ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ: ಚುನಾವಣಾ ಉಸ್ತುವಾರಿಯಿಂದ ರಮೇಶ್ ಜಾರಕಿಹೊಳಿ ಎತ್ತಂಗಡಿ

|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ಮೇಲೆ ಕೋಪ ಮಾಡ್ಕೊಂಡಿದ್ದಕ್ಕೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ | Oneindia Kannada

ಬಳ್ಳಾರಿ, ಅಕ್ಟೋಬರ್ 26: ಡಿ.ಕೆ.ಶಿವಕುಮಾರ್ ಮೇಲೆ ಮುನಿಸು ಬಿಡಲೊಲ್ಲದ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಳ್ಳಾರಿ ಲೋಕಸಭೆ ಉಪಚುನಾವಣೆಯ ಕ್ಷೇತ್ರ ಉಸ್ತುವಾರಿಯಿಂದ ಹೊರದಬ್ಬಲಾಗಿದೆ.

ಬಳ್ಳಾರಿ ಲೋಕಸಭೆ ಉಪಚುನಾವಣೆಗಾಗಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೂಡ್ಲಗಿ ಕ್ಷೇತ್ರದ ಉಸ್ತುವಾರಿ ವಹಿಸಲಾಗಿತ್ತು. ಆದರೆ ರಮೇಶ್ ಅವರು ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಅವರನ್ನು ಉಸ್ತುವಾರಿ ಸ್ಥಾನದಿಂದ ಪಕ್ಕಕ್ಕೆ ಸರಿಸಲಾಗಿದೆ.

ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಚಿತ್ರದುರ್ಗದ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಅವರನ್ನು ನೇಮಿಸಲಾಗಿದೆ. ಇನ್ನುಮುಂದೆ ಕೂಡ್ಲಿಗಿ ಕ್ಷೇತ್ರದ ಚುನಾವಣಾ ಉಸ್ತುವಾರಿ ಅವರೇ ನೋಡಿಕೊಳ್ಳಲಿದ್ದಾರೆ.

ಡಿಕೆಶಿ ಬರುತ್ತಿದ್ದಂತೆಯೇ ಜಾರಕಿಹೊಳಿ ಜೂಟ್: ಡಿಕೆಶಿ ಮಾಡಿದ್ದೇನು ಗೊತ್ತಾ?ಡಿಕೆಶಿ ಬರುತ್ತಿದ್ದಂತೆಯೇ ಜಾರಕಿಹೊಳಿ ಜೂಟ್: ಡಿಕೆಶಿ ಮಾಡಿದ್ದೇನು ಗೊತ್ತಾ?

ಈಗಾಗಲೇ ಕಾಂಗ್ರೆಸ್‌ ಹಾಗೂ ಡಿ.ಕೆ.ಶಿವಕುಮಾರ್ ಅವರ ಮೇಲೆ ಕತ್ತಿ ಮಸೆಯುತ್ತಿದ್ದ ರಮೇಶ್ ಜಾರಕಿಹೊಳಿಗೆ ಈ ಕ್ರಮ ಇನ್ನಷ್ಟು ಅಸಮಾಧಾನ ಉಂಟು ಮಾಡುವ ಲಕ್ಷಣಗಳಿದ್ದು, ಮುಂದಿನ ಪರಿಣಾಮ ಏನಾಗಲಿದೆ ಎಂಬುದು ಕುತೂಹಲಕಾರಿಯಾಗಿರಲಿದೆ.

ಕ್ಷೇತ್ರಕ್ಕೆ ಬರದ ರಮೇಶ್ ಜಾರಕಿಹೊಳಿ

ಕ್ಷೇತ್ರಕ್ಕೆ ಬರದ ರಮೇಶ್ ಜಾರಕಿಹೊಳಿ

ಕೂಡ್ಲಿಗಿ ಕ್ಷೇತ್ರದ ಉಸ್ತುವಾರಿ ಆಗಿದ್ದ ರಮೇಶ್ ಜಾರಕಿಹೊಳಿ ಅವರು ನಾಮಕಾಸ್ತೆಗೆ ಕೇವಲ ಎರಡು ಬಾರಿ ಮಾತ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿಯೂ ಸಹ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಥಳೀಯ ಮುಖಂಡರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್‌ ಅಸಮಾಧಾನ, ಬೆಳಗಾವಿಯಲ್ಲಿ ಮತ್ತೆ ಬೆಂಕಿ? ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್‌ ಅಸಮಾಧಾನ, ಬೆಳಗಾವಿಯಲ್ಲಿ ಮತ್ತೆ ಬೆಂಕಿ?

ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಅಸಮಾಧಾನ

ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಅಸಮಾಧಾನ

ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ತೀವ್ರ ಅಸಮಾಧಾನ ಹೊಂದಿದ್ದಾರೆ. ರಮೇಶ್ ಅವರ ರಾಜಕೀಯ ಕ್ಷೇತ್ರವಾಗಿರುವ ಬೆಳಗಾವಿಯ ಉಸ್ತುವಾರಿ ಸಚಿವರಾಗಿರುವ ಶಿವಕುಮಾರ್ ಅವರು ಜಾರಕಿಹೊಳಿ ಸಹೋದರರ ರಾಜಕೀಯ ವಿರೋಧಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಬೆಂಬಲ ನೀಡಿದ್ದು ಅವರ ಸಿಟ್ಟಿಗೆ ಕಾರಣವಾಗಿದೆ.

ಡಿಕೆಶಿ ವಿರುದ್ಧ ತುಟಿ ಬಿಚ್ಚದ ಬಿಜೆಪಿ ನಾಯಕರು, ಅಮಿತ್ ಶಾ ಗರಂ ಡಿಕೆಶಿ ವಿರುದ್ಧ ತುಟಿ ಬಿಚ್ಚದ ಬಿಜೆಪಿ ನಾಯಕರು, ಅಮಿತ್ ಶಾ ಗರಂ

ಪ್ರಚಾರ ಸಮಯದಲ್ಲೂ ಮುನಿಸು

ಪ್ರಚಾರ ಸಮಯದಲ್ಲೂ ಮುನಿಸು

ಬಳ್ಳಾರಿ ಲೋಕಸಭೆ ಉಪಚುನಾವಣೆಯ ಒಟ್ಟಾರೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ. ಮೊನ್ನೆಯಷ್ಟೆ ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ತೆರಳಿದಾಗ ಡಿ.ಕೆ.ಶಿವಕುಮಾರ್ ಬಂದ ಕೂಡಲೇ ರಮೇಶ್ ಜಾರಕಿಹೊಳಿ ಅಲ್ಲಿಂದ ತೆರಳಿದ್ದು, ಅವರಿಬ್ಬರ ನಡುವೆ ಬಿರುಕು ದೊಡ್ಡದಾಗಿದೆ ಎಂಬುದಕ್ಕೆ ಉದಾಹರಣೆ ಆಗಿದೆ.

ರಮೇಶ್ ವಿರುದ್ಧ ಕೆಪಿಸಿಸಿಗೆ ದೂರು

ರಮೇಶ್ ವಿರುದ್ಧ ಕೆಪಿಸಿಸಿಗೆ ದೂರು

ಉಸ್ತುವಾರಿಯಾಗಿ ನೇಮಕಗೊಂಡಿದ್ದರೂ ಸಹ ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸದೇ ಇರುವ ಬಗ್ಗೆ ಹಾಗೂ ಪಕ್ಷಕ್ಕೆ ಋಣಾತ್ಮಕವಾಗಿ ಕೆಲಸ ಮಾಡುತ್ತಿರುವ ಬಗ್ಗೆ ರಮೇಶ್ ಜಾರಕಿಹೊಳಿ ವಿರುದ್ಧ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಶಿಸ್ತು ಕ್ರಮ ಕೈಗೊಳ್ಳುವಂತೆ ಸಲಹೆ ಸಹ ನೀಡಿದ್ದಾರೆ.

English summary
Congress minister Ramesh Jarkiholi has been removed from election in-charge post of Kudligi constituency. DK Shivakumar given a complaint against Ramesh Jarkiholi to KPCC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X