ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ: ರೈಲು ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಫಲಕ ಅಳವಡಿಕೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜೂನ್. 21: ಬಿರುಬಿಸಿಲಿಗೆ ಹೆಸರಾದ ಬಳ್ಳಾರಿಯಲ್ಲಿ ಸೂರ್ಯನ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸಿ, ದೀಪಗಳಿಗೆ ಬಳಕೆ ಮಾಡಿಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ.

ಹೌದು, ಬಳ್ಳಾರಿ ಸೇರಿದಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೇ ವಲಯ ವ್ಯಾಪ್ತಿಯ 'ಎ' ಕೆಟಗರಿ ರೈಲ್ವೆ ನಿಲ್ದಾಣಗಳಾದ ಹೊಸಪೇಟೆ, ಗದಗ, ಹುಬ್ಬಳ್ಳಿ, ಬೆಳಗಾವಿ ರೈಲು ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಫಲಕ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿವಾಜಿನಗರ ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕ ಸೇತುವೆಶಿವಾಜಿನಗರ ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕ ಸೇತುವೆ

ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇದೆ. ಐತಿಹಾಸಿಕ ಮಹತ್ವವೂ ಇದೆ. ಅಷ್ಟೇ ಅಲ್ಲ, ಮಹಾತ್ಮಾಗಾಂಧಿ ಅವರು ಇಲ್ಲಿ ಕೆಲ ಹೊತ್ತು ತಂಗಿ, ಪ್ರವಾಸ ಮುಂದುವರೆಸಿದ್ದಾರೆ. ಅಲ್ಲದೇ, ನಿಲ್ದಾಣದ ಒಳಗಡೆ ರೈಲು ಸಂಚಾರ ಇರುವ ಜಂಕ್ಷನ್ ಆಗಿದೆ.

Solar Power Plate has been set up at Southwest Railway Zone

ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಅವಶ್ಯಕವಿರುವ 120 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ರೈಲು ನಿಲ್ದಾಣದ ಮೊದಲನೇ ಪ್ಲಾಟ್ ಫಾರ್ಮ್ ಮೇಲಿನ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಕಾರ್ಯ ನಡೆದಿದೆ.

ಗ್ರೀನ್ ಸೋಲಾರ್ ಎನರ್ಜಿ ಸಿಸ್ಟಮ್ಸ್' ಸೌರ ಫಲಕಗಳನ್ನು ಸರಬರಾಜು ಮಾಡುವ ಮತ್ತು ಅಳವಡಿಸುವ ಕಾಮಗಾರಿಯ ಗುತ್ತಿಗೆ ಪಡೆದಿದೆ.

ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್, ಸ್ಟೇಷನ್ ಸೂಪರಿಂಟೆಂಡೆಂಟ್, ಡೆಪ್ಯುಟಿ ಸೂಪರಿಂಟೆಂಡೆಂಟ್ ಕಚೇರಿ, ರೈಲ್ವೇ ಪ್ರೊಟೆಕ್ಷನ್ ಫೋರ್ಸ್, ರೈಲ್ವೇ ಪೊಲೀಸ್, ಕಮರ್ಶಿಯಲ್ ಇನ್ಸ್ಪೆಕ್ಟರ್, ಟ್ರಾಫಿಕ್ ಇನ್ಸ್ಪೆಕ್ಟರ್, ಸಿಗ್ನಲ್ ಕಂಟ್ರೋಲ್ ರೂಂ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗ, ರೈಲು ನಿಲ್ದಾಣದ ಎಲ್ಲಾ ಪ್ಲಾಟ್ ಫಾರ್ಮ್ ಗಳು ಸಾಮಾನ್ಯ ಹಾಗೂ ಗಣ್ಯ ಪ್ರಯಾಣಿಕರ ನಿರೀಕ್ಷಣಾ ಕೊಠಡಿ, ರೈಲ್ವೇ ಬುಕಿಂಗ್ ಕೌಂಟರ್, ರೈಲು ನಿಲ್ದಾಣದ ಆವರಣ, ಗೂಡ್ಸ್ ಕಚೇರಿ ಗೆ ಸೋಲಾರ್ ವಿದ್ಯುತ್ ಪೂರೈಕೆ ಆಗಲಿದೆ.

English summary
Sources said that the Solar Power Plate has been set up at Hospet, Gadag, Hubli and Belgaum railway stations. Installation of solar panels on the first platform of the bellary train station has been taken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X