ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿಯಲ್ಲಿ ಕಾಣಿಸಿಕೊಂಡಿದೆ ಅಪರೂಪದ ಹಳದಿಕಾಲಿನ ಹಸಿರು ಪಾರಿವಾಳ

By ಜಿಎಂಆರ್, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಆಗಸ್ಟ್ 8: ಪಶ್ಚಿಮ -ಪೂರ್ವ ಘಟ್ಟಗಳಲ್ಲಿ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಹಾರಾಷ್ಟ್ರದ ರಾಜ್ಯ ಪಕ್ಷಿ, 'ಹಳದಿಕಾಲಿನ ಹಸಿರು ಪಾರಿವಾಳ'ಗಳ ದಂಡು ಕಳೆದ ವಾರದಿಂದ ಹಂಪಿಯಲ್ಲಿ ಹಾರಾಟ ನಡೆಸಿವೆ.

ಹಂಪಿಯ ಹಜಾರ ರಾಮ ಮತ್ತು ಮಹಾನವಮಿ ದಿಬ್ಬದ ಬಳಿಯ ಪೈಕಾಸ್ ಸಮುದಾಯದ (ಅತ್ತಿ, ಆಲ, ಅರಳಿ, ಬಸರಿ) ಮರಗಳಲ್ಲಿ ಹಾರಾಡುತ್ತಿರುವ ಈ ಪಕ್ಷಿ, ಆಸಕ್ತರ ಕುತೂಹಲಕ್ಕೆ ಕಾರಣವಾಗಿವೆ. ಮಹಾನವಮಿ ದಿಬ್ಬದ ಬಳಿಯ ಬಸರಿ ಮರದಲ್ಲಿ ಹಣ್ಣುಗಳು ಬಿಟ್ಟಿದ್ದು, ಆ ಹಣ್ಣು ತಿನ್ನಲು 20ಕ್ಕೂ ಹೆಚ್ಚು ಪಕ್ಷಿಗಳು ಬೀಡುಬಿಟ್ಟಿವೆ.

ಕೆಂಚನಗುಡ್ಡದ ಸುತ್ತ ಕಿಂಗ್ ಫಿಷರ್ ಗಳ ಕಲರವ ಕೇಳ ಬನ್ನಿಕೆಂಚನಗುಡ್ಡದ ಸುತ್ತ ಕಿಂಗ್ ಫಿಷರ್ ಗಳ ಕಲರವ ಕೇಳ ಬನ್ನಿ

ಭಾರತೀಯ ಉಪಖಂಡದ ಸಾಮಾನ್ಯ ಪ್ರಭೇದವಾದ ಯೆಲ್ಲೋ ಫೂಟೆಡ್ ಗ್ರೀನ್ ಪೀಜನ್ (ಟ್ರೆರಾನ್ ಫೀನಿಕಾಫ್ಟೆರಾ), ನಮ್ಮ ಪಶ್ಚಿಮ ಘಟ್ಟ ಮತ್ತು ಮಲೆನಾಡಿನ ಎತ್ತರದ ಮರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಛಾಯಾಗ್ರಾಹಕ- ಪತ್ರಕರ್ತ ಹೊಸಪೇಟೆಯ ಶಿವಶಂಕರ ಬಣಗಾರ ಅವರು ಈ ಪಕ್ಷಿಯನ್ನು ಗುರುತಿಸಿ, ಕುತೂಹಲದಿಂದ ಹಿಂಬಾಲಿಸಿದಾಗ ಸಿಕ್ಕಿದ್ದು ಅಂಥ ಪಕ್ಷಿಗಳ ದೊಡ್ಡ ದಂಡು.

Rare bird Yellow footed green pigeon cited near Hampi

ಈ ಕುರಿತು ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿದ ಅವರು, ಇಲ್ಲಿಗೆ ವಲಸೆ ಬಂದಿರುವ ಈ ಹಕ್ಕಿ ಅಪರೂಪದ ಪ್ರಭೇದ. ಕೆಲ ಸಮಯ ವಲಸೆ ಹೋಗಿ, ಪಶ್ಚಿಮ ಘಟ್ಟದಿಂದ ಪೂರ್ವ ಘಟ್ಟಕ್ಕೆ ಹಿಂತಿರುಗುವ ಸಂದರ್ಭದಲ್ಲಿ ಹಂಪೆಯ ಪರಿಸರದಲ್ಲಿಯೇ ಅವುಗಳು ಕಾಣಿಸಿಕೊಂಡಿವೆ ಎಂದರು.

ಹಂಪಿ ಸುತ್ತಲಿನ ವಿವಿಧೆಡೆ, ಕರಿಯಮ್ಮನ ಗುಡ್ಡ ಮತ್ತು ಸಂಡೂರು ಗುಡ್ಡಗಳಲ್ಲಿ ಇವುಗಳು ಆಗಾಗ ಕಾಣಿಸಿಕೊಳ್ಳುತ್ತವೆ. 'ನಮ್ಮ ಹಂಪಿ' ಪಕ್ಷಿಗಳು ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಪಕ್ಷಿ ಸಂಶೋಧಕ ಸಮದ್ ಕೊಟ್ಟೂರು ತಿಳಿಸುತ್ತಾರೆ.

ಹಂಪಿ ಪ್ರದೇಶ ಈ ಪಕ್ಷಿಗಳ ಆವಾಸಸ್ಥಾನ ಏನಲ್ಲ. ಈ ಪಕ್ಷಿಯನ್ನು ಹಾವೇರಿ ಬಳಿ ವೀಕ್ಷಿಸಿದ್ದು, ಈವರೆಗೆ ಹಂಪಿಯಲ್ಲಿ ಕಂಡಿದ್ದಿಲ್ಲ. ಹಂಪಿ ಪ್ರದೇಶದಲ್ಲಿ ಈ ಪಕ್ಷಿಗಳು ಕಾಣಿಸಿಕೊಂಡಿರುವುದಕ್ಕೆ ಕಾರಣ ಇಲ್ಲಿ ಅವುಗಳಿಗೆ ಆಹಾರ ಲಭ್ಯತೆ ಇದೆ ಅಂತಿರಬಹುದು. ಫೈಕಾಸ್ ಸಮುದಾಯದ ಮರಗಳು ಹಂಪಿಯಲ್ಲಿ ಹೇರಳವಾಗಿ ಇರುವುದರಿಂದ ಈ ಸಾಧ್ಯತೆಯಿದೆ ಎಂದು ಪಕ್ಷಿ ವೀಕ್ಷಕ ಪಂಪಯ್ಯಸ್ವಾಮಿ ಮಳೆಮಠ ಹೇಳುತ್ತಾರೆ.

English summary
Rare bird Yellow footed green pigeon cited near Hampi, Ballari district. Here is the picture and brief details about this bird.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X