ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್ 14, 21, 25ರಂದು ಸರಳ ಸಪ್ತಪದಿ ಸಾಮೂಹಿಕ ವಿವಾಹ, ಷರತ್ತುಗಳು

|
Google Oneindia Kannada News

ಹೊಸಪೇಟೆ, ಜುಲೈ 22; ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ 'ಸಪ್ತಪದಿ' ಉಚಿತ ಸರಳ ಸಾಮೂಹಿಕ ವಿವಾಹಕ್ಕೆ ಯೋಜನೆಯನ್ನು ಮತ್ತೆ ಆರಂಭಿಸಿದೆ. ವಧು-ವರರು ಮದುವೆಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆಗಸ್ಟ್ 14, 21 ಮತ್ತು 25ರಂದು ವಿವಾಹಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.

ವಿಜಯನಗರ ಜಿಲ್ಲಾಡಳಿತ ಈ ಕುರಿತು ಪ್ರಕಟಣೆ ಹೊರಡಿಸಿದೆ. ಕೊಟ್ಟೂರು, ಕುರವತ್ತಿ, ಮೈಲಾರ ದೇವಸ್ಥಾನಗಳಲ್ಲಿ ಸರಳ ಸಾಮೂಹಿಕ ವಿವಾಹಗಳು ನಿಗದಿ ದಿನಾಂಕದಲ್ಲಿ ನಡೆಯಲಿವೆ. ವಧು-ವರರು ಹೆಸರು ನೋಂದಾಯಿಸಿಕೊಳ್ಳಲು ಷರತ್ತುಗಳನ್ನು ಸಹ ಹಾಕಲಾಗಿದೆ. ಹೆಸರು ನೋಂದಣಿ ಬಳಿಕ ಆಕ್ಷೇಪಣೆಗಳನ್ನು ಆಹ್ವಾನಿಸಿ, ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಅನಾಥ ಯುವತಿ ಜೊತೆ ಸಪ್ತಪದಿ ತುಳಿದ ಕುಮಟಾ ಯುವಕ! ಅನಾಥ ಯುವತಿ ಜೊತೆ ಸಪ್ತಪದಿ ತುಳಿದ ಕುಮಟಾ ಯುವಕ!

ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆ ವ್ಯಾಪ್ತಿಗೆ ಬರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ, ಕೊಟ್ಟೂರಿನ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಹಾಗೂ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ನಡೆಯಲಿದೆ.

ಸಪ್ತಪದಿ ಯೋಜನೆಗೆ ಮರುಚಾಲನೆ; ಸಾಮೂಹಿಕ ವಿವಾಹಸಪ್ತಪದಿ ಯೋಜನೆಗೆ ಮರುಚಾಲನೆ; ಸಾಮೂಹಿಕ ವಿವಾಹ

Saptapadi Vivah Yojana Name Registration And Conditions

ನಿಗದಿತ ದಿನಾಂಕದಂದು 100 ಜನರನ್ನೊಳಗೊಂಡಂತೆ ಕಡ್ಡಾಯವಾಗಿ ಕೋವಿಡ್-19 ಮಾರ್ಗಸೂಚಿಯನ್ನು ಪಾಲನೆ ಮಾಡಿ ಈ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಮದುವೆಯಾಗಬಯಸುವ ವಧು-ವರರು ನೋಂದಣಿ, ಷರತ್ತುಗಳ ಮಾಹಿತಿ ಇಲ್ಲಿದೆ.

ವಿವಾಹದ ದಿನಾಂಕಗಳು; ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ವಿವಾಹವು ಆಗಸ್ಟ್ 14ರಂದು ಬೆಳಗ್ಗೆ 9ರಿಂದ 10.30ರ ಕಟಕ ಲಗ್ನದಲ್ಲಿ ನಡೆಯಲಿದೆ. ವಧು-ವರರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ ಆ.2, ವಧು-ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸುವ ದಿನಾಂಕ ಆ.05, ವಧುವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಆ.07, ಅಂತಿಮ ವಧು-ವರರ ಪಟ್ಟಿ ಪ್ರಕಟಿಸುವ ದಿನಾಂಕ ಆ.07.

