ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಚೋದನಾಕಾರಿ ಭಾಷಣ; ಸೋಮಶೇಖರ ರೆಡ್ಡಿ ವಿರುದ್ಧ ಎಫ್‌ಐಆರ್

|
Google Oneindia Kannada News

ಬಳ್ಳಾರಿ, ಜನವರಿ 05: ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆದ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ಅವರು ಟೀಕೆಗೆ ಗುರಿಯಾಗಿದ್ದಾರೆ.

ಬಳ್ಳಾರಿಯ ಕಾಂಗ್ರೆಸ್ ನಾಯಕ ಪಿ. ವಿವೇಕ್ ನೀಡಿದ ದೂರಿನ ಅನ್ವಯ ಬಳ್ಳಾರಿಯ ಗಾಂಧಿನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಸೋಮಶೇಖರ ರೆಡ್ಡಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಕಾಂಗ್ರೆಸ್ ಮುಖಂಡರ ನಿಯೋಗದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ಮನವಿ ಮಾಡಿದೆ.

ಸಿಎಎ ಬಗ್ಗೆ ಜಾಗೃತಿ‌ಗೆ ಹೊರಟ ಬಿಜೆಪಿಗರನ್ನೇ ತರಾಟೆ ತೆಗೆದುಕೊಂಡ ಜನಸಿಎಎ ಬಗ್ಗೆ ಜಾಗೃತಿ‌ಗೆ ಹೊರಟ ಬಿಜೆಪಿಗರನ್ನೇ ತರಾಟೆ ತೆಗೆದುಕೊಂಡ ಜನ

ಎಫ್‌ಐಆರ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಸೋಮಶೇಖರ ರೆಡ್ಡಿ ಮೊದಲ ಆರೋಪಿ. ಸಿಎಎ ಪರವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ 'ದೇಶಭಕ್ತ ನಾಗರಿಕ ವೇದಿಕೆ'ಯನ್ನು 2ನೇ ಆರೋಪಿಯನ್ನಾಗಿ ಮಾಡಲಾಗಿದೆ.

ಸಿಎಎ ಬೆಂಬಲಿಸಿ ರ‍್ಯಾಲಿ: ನಖ್ರಾ ಮಾಡಿದರೆ ಸರಿಯಿರೋಲ್ಲ, ರೊಚ್ಚಿಗೇಳಬೇಕಾಗುತ್ತೆಸಿಎಎ ಬೆಂಬಲಿಸಿ ರ‍್ಯಾಲಿ: ನಖ್ರಾ ಮಾಡಿದರೆ ಸರಿಯಿರೋಲ್ಲ, ರೊಚ್ಚಿಗೇಳಬೇಕಾಗುತ್ತೆ

ಸೋಮಶೇಖರ ರೆಡ್ಡಿ ಜಾತಿ, ಧರ್ಮಗಳ ಮಧ್ಯೆ ವಿಷ ಬೀಜವನ್ನು ಭಿತ್ತಿ ಜಗಳ ಹಚ್ಚುವಂತಹ ಹೇಳಿಕೆಗಳನ್ನು ನೀಡಿ ದೇಶ ಮತ್ತು ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡುವ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಪಿ. ವಿವೇಕ್ ಉಲ್ಲೇಖಿಸಿದ್ದರು.

ಪೌರತ್ವ ಕಾಯ್ದೆ ವಿರುದ್ದ ಗುಡುಗಿದ ಜಮೀರ್ ಅಹಮ್ಮದ್ಪೌರತ್ವ ಕಾಯ್ದೆ ವಿರುದ್ದ ಗುಡುಗಿದ ಜಮೀರ್ ಅಹಮ್ಮದ್

ಇಂಥ ಹೇಳಿಕೆ ನೀಡಲು ನಾಚಿಕೆಯಾಗಬೇಕು

ಇಂಥ ಹೇಳಿಕೆ ನೀಡಲು ನಾಚಿಕೆಯಾಗಬೇಕು

ಸೋಮಶೇಖರ ರೆಡ್ಡಿ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ. "ಸೋಮಶೇಖರ ರೆಡ್ಡಿ ಅವರು ಬಿಜೆಪಿ ಮತ್ತು ಸಂಘಪರಿವಾರದ ಇನ್ನೊಂದು ಮುಖವನ್ನು ಅನಾವರಣ ಮಾಡಿದ್ದಾರೆ. ಜಾತ್ಯತೀತವಾದ, ಪಕ್ಷಾತೀತವಾದ ಪ್ರತಿಭಟನೆಗೆ ಧರ್ಮದ ಬಣ್ಣ ಬಳಿದು ಜನರ ದಿಕ್ಕು ತಪ್ಪಿಸಲು ಬಿಜೆಪಿ ಪಕ್ಷ ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಇಂಥ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗಬೇಕು.
ಬೇಜವಾಬ್ದಾರಿ ಹೇಳಿಕೆ ನೀಡಿರುವ ಅವರು ಜನಪ್ರತಿನಿಧಿಯಾಗಲು ಖಂಡಿತ ಅರ್ಹರಲ್ಲ, ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಅವರನ್ನು ಮೊದಲು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಬೇಕು.
ಸಮಾಜ ಒಡೆಯುವವರ ಮಾತುಗಳಿಗೆ ಕಿವಿಗೊಡದೆ ಶಾಂತಿಯಿಂದ ವರ್ತಿಸೋಣ. ಕಾನೂನು ಹೋರಾಟದ ಮೂಲಕ ಇವರಿಗೆ ತಕ್ಕ ಉತ್ತರ ನೀಡೋಣ" ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ದೂರು

ಕಾಂಗ್ರೆಸ್‌ನಿಂದ ದೂರು

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಪ್ರಚೋದನಾಕಾರಿ ಹೇಳಿಕೆ ನೀಡಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿರುವ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ. ಪೊಲೀಸ್ ಮಹಾ ನಿರ್ದೇಶಕರ ಪರವಾಗಿ ಎಡಿಜಿಪಿ ಡಾ.ಎಂ.ಎ.ಸಲೀಂ ಮನವಿ ಸ್ವೀಕರಿಸಿದ್ದಾರೆ.

ಸೋಮಶೇಖರ ರೆಡ್ಡಿ ಹೇಳಿದ್ದೇನು?

ಸೋಮಶೇಖರ ರೆಡ್ಡಿ ಹೇಳಿದ್ದೇನು?

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೋಮಶೇಖರ ರೆಡ್ಡಿ, "ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವವರನ್ನು ಬಂದೂಕಿನಿಂದ ಶೂಟ್ ಮಾಡಿದರೆ ಜನಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು. ನೀವು ಶೇ 17ರಷ್ಟು ಮಾತ್ರವಿದ್ದು, ಶೇ 80ರಷ್ಟು ನಾವು ಇದ್ದೇವೆ. ನಾವು ತಿರುಗಿ ಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬೇಕು ಊಹಿಸಿಕೊಳ್ಳಿ" ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದರು.

ಯಾರು ಸೋಮಶೇಖರ ರೆಡ್ಡಿ?

ಯಾರು ಸೋಮಶೇಖರ ರೆಡ್ಡಿ?

ಸೋಮಶೇಖರ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಶಾಸಕ. ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಸಹೋದರ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಲ್ಲಿದ್ದಾಗ ಕೆಎಂಎಫ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

English summary
FIR field against Karnataka BJP Ballari ciry MLA Somashekar Reddy for his speech and threatened anti protesters and minorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X