್ತ ಫಿಕ್ಸ್‌ ಹಂಪಿ ಉತ್ಸವಕ್ಕೆ ಕೊನೆಗೂ ಮುಹೂರ್ತ ಫಿಕ್ಸ್‌

ವಾಜಪೇಯಿ ಪಾರ್ಕ್ ನಲ್ಲಿ ತಲೆ ಎತ್ತಲಿರುವ ಸಫಾರಿ ಕೇಂದ್ರ ರಾಜ್ಯದಲ್ಲಿ ಮೂರನೇಯದು ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ, ಈಗಾಗಲೇ ಹಂಪಿ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದ್ದು ಇನ್ನುಮುಂದೆ ಇನ್ನಷ್ಟು ಆಕ್ಷರ್ಷಣೀಯವಾಗುವುದರ ಜತೆಗೆ ಸಾಕಷ್ಟು ಮಂದಿಯನ್ನು ಆಕರ್ಷಿಸಲಿದೆ, ರಜಾ ದಿನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಭೇಟಿ ನೀಡಬಹುದು.

ಹೋಲ್ಡಿಂಗ್ ಹೌಸ್ ವ್ಯವಸ್ಥೆ ಮಾಡಲಾಗಿದೆ

ಹೋಲ್ಡಿಂಗ್ ಹೌಸ್ ವ್ಯವಸ್ಥೆ ಮಾಡಲಾಗಿದೆ

ಸಫಾರಿ ಕೇಂದ್ರದ ಸುತ್ತಲೂ ಸುಮಾರು 16 ಅಡಿ ಎತ್ತರದ ತಂತಿ ಬೇಲಿ ವ್ಯವಸ್ಥೆ ಮಾಡಲಾಗಿದೆ. ಹುಲಿ ಮತ್ತು ಸಿಂಹಗಳಿಗೆ ಎಂಟು ಹೋಲ್ಡಿಂಗ್ ಹೌಸ್ ನಿರ್ಮಿಸಲಾಗಿದೆ. ಸಫಾರಿಗೆ ಹೋಗುವ ಪ್ರವಾಸಿಗರಿಗೆ ಹುಲಿ ಮತ್ತು ಸಿಂಹ ಕಾಣುವ ಮಾದರಿಯಲ್ಲಿ ಬ್ರೆಕಲ್ ಪ್ರದೇಶವನ್ನು ಒದಗಿಸಲಾಗಿದೆ. ಹುಲಿ ಸಫಾರಿ ಕೇಂದ್ರದ ಒಳಗಡೆ ಮೂರು ಕಿ.ಮೀ ಸಫಾರಿ ಮಾಡಲು ಟ್ರಕ್ ವ್ಯವಸ್ಥೆ ಮಾಡಲಾಗಿದೆ.

ಹಂಪಿ ಉತ್ಸವ ಸಂದರ್ಭದಲ್ಲಿ ಆರಂಭ

ಹಂಪಿ ಉತ್ಸವ ಸಂದರ್ಭದಲ್ಲಿ ಆರಂಭ

ಮೃಗಾಲಯದ ಪ್ರಾಧಿಕಾರ ನವೆಂಬರ್ ನಲ್ಲಿ ನಡೆಯುವ ಹಂಪಿ ಉತ್ಸವ ಸಂದರ್ಭದಲ್ಲಿ ಹುಲಿ ಮತ್ತು ಸಿಂಹಗಳ ಸಫಾರಿ ಕೇಂದ್ರಕ್ಕೆ ಚಾಲನೆ ನೀಡಲು ನಿರ್ಧರಿಸಿದೆ.

ದಶಕಗಳ ಹಂಪಿ ಉತ್ಸವಕ್ಕೆ ಸರ್ಕಾರದ ತಿಲಾಂಜಲಿ? ದಶಕಗಳ ಹಂಪಿ ಉತ್ಸವಕ್ಕೆ ಸರ್ಕಾರದ ತಿಲಾಂಜಲಿ?

ಹುಲಿ ಸಫಾರಿ ಸಿದ್ಧತೆ ಅಂತಿಮ ಹಂತ

ಹುಲಿ ಸಫಾರಿ ಸಿದ್ಧತೆ ಅಂತಿಮ ಹಂತ

ಹುಲಿ ಸಫಾರಿ ಕೇಂದ್ರ ಹಂಪಿಯಲ್ಲಿ ಆರಂಭವಾಗುತ್ತಿದ್ದು, ಎರಡು ಹುಲಿ ಮತ್ತು ಎರಡು ಸಿಂಹವನ್ನು ಬನ್ನೇರುಘಟ್ಟದಿಂದ ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಂಪಿಯ ಅನತಿ ದೂರದಲ್ಲಿನ ಕಮಲಾಪುರ ಬಳಿಯ ಸುಮಾರು 150 ಹೆಕ್ಟೇರ್ ಪ್ರಧೇಶದಲ್ಲಿ ಈ ಪಾರ್ಕ್ ಇದೆ. ಸುಮಾರು 30 ಹೆಕ್ಟೇರ್ ಪ್ರದೇಶದಲ್ಲಿ ಜಿಂಕೆ ಸೇರಿದಂತೆ ಇತರೆ ಪ್ರಾಣಿಗಳ ಸಫಾರಿ ಕೇಂದ್ರ ಆರಂಭಿಸಲಾಗಿದೆ.

ನವೆಂಬರ್ 3ರಿಂದ 5ರವರೆಗೆ ಹಂಪಿ ಉತ್ಸವ

ನವೆಂಬರ್ 3ರಿಂದ 5ರವರೆಗೆ ಹಂಪಿ ಉತ್ಸವ

ನವೆಂಬರ್‌ 3ರಿಂದ 5ರವರೆಗೆ ಮೂರು ದಿನಗಳ ಕಾಲ ಪ್ರತಿ ವರ್ಷದಂತೆ ಅದ್ಧೂರಿಯಾಗಿ ಹಂಪಿ ಉತ್ಸವ ನೆರವೇರಲಿದೆ, ಉತ್ಸವದ ಯಶಸ್ವಿಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಪಿ ಉತ್ಸವಕ್ಕೆಂದೇ 10ಕೋಟಿ ರೂ,ಗಳ ಅನುದಾನವನ್ನು ತೆಗೆದಿರಿಸುತ್ತಿತ್ತು, ಆದರೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಜೆಟ್ ನಲ್ಲಿ ಹಂಪಿ ಉತ್ಸವಕ್ಕೆ ಯಾವುದೇ ಅನುದಾನವನ್ನು ತೆಗೆದಿರಿಸಿರಲಿಲ್ಲ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಂಪನ್ಮೂಲ ಕ್ರೋಢೀಕರಿಸಿ ಹಂಪಿ ಉತ್ಸವ ನೆರವೇರಿಸುವುದಾಗಿ ಹಂಪಿ ಉತ್ಸವ ನಡೆಯಲಿದೆ.

ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ? ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?

English summary
Tiger and lion safari will be resumed in Atal Bihari Vajpayee geological park at Kamalapur near world heritage Hampi in Bellary district from November. Four tigers and lions each will Vajpayee to this park from Mysore Zoo and Bannerughatta national park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X