ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸಂಸದ ಶ್ರೀರಾಮುಲು ವಿರುದ್ಧ ಸರ್ಚ್ ವಾರೆಂಟ್

By Mahesh
|
Google Oneindia Kannada News

ಬಳ್ಳಾರಿ, ನ.27: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರೆಂಟ್ ಪಡೆದುಕೊಂಡಿದ್ದ ಬಿಜೆಪಿ ಸಂಸದ ಶ್ರೀರಾಮುಲು ಅವರ ವಿರುದ್ಧ ಸ್ಥಳೀಯ ಕೋರ್ಟ್ ಸರ್ಚ್ ವಾರೆಂಟ್ ಹೊರಡಿಸಿದೆ.

ಬೆಂಗಳೂರು 13ನೇ ಎಸಿಎಂಎಂ ಕೋರ್ಟ್ ಸರ್ಚ್ ವಾರೆಂಟ್ ಜಾರಿಗೊಳಿಸಿದ್ದು, ಶ್ರೀರಾಮುಲು ಅವರ ಮೇಲೆ 2.96 ಕೋಟಿ ರು ಬೆಲೆಯ ಚೆಕ್ ಬೌನ್ಸ್ ಆದ ಆರೋಪವಿದೆ.

ಬಿ.ಎಸ್.ಆರ್ ಪಕ್ಷದ ಮೈಸೂರಿನ ಜಿಲ್ಲಾಧ್ಯಕ್ಷ ಸೋಮಶೇಖರ್ ಎಂಬುವರು ಶ್ರೀರಾಮುಲು ವಿರುದ್ಧ ಚೆಕ್ ಬೌನ್ಸ್ ದೂರು ದಾಖಲಿಸಿದ್ದರು. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಕೋರ್ಟ್ ನೋಟಿಸ್ ಜಾರಿ ಮಾಡಲಾಗಿತ್ತು. ಅದರೆ, ಶ್ರೀರಾಮುಲು ಅವರು ಕೋರ್ಟಿಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ರಾಮುಲು ವಿರುದ್ಧ ವಾರೆಂಟ್ ಜಾರಿ ಮಾಡಿದೆ.

Search warrant against BJP MP Sriramulu in cheating case

ಶ್ರೀರಾಮುಲು ಅವರು ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಕೊಡಿಸುತ್ತೇನೆ ಇಲ್ಲವೆ ನಿನ್ನನ್ನು ಎಂಎಲ್ ಸಿ ಮಾಡುತ್ತೇನೆ ಎಂದು ಭರವಸೆ ನೀಡಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಶ್ರೀರಾಮುಲು ಅವರನ್ನು ಪ್ರಶ್ನಿಸಿದಾಗ ನನಗೆ ಬೆದರಿಕೆ ಒಡ್ಡಿದ್ದಾರೆ. ಶ್ರೀರಾಮುಲು ಅವರು ನನಗೆ ನೀಡಿದ ಚೆಕ್ ನಗದಾಗಿ ಪರಿವರ್ತಿಸಲು ಆಗಿಲ್ಲ. ಹೀಗಾಗಿ ನಾನು ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಸೋಮಶೇಖರ್ ಹೇಳಿದ್ದಾರೆ.

ಶ್ರೀರಾಮುಲು ಪ್ರತಿಕ್ರಿಯೆ: ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬಳ್ಳಾಸಿ ಸಂಸದ ಬಿ. ಶ್ರೀರಾಮುಲು, ಇದು ರಾಜಕೀಯ ಕುತಂತ್ರವಾಗಿದ್ದು, ನನ್ನ ಏಳಿಗೆ ಸಹಿಸದೆ ಪಿತೂರಿ ಮಾಡಿ ಸುಳ್ಳು ಕೇಸ್ ಹಾಕಿದ್ದಾರೆ. ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಯಾವುದೇ ಸದಸ್ಯರಿಗೂ ನಾನು ಮೋಸ ಮಾಡಿಲ್ಲ ಎಂದಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಶ್ರೀರಾಮುಲು ಅವರು ಬಿಜೆಪಿ ತೊರೆದು ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. ನಂತರ ಬಿಜೆಪಿಗೆ ಮರಳಿ ಸಂಸದರಾಗಿದ್ದಾರೆ. (ಪಿಟಿಐ)

English summary
A court here in Ballari issued a search warrant against BJP Lok Sabha member B Sriramulu in connection with a case of cheating filed against him in April. The Additional Chief Metropolitan Magistrate ordered the issue of search warrant as neither Sriramulu nor his advocate were present when the matter came up before the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X