ಸರಳ ವಿವಾಹದ ಸಪ್ತಪದಿ ಯೋಜನೆ ಯಶಸ್ವಿ; ಶ್ರೀನಿವಾಸ ಪೂಜಾರಿ ಸರಳ ವಿವಾಹದ ಸಪ್ತಪದಿ ಯೋಜನೆ ಯಶಸ್ವಿ; ಶ್ರೀನಿವಾಸ ಪೂಜಾರಿ

* ಕೊಟ್ಟೂರು ಕ್ಷೇತ್ರದ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ಸಾಮೂಹಿಕ ವಿವಾಹಕ್ಕೆ ಹೆಸರು ನೋಂದಣಿಗೆ ಆಗಸ್ಟ್ 5 ಕೊನೆಯ ದಿನ. ವಧು-ವರರ ವಿವರ ಪ್ರಕಟಿಸುವ ದಿನಾಂಕ ಆ.10, ಆಕ್ಷೇಪಣೆ ಸಲ್ಲಿಸಲು ಆ.14 ಕೊನೆ ದಿನ, ಅಂತಿಮ ಪಟ್ಟಿ ಆ.14ರಂದು ಪ್ರಕಟವಾಗಲಿದೆ. ವಿವಾಹವು ಆ.25ರಂದು ಬೆಳಗ್ಗೆ 09ರಿಂದ 09.30ರ ಕಟಕ ಲಗ್ನ ಮುಹೂರ್ತದಲ್ಲಿ ನಡೆಯುತ್ತದೆ.

Saptapadi Vivah Yojana Name Registration And Conditions

* ಮೈಲಾರ ಗ್ರಾಮದ ಶ್ರೀಮೈಲಾರಲಿಂಗೇಶ್ವರ ದೇವಾಲಯದಲ್ಲಿ ಆಗಸ್ಟ್ 21ರಂದು ಬೆಳಗ್ಗೆ 9 ರಿಂದ 9.50ರ ಕಟಕ ಲಗ್ನ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಹೆಸರು ನೋಂದಣಿಗೆ ಕಡೆಯ ದಿನಾಂಕ ಆ.05. ವಧು-ವರರ ವಿವರವನ್ನು ಪ್ರಕಟಿಸುವ ದಿನಾಂಕ ಆ.10, ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಆ.14, ಅಂತಿಮ ವಧು-ವರರ ಪಟ್ಟಿ ಪ್ರಕಟಿಸುವ ದಿನಾಂಕ ಆ.14.

ವಧು-ವರರಿಗೆ ಷರತ್ತುಗಳು: ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿಗೆ ಬಂದು ಅರ್ಜಿ ಪಡೆದು ವಧು ವರರ ಫೋಟೋ ಜನನ ಪ್ರಮಾಣ/ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ಆಧಾರ್ ಕಾರ್ಡ್ ಹಾಗೂ ಪಂಚಾಯತ್/ ನಗರಸಭೆ/ ಪುರಸಭೆ/ ಮಹಾನಗರ ಪಾಲಿಕೆಯವರಿಂದ ಅವಿವಾಹಿತ ದೃಢೀಕರಣ ದಾಖಲೆಗಳನ್ನು ನೀಡಿ ಹೆಸರು ನೋಂದಾಯಿಸಬೇಕು.

ವಧು-ವರರ ಎರಡು ಕಡೆಯ ತಂದೆ-ತಾಯಿಯವರು ವಿವಾಹಕ್ಕೆ ಒಪ್ಪಿ ವಿವಾಹದಿನದಂದು ತಂದೆ-ತಾಯಿ ಉಪಸ್ಥಿತಿ ಹಾಗೂ ಎರಡು ಕಡೆಯಿಂದ ಸಾಕ್ಷಿದಾರರು ಇದ್ದಲ್ಲಿ ಮಾತ್ರ ವಿವಾಹವನ್ನು ನಡೆಸಲಾಗುವುದು. ವಧು-ವರರ ತಂದೆ-ತಾಯಿಯವರು ನಿಧನರಾಗಿದ್ದಲ್ಲಿ ಅವರ ವಾರಸುದಾರರ ಸಂಪೂರ್ಣ ಒಪ್ಪಿಗೆ ಇರಬೇಕಾಗಿದ್ದು, ವಿವಾಹ ದಿನದಂದು ಅವರು ಕಡ್ಡಾಯವಾಗಿ ಹಾಜರಿರಬೇಕು. (ನಿಧನದ ಬಗ್ಗೆ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವುದು).

ವಧು-ವರರ ಕುಟುಂಬದ ಬಗ್ಗೆ ಕಡ್ಡಾಯವಾಗಿ ಪಡಿತರ ಚೀಟಿ ಪ್ರತಿಯನ್ನು ಸಲ್ಲಿಸುವುದು. ಸಾರ್ವಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧು-ವರರ ಬಗ್ಗೆ ಪುನರ್ ಪರಿಶೀಲಿಸಲಾಗುವುದು. ಸರ್ಕಾರದ ನಿಯಮದಂತೆ ಗಂಡಿಗೆ ಕನಿಷ್ಠ 21 ವರ್ಷಗಳು, ಹೆಣ್ಣಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ವಯಸ್ಸಿನ ಬಗ್ಗೆ ಸರ್ಕಾರ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು.

