• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಣರಾಜ್ಯೋತ್ಸವ ದಿನಾಚರಣೆ 2021: ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರ ಆಯ್ಕೆ

|
Google Oneindia Kannada News

ಬಳ್ಳಾರಿ, ಜನವರಿ 23: ಈ ಬಾರಿಯ ನವದೆಹಲಿ ಗಣರಾಜ್ಯೋತ್ಸವ ದಿನಾಚರಣೆಯ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರ ಆಯ್ಕೆಗೊಂಡಿದೆ.

ನವದೆಹಲಿಯ ರಾಜಪಥದಲ್ಲಿ ನಡೆಯುವ ಮೆರವಣಿಗೆಯಲ್ಲಿ ಕರ್ನಾಟಕದ ನೂತನ ಜಿಲ್ಲೆಯಾದ ವಿಜಯನಗರ ಸಾಮ್ರಾಜ್ಯದ ಇತಿಹಾಸವುಳ್ಳ ಚಿತ್ರ ಭಾಗವಹಿಸಲಿದೆ.

ದಖ್ಖನ್ ಪ್ರಸ್ಥಭೂಮಿಯ ತುಂಗಭದ್ರಾ ನದಿಯ ದಡದಲ್ಲಿ ಪ್ರವರ್ಧಮಾನಕ್ಕೆ ಬಂದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ವಿಜಯನಗರ. ಸಂಗಮ ರಾಜವಂಶದ ಹರಿಹರ-1 ಮತ್ತು ಬುಕ್ಕರಾಯ-1 ಇಬ್ಬರು ಸೋದರರು ಈ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಸಂಗಮ ವಂಶದವರು ತಮ್ಮ ಆಡಳಿತದ ಉತ್ತುಂಗದ ಅವಧಿಯಲ್ಲಿ ದಕ್ಷಿಣ ಭಾರತದ ಬಹುತೇಕ ಕುಟುಂಬಗಳು ಹಾಗೂ ಡೆಕ್ಕನ್ ಪ್ರಾಂತ್ಯದ ಸುಲ್ತಾನರನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದರು.

ವಿಜಯನಗರ ಇತಿಹಾಸ
ದಕ್ಷಿಣ ಭಾರತದ ಎಲ್ಲೆಡೆ ಬಹುತೇಕ ಸ್ಮಾರಕಗಳಿರುವ, ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವತಿಯಿಂದ ವಿಶ್ವ ಪರಂಪರೆಯ ಸ್ಥಳ ಎಂದು ಗುರುತಿಸಲ್ಪಟ್ಟಿರುವ, ಅತ್ಯಂತ ಪ್ರಸಿದ್ಧವಾದ ಹಾಗೂ ಇದೀಗ ಅವಶೇಷಗಳ ತಾಣವಾಗಿರುವ ಹಂಪಿ ಈ ಸಾಮ್ರಾಜ್ಯದ ಪರಂಪರೆಯಾಗಿದೆ.

ಐರೋಪ್ಯ ಹಾಗೂ ಪರ್ಷಿಯಾ ಪ್ರವಾಸಿಗರ ಕಥನಗಳು ಹಾಗೂ ಪುರಾತತ್ವ ಉತ್ಖನನಗಳು ವಿಜಯನಗರ ಸಾಮ್ರಾಜ್ಯದ ಶಕ್ತಿ ಮತ್ತು ಶ್ರೀಮಂತಿಕೆಯನ್ನು ಬಹಿರಂಗಪಡಿಸುತ್ತವೆ.

ಪರ್ಷಿಯಾ ಮತ್ತು ಪೋರ್ಚುಗಲ್‌ನಿಂದ ವ್ಯಾಪಾರಸ್ಥರನ್ನು ಆಕರ್ಷಿಸುತ್ತಿದ್ದ ಹಂಪಿ-ವಿಜಯನಗರವು, 1500ನೇ ಇಸವಿಯಲ್ಲಿ ಬೀಜಿಂಗ್‌ನ ನಂತರ, ವಿಶ್ವದ ಅತೀ ದೊಡ್ಡ ಹಾಗೂ ಭಾರತದ ಅತ್ಯಂತ ಸಿರಿವಂತ ಮಧ್ಯಕಾಲೀನ ಯುಗದ ನಗರಿಯಾಗಿತ್ತು.

ಹಂಪಿಯ ಕೇಂದ್ರ ಬಿಂದು ಎನಿಸಿರುವ ಉಗ್ರ ನರಸಿಂಹ, ಭಗವಾನ್ ಹನುಮನ ಜನ್ಮ ಸ್ಥಳ ಎಂದು ಹೇಳಲಾದ ಅಂಜನಾದ್ರಿ ಬೆಟ್ಟ, ವಿಜಯನಗರ ಸಾಮ್ರಾಜ್ಯದ ಸರ್ವಶ್ರೇಷ್ಠ ಸಾಮ್ರಾಟ ಶ್ರೀ ಕೃಷ್ಣದೇವರಾಯರ 1509ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭ ಹಾಗೂ ಹಜಾರರಾಮ ದೇವಾಲಯದ ಭಿತ್ತಿಚಿತ್ರಗಳನ್ನು ಈ ಸ್ತಬ್ದಚಿತ್ರವು ಬಿಂಬಿಸುತ್ತವೆ.

ಪ್ರಾಸಂಗಿಕವೋ ಎಂಬಂತೆ ಬಳ್ಳಾರಿ ಜಿಲ್ಲೆಯಿಂದ ಹೊರಹೊಮ್ಮಿದ ವಿಜಯನಗರವು ರಾಜ್ಯದ 31ನೇ ಜಿಲ್ಲೆಯಾಗಿ ಡಿಸೆಂಬರ್ 2020 ರಲ್ಲಿ ಕರ್ನಾಟಕ ಸರ್ಕಾರದಿಂದ ಅಧಿಸೂಚಿಸಲ್ಪಟ್ಟಿದೆ.

English summary
Vijayanagara Dynasty glory Tableau from Karnataka has been selected to participate in this year's New Delhi Republic Day Parade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X