ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಕಾರು ಅಪಘಾತ; "ಪ್ರಕರಣ ಮುಚ್ಚಿಹಾಕಲು ಬಿಡುವುದಿಲ್ಲ" ಎಂದ ರವಿ ನಾಯ್ಕ್ ಅಜ್ಜಿ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

Recommended Video

ಶೋಕಿ ಮಾಡೋಕೆ ನಿಮ್ಮಪ್ಪನ ಮನೆ ಜಾಗಕ್ಕೆ ಹೋಗಿ | Bellary | R Ashok | Sharath | Rahul | Ravikanth | Sachin

ಬಳ್ಳಾರಿ, ಫೆಬ್ರವರಿ 13: ಬಳ್ಳಾರಿಯ ಹೊಸಪೇಟೆ ಸಮೀಪ ಫೆ.10ರಂದು ನಡೆದ ಕಾರು ಅಪಘಾತ ಎಲ್ಲೆಲ್ಲೂ ಸುದ್ದಿಯಲ್ಲಿದೆ. ಅಪಘಾತದಲ್ಲಿ ಪಾದಚಾರಿ ರವಿ ನಾಯ್ಕ್ ಹಾಗೂ ಕಾರು ಚಾಲಕ ಸಚಿನ್ ಎಂಬುವರು ಮೃತಪಟ್ಟಿದ್ದು, ಸಚಿವ ಆರ್ ಅಶೋಕ್ ಮಗ ಈ ಕಾರಿನಲ್ಲಿದ್ದರಾ ಇಲ್ಲವಾ ಎಂಬುದೇ ಸದ್ಯದ ಚರ್ಚಿತ ವಿಷಯವಾಗಿದೆ.

ಆದರೆ ಇನ್ನೊಂದೆಡೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ರವಿ ನಾಯ್ಕ ಮನೆಯವರ ಗೋಳು ಕೇಳುವವರಿಲ್ಲ. ರವಿ ನಾಯ್ಕ ತಂದೆ ತಾಯಿ, ತನ್ನ ಮೊಮ್ಮಗನನ್ನು ನೆನೆದು ಅಜ್ಜಿ ಶಾಂತಾಬಾಯಿ ಕಣ್ಣೀರು ಸುರಿಸುತ್ತಿದ್ದಾರೆ.

ಅಪಘಾತವಾದ ಕಾರಿನಲ್ಲಿದ್ದರೇ ಅಶೋಕ್ ಪುತ್ರ? ಉತ್ತರ ಸಿಗದ ಪ್ರಶ್ನೆಗಳುಅಪಘಾತವಾದ ಕಾರಿನಲ್ಲಿದ್ದರೇ ಅಶೋಕ್ ಪುತ್ರ? ಉತ್ತರ ಸಿಗದ ಪ್ರಶ್ನೆಗಳು

ಅಪಘಾತದಲ್ಲಿ ನನ್ನ ಮೊಮ್ಮಗನನ್ನು ಬಲಿ ಪಡೆದರು, ಅವರು ಎಷ್ಟೇ ಶ್ರೀಮಂತರಾದರೂ ಎಲ್ಲರ ಜೀವ ಒಂದೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕನಿಷ್ಠ ಸೌಜನ್ಯಕ್ಕೂ ನಮ್ಮನ್ನು ಯಾರು ಮಾತನಾಡಿಸಿಲ್ಲ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

Reaction Of Ravi Naik Family Member Who Died In Ballari Accident

"ನನ್ನ ಮೊಮ್ಮಗ ಪಂಚರ್ ಹಾಕಸೋಕೆ ಹೋಗಿದ್ದ. ಅವನೇನು ತಪ್ಪು ಮಾಡಿಲ್ಲ, ನನ್ನ ಮೊಮ್ಮಗನನ್ನು ಸಾಯಿಸಿದಾರೆ. ನಾವು ಕಷ್ಟಪಟ್ಟು ಮೊಮ್ಮಗನನ್ನು ಓದಿಸಿದ್ದೇವೆ. ಎಂಜಿನಿಯರ್ ಆಗ್ತೀನಿ ಅಂತಿದ್ದ. ಈಗ ನನ್ನ ಮೊಮ್ಮಗನನ್ನು ತಂದು ಕೊಡ್ತಾರಾ..??" ಎಂದು ಕಣ್ಣೀರಾಗಿದ್ದಾರೆ.

ಬಳ್ಳಾರಿ ಅಪಘಾತ ಪ್ರಕರಣ: ಸ್ಫೋಟಕ ಮಾಹಿತಿ ಹೊರಹಾಕಿದ ವೈದ್ಯಬಳ್ಳಾರಿ ಅಪಘಾತ ಪ್ರಕರಣ: ಸ್ಫೋಟಕ ಮಾಹಿತಿ ಹೊರಹಾಕಿದ ವೈದ್ಯ

"ನಮ್ಮ ಮೊಮ್ಮಗಂದು ಏನೂ ತಪ್ಪಿಲ್ಲ. ನಾವು ಈ ಪ್ರಕರಣ ಮುಚ್ಚಿ ಹಾಕಲು ಬಿಡಲ್ಲ. ನಮಗೆ ನ್ಯಾಯ ಬೇಕು" ಎಂದು ಪಟ್ಟು ಹಿಡಿದಿದ್ದಾರೆ.

English summary
'There is no mistake of my grand son. We wont let this case close" said ravi naik grand mother who died in accident which happened on feb 10 at hosapete ballari,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X