ವಧು-ವರರು ಅವರವರ ಸಂಪ್ರದಾಯಕ್ಕೆ ತಕ್ಕಂತೆ ಮದುವೆಗೆ ಅವಶ್ಯವಿರುವ ವಸ್ತುಗಳನ್ನು ವಧು-ವರರ ಕಡೆಯವರು ಮಾಡಿಕೊಳ್ಳುವುದು (ಪಂಚೆ, ಶರ್ಟ್, ಶಲ್ಯಧಾರೆ, ಸೀರೆ, ರವಿಕೆ ಕಣ, ಪೇಟ, ಬಾಸಿಂಗ್,ಟೋಪಿ,ಕಾಲುಂಗುರ ಇತ್ಯಾದಿ) ಹಾಲು ಧಾರೆ ಎರೆಯಲು ಸ್ಟೀಲ್ ಬಕೆಟ್ ಮತ್ತು ಸ್ಟೀಲ್ ಚೆಂಬು ತರುವುದು. ವಧು-ವರರ ಕಡೆಯಿಂದ ಕಡ್ಡಾಯವಾಗಿ ಯಾವುದೇ ವಿಧವಾದ ವರದಕ್ಷಿಣೆಯನ್ನು ಪಡೆಯುವಂತಿಲ್ಲ.

ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು-ವರರ ಮೊದಲನೇ ವಿವಾಹಕ್ಕೆ ಮಾತ್ರ ಅವಕಾಶ, ಎರಡನೇ ವಿವಾಹಕ್ಕೆ ಕಡ್ಡಾಯವಾಗಿ ಅವಕಾಶವಿರುವುದಿಲ್ಲ. ಅವಿವಾಹಿತ/ತೆ ದೃಢೀಕರಣ ಪತ್ರವನ್ನು ಪಿಡಿಓ/ ಪುರಸಭೆ/ ಕಾರ್ಪೊರೇಷನ್‌ ಕಮಿಷನರ್‌ ದೃಢೀಕರಿಸಬೇಕು. ಸಾಮೂಹಿಕ ವಿವಾಹಕ್ಕೆ ಸಲ್ಲಿಸುವ ದಾಖಲೆಗಳು ಸುಳ್ಳು ದಾಖಲೆಗಳೆಂದು ದೃಢಪಟ್ಟಲ್ಲಿ, ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ವಧು-ವರರಿಗೆ ವಸ್ತ್ರಗಳಿಗಾಗಿ ಮತ್ತು ಪ್ರೋತ್ಸಾಹ ಧನವನ್ನಾಗಿ ಅವರವರ ಬ್ಯಾಂಕ್ ಖಾತೆಗಳಿಗೆ ವಿವಾಹದ ನಂತರ ನೇರವಾಗಿ ಜಮಾ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾತ್ತದೆ. ವಧು-ವರರ ಬ್ಯಾಂಕ್ ಉಳಿತಾಯ ಖಾತೆಯ ಜೆರಾಕ್ಸ್ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸುವುದು.

ವರನಿಗೆ ಪ್ರೋತ್ಸಾಹ ಧನ (ಹೂವಿನ ಹಾರ,ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ) 5 ಸಾವಿರ ಮೊತ್ತ, ವಧುವಿಗೆ ಪ್ರೋತ್ಸಾಹ ಧನ (ಹೂವಿನ ಹಾರ,ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ) 10 ಸಾವಿರ ಮೊತ್ತ, ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ) 40 ಸಾವಿರ ಸೇರಿದಂತೆ ಒಟ್ಟು ಮೊತ್ತ 55ಸಾವಿರ ಒಳಗೊಂಡಿರುತ್ತದೆ.

Recommended Video

KLರಾಹುಲ್ ಗೆ ಕೊರೋನಾ ಪಾಸಿಟಿವ್: ಕಾಯಿಲೆಯಲ್ಲೇ ಕಾಲ ಕಳೆಯುವಂತಾಯ್ತು ಕನ್ನಡಿಗನ ಪರಿಸ್ಥಿತಿ | *Cricket | OneIndia

English summary
Karnataka government announced date for the Saptapadi Vivah Yojana. Mass marriage will be held on August month. Here are steps to name registration and conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X