• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ: 35 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ: ಆರೋಪಿಗಳ ಬಂಧನ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಡಿಸೆಂಬರ್ 2: ಗ್ರಾಮ ಪಂಚಾಯತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಅಬಕಾರಿ ಇಲಾಖೆ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳು ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಸಿರಗುಪ್ಪ ತಾಲೂಕಿನ ನಾಡಂಗ ಮತ್ತು ವೆಂಕಟಾಪುರ ಗ್ರಾಮಗಳ ಮಧ್ಯದಲ್ಲಿ ಬರುವ ನಾಳಾ ಹತ್ತಿರ ಅನುಮಾನಸ್ಪದವಾಗಿ ನಿಂತಿದ್ದ ಒಂದು ಲಾರಿ ಹಾಗೂ ಒಂದು ಟ್ರಾಕ್ಟರ್ ಪರಿಶೀಲನೆ ನಡೆಸಿದ್ದು, ಅಕ್ರಮ ಮದ್ಯ ಮತ್ತು ವಾಹನಗಳು(35,12,900 ರೂ.ಗಳು) ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಗ್ರಾ.ಪಂ. ಚುನಾವಣೆ: ಶಸ್ತ್ರಾಸ್ತ್ರಗಳ ಠೇವಣಿಗೆ ಬಳ್ಳಾರಿ ಡಿಸಿ ಸೂಚನೆ

ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್.ಮೋಹನ ಕುಮಾರ್, ಬಳ್ಳಾರಿ ಅಬಕಾರಿ ಉಪ ಆಯುಕ್ತ ನರೇಂದ್ರ ಕುಮಾರ್ ಅವರ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕರಾದ ತುಕಾರಾಂ ನಾಯ್ಕ್, ಪಿ.ಗಿರೀಶ್ ಮತ್ತು ಸಿಬ್ಬಂದಿಗಳಾದ ಸಿ.ದಕ್ಷಿಣಾಮೂರ್ತಿ ಮತ್ತು ಹರೀಶಸಿಂಗ್ ಅವರು ಮಂಗಳವಾರ ಸಂಜೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಸಿರುಗುಪ್ಪ ತಾಲೂಕಿನ ನಾಡಂಗ ಮತ್ತು ವೆಂಕಟಾಪುರ ಗ್ರಾಮಗಳ ಮಧ್ಯೆ ಬರುವ ನಾಳಾ ಹತ್ತಿರ ಅನುಮಾನಸ್ಪದವಾಗಿ ಲಾರಿ ಹಾಗೂ ಟ್ರಾಕ್ಟರ್ ನಿಂತಿದ್ದು ಕಂಡುಬಂದಿದೆ. ಈ ಲಾರಿ ಮತ್ತು ಟ್ರಾಕ್ಟರ್ ಪರಿಶೀಲಿಸಿದಾಗ ಲಾರಿಯು ರಹದಾರಿ ಪರವಾನಿಗೆ ಹೊಂದಿದೆ ಎಂದು ತಿಳಿದುಬಂದಿದೆ.

ಸದರಿ ಲಾರಿ ಮತ್ತು ಟ್ರಾಕ್ಟರ್ ನಲ್ಲಿರುವ ಮದ್ಯದ ಪೆಟ್ಟಿಗೆಗಳನ್ನು ಏಣಿಕೆ ಮಾಡಲಾಗಿದ್ದು, ಲಾರಿಯಲ್ಲಿ ರಹದಾರಿ ಪತ್ರದಲ್ಲಿರುವ ಮದ್ಯಕ್ಕಿಂತ 103.68 ಲೀ (90 ಮಿಲಿಯ ಒ.ಸಿ ವಿಸ್ಕಿಯ 12 ಪೆಟ್ಟಿಗೆಗಳು) ಮದ್ಯವು ಹೆಚ್ಚಿರುವುದು ಹಾಗೂ ಟ್ರಾಕ್ಟರ್ ನಲ್ಲಿ ಪರವಾನಿಗೆ ಇಲ್ಲದೇ 241.92 ಲೀ (90 ಮಿಲಿಯ ಒ.ಸಿ ವಿಸ್ಕಿಯ 28 ಪೆಟ್ಟಿಗೆಗಳು) ಒಟ್ಟು 345.60 ಲೀ ಅಕ್ರಮ ಮದ್ಯ ಕಂಡುಬಂದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

English summary
Gram Panchayat Elections Background Excise Department officials have seized illicit liquor in Ballari district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X