• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ನಗರಾಭಿವೃದ್ಧಿಗೆ 25 ಕೋಟಿ ರೂ.ವಿಶೇಷ ಅನುದಾನ

|

ಬಳ್ಳಾರಿ, ಆ. 25: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 25ಕೋಟಿ ರೂ.ವಿಶೇಷ ಅನುದಾನ ನೀಡುವಂತೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ ಅವರಿಗೆ ಮನವಿ ಮಾಡಿದ್ದಾರೆ.

   Annamalai IPS : ಕಮಲ ಹಿಡಿದು ಕಮಾಲ್ ಮಾಡ್ತಾರ ಸಿಂಗಂ | Oneindia Kannada

   ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವರನ್ನು ಭೇಟಿಯಾದ ಬುಡಾ ಅಧ್ಯಕ್ಷ ದಮ್ಮೂರು ಅವರು ಬಳ್ಳಾರಿ ನಗರಕ್ಕೆ ಅಗತ್ಯವಿರುವ 25 ಉದ್ಯಾನವನಗಳನ್ನು 25 ಶುದ್ಧ ನೀರಿನ ಘಟಕಗಳನ್ನು 25 ಸ್ವಾಗತ ಫಲಕಗಳನ್ನು ಹಾಗೂ 25 ಬಸ್ ತಂಗುದಾಣಗಳನ್ನು ನಿರ್ಮಿಸಲು ವಿಶೇಷ ಅನುದಾನದಡಿಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 25 ಕೋಟಿ ರೂಪಾಯಿಗಳನ್ನು ನೀಡಬೇಕೆಂದು ಅವರು ಕೋರಿಕೊಂಡರು.ದಮ್ಮೂರು ಶೇಖರ್ ಅವರ ಮನವಿಯನ್ನು ಆಲಿಸಿದ ಸಚಿವ ಭೈರತಿ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

   ಬಳ್ಳಾರಿ: 2 ಸಾವಿರ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ

   ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರನ್ವಯ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು 1988 ರಿಂದ ಪ್ರಾರಂಭವಾಗಿ ತನ್ನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತದೆ. ಬಳ್ಳಾರಿ-ಸಂಡೂರು ಸ್ಥಳೀಯ ಯೋಜನಾ ಪ್ರದೇಶವು ಬಳ್ಳಾರಿ ತಾಲೂಕಿನ 17 ಗ್ರಾಮಗಳು ಹಾಗೂ ಸಂಡೂರು ತಾಲೂಕಿನ 27 ಗ್ರಾಮಗಳನ್ನೊಳಗೊಂಡಿರುತ್ತದೆ.

   ಹೊಸಪೇಟೆ ಸ್ಥಳೀಯ ಯೋಜನಾ ಪ್ರದೇಶವು 38 ಗ್ರಾಮಗಳನ್ನೊಳಗೊಂಡಿರುತ್ತದೆ. ವಿಜಯನಗರ ಸ್ಥಳೀಯ ಯೋಜನಾ ಪ್ರದೇಶವು ಬಳ್ಳಾರಿ ತಾಲೂಕಿನ 6 ಗ್ರಾಮ, ಹೊಸಪೇಟೆ ತಾಲೂಕಿನ 9 ಗ್ರಾಮ ಹಾಗೂ ಸಂಡೂರು ತಾಲೂಕಿನ 28 ಗ್ರಾಮ ಒಟ್ಟು 43 ಗ್ರಾಮಗಳನ್ನೊಳಗೊಂಡಿರುತ್ತದೆ. ವಿಸ್ತೀರ್ಣವು 580.70 ಚ.ಕಿ.ಮೀ.

   ಬಳ್ಳಾರಿ ವ್ಯಾಪ್ತಿಯ ಜಾನೆಕುಂಟೆ, ಕೊಳಗಲ್ಲು, ಬಳ್ಳಾರಿ ಕಸಬಾ, ಬಿ ಗೋನಾಳ್, ಸಂಗನಕಲ್ಲು, ಹಲಕುಂದಿ, ಬೆಳಗಲ್ಲು, ಹೊನ್ನಳ್ಳಿ, ಪತ್ರ ಬೂದಿಹಾಳ್, ಬಿಸಲಹಳ್ಳಿ, ಬೇವಿನಹಳ್ಳಿ, ಮಿಂಚೇರಿ, ಆಲದಹಳ್ಳಿ, ಮುಂಡ್ರಿಗಿ, ಆಂದ್ರಾಳ್, ಹದ್ದಿನಗುಂಡು, ಕಕ್ಕಬೇವಿನಹಳ್ಳಿ, ಸಂಜೀವರಾಯನಕೋಟೆ ಮುಂತಾದ 18 ಗ್ರಾಮಗಳು ಸೇರಿವೆ.

   English summary
   Ballari: BUDA Chairman Dammur Shekhar requested City Development minister Byrati Basavaraj to sanction Rs 25 Cr to Ballari Urban Development Authority(BUDA) for vvarious activities in the city.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X