ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾಹಕ್ಕೆ ಬಳ್ಳಾರಿಗೆ ಹೋಗುವೆ ಎಂದ ರೆಡ್ಡಿಗೆ ಕೋರ್ಟ್ ಹೇಳಿದ್ದೇನು?

|
Google Oneindia Kannada News

ಬಳ್ಳಾರಿ, ನವೆಂಬರ್ 17 : 'ನೀವು ಹೀಗಿ ಮದುವೆ ಕಾರ್ಯಕ್ರಮಕ್ಕೆ ಹೋಗಲು ಆರಂಭಿಸಿದರೆ ಅದಕ್ಕೆ ಕೊನೆಯೇ ಇರುವುದಿಲ್ಲ' ಎಂದು ಹೇಳಿರುವ ಸುಪ್ರೀಂಕೋರ್ಟ್ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಗೆ ಮೂರು ದಿನಗಳ ಕಾಲ ಭೇಟಿ ನೀಡಲು ಒಪ್ಪಿಗೆ ನೀಡಿದೆ.

ಗಾಲಿ ರೆಡ್ಡಿಗೆ ಮತ್ತೊಂದು ಆಘಾತ, ಮಗಳ ಮದ್ವೆ ಸಿಬಿಐ ತನಿಖೆಗೆ?ಗಾಲಿ ರೆಡ್ಡಿಗೆ ಮತ್ತೊಂದು ಆಘಾತ, ಮಗಳ ಮದ್ವೆ ಸಿಬಿಐ ತನಿಖೆಗೆ?

ಮದುವೆಗೆ ಹೋಗಲು ಒಪ್ಪಿಗೆ ನೀಡಿ ಎಂದು ಜನಾರ್ದನ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಒಪ್ಪಿಗೆಯಂತೆ ನವೆಂಬರ್ 23 ರಿಂದ 26ರ ತನಕ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಬಹುದಾಗಿದೆ.

ಜನಾರ್ದನ ರೆಡ್ಡಿ ಜಾಮೀನು ರದ್ದುಗೊಳಿಸಲು ಎಸ್‌ಐಟಿ ಅರ್ಜಿಜನಾರ್ದನ ರೆಡ್ಡಿ ಜಾಮೀನು ರದ್ದುಗೊಳಿಸಲು ಎಸ್‌ಐಟಿ ಅರ್ಜಿ

SC allows Janardhana Reddy to attend marriage in Ballari

ಬಳ್ಳಾರಿಯಲ್ಲಿ ಸಂಬಂಧಿಕರ ವಿವಾಹಕ್ಕೆ ಹೋಗಲು ಅನುಮತಿ ನೀಡಬೇಕು ಎಂದು ಜನಾರ್ದನ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಸೂಚನೆ ಬಳಿಕ ಮುಂದಿನ ದಿನದಲ್ಲಿ ಇಂತಹ ಅರ್ಜಿ ಸಲ್ಲಿಸುವುದಿಲ್ಲ ಎಂದು ರೆಡ್ಡಿ ಪರ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ.

ಚಿತ್ರಗಳು : ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ದೀಪಾವಳಿ ಆಚರಣೆಚಿತ್ರಗಳು : ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ದೀಪಾವಳಿ ಆಚರಣೆ

ದೀಪಾವಳಿ ಮತ್ತು ದಸರಾ ಆಚರಣೆ ಮಾಡಲು ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿ ನೀಡಲು ಅನುಮತಿ ಕೇಳಿದ್ದರು. ಕೋರ್ಟ್ ಅನುಮತಿ ನೀಡಿತ್ತು. ಈಗ ವಿವಾಹಕ್ಕೆ ಹೋಗಲು ಮನವಿ ಮಾಡಿ ಒಪ್ಪಿಗೆ ಪಡೆದಿದ್ದಾರೆ.

2015ರ ಜನವರಿ 1ರಂದು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡುವಾಗ ನ್ಯಾಯಾಲಯ ಬಳ್ಳಾರಿ, ಅನಂತಪುರ ಮತ್ತು ಕಡಪ ಜಿಲ್ಲೆಗಳಿಗೆ ಭೇಟಿ ನೀಡದಂತೆ ಷರತ್ತು ಹಾಕಿತ್ತು. ಆದ್ದರಿಂದ, ಬಳ್ಳಾರಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

English summary
Supreme Court granted another opportunity to former minister and mining baron G.Janardhana Reddy to visit Ballari for four days to attend a marriage. Reddy will visit Ballari on November 23 to 26, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X