ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಗಳು ಸಾಕಷ್ಟು ಕಷ್ಟಪಟ್ಟು ಓದಿದಳು. ನಮ್ಮನ್ನೂ ಓದಿಸಿದಳು'

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜೂನ್. 01: "ನಾನು ಕಷ್ಟಪಟ್ಟು ಓದಿದ್ದೆ. ನಿರೀಕ್ಷೆಯಂತೆಯೇ ನಾಲ್ಕನೇ ರಾಂಕ್ ನಲ್ಲಿ ಕೆ-ಸೆಟ್ ಪಾಸಾಗಿರುವೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಖುಷಿ ಆಗುತ್ತಿದೆ. ಒಳ್ಳೆಯ ಫಲಿತಾಂಶ ನನ್ನದು" ಎಂದು ಖುಷಿ ಖುಷಿಯಾಗಿ ಕುಣಿದು - ಕುಪ್ಪಳಿಸುತ್ತ ಮಾತನಾಡಿದರು ಎಸ್.ಆರ್. ಅಪರೂಪ.

ಮೆಡಿಕಲ್, ಇಂಜಿನಿಯರಿಂಗ್ ಬಗ್ಗೆ ಕನಸು ಕಾಣದೇ, ಸಂಶೋಧನಾ ಕ್ಷೇತ್ರದಲ್ಲಿ ದಾಪುಗಾಲಿಡಲು ಆಸಕ್ತಿವಹಿಸಿದ್ದಾರೆ ಅಪರೂಪ.

SR Aparoopa says as expected i got fourth rank in K-set

ಬಳ್ಳಾರಿಯ ಗೌತಮ್ ರೆಡ್ಡಿ (48) ಮತ್ತು ಶೋಭಾರಾಣಿ (42) ಅವರ ಮಗಳಾಗಿರುವ ಎಸ್.ಆರ್. ಅಪರೂಪ, ನಾರಾಯಣ ಕಾಲೇಜಿನ ವಿದ್ಯಾರ್ಥಿ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಈ ವಿದ್ಯಾರ್ಥಿಗೆ, ಸಂಶೋಧನಾ ಕ್ಷೇತ್ರವೆಂದರೆ ಅಚ್ಚುಮೆಚ್ಚು.

ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ‍್ಯಾಂಕ್ಕರ್ನಾಟಕ ಸಿಇಟಿ 2018ರ ಫಲಿತಾಂಶ:ಶ್ರೀಧರ್ ದೊಡ್ಮನಿ ಪ್ರಥಮ ರ‍್ಯಾಂಕ್

ಈ ಕಾರಣಕ್ಕಾಗಿಯೇ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪ್ರವೇಶವನ್ನೂ ಪಡೆದು, ಪೋಷಕರಿಗೆ ತನ್ನ ಭವಿಷ್ಯದ ಗುರಿ - ಕನಸುಗಳೇನೆಂಬುದನ್ನು ಸ್ಪಷ್ಟಪಡಿಸಿದ್ದಾಳೆ.

SR Aparoopa says as expected i got fourth rank in K-set

ಅಪರೂಪ ಅವರ ಸಹೋದರಿ ಎಸ್.ಆರ್. ಅಪೂರ್ವ ಬೆಂಗಳೂರಿನ ಆಚಾರ್ಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ. ಸಹೋದರ ಎಸ್.ಆರ್. ಚನ್ನ ವೀರಾರೆಡ್ಡಿ, ಎಸ್‍ಎಸ್‍ಎಲ್ ಸಿ ವಿದ್ಯಾರ್ಥಿ. ನಿರೀಕ್ಷೆಯಂತೆಯೇ ಸಹೋದರಿ ಕೆ-ಸೆಟ್ ಫಲಿತಾಂಶ ಪಡೆದಿದ್ದಾಳೆ. ಆಕೆಯ ಇಚ್ಛೆಯಂತೆ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.

SR Aparoopa says as expected i got fourth rank in K-set

ಗೌತಮರೆಡ್ಡಿ, ಶೋಭಾರಾಣಿ, ಮಗಳು ಸಾಕಷ್ಟು ಕಷ್ಟಪಟ್ಟು ಓದಿದಳು. ನಮ್ಮನ್ನೂ ಓದಿಸಿದಳು. ಫಲಿತಾಂಶ ಖುಷಿ ಕೊಡುತ್ತಿದೆ. ನಾವೇ ಬದುಕಿನಲ್ಲಿ ಪಾಸಾದಷ್ಟು ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

English summary
SR Aparoopa Said I read hard. As expected i got fourth rank in K-set. Achievement has been rewarded. i am enjoying. i got best result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X