ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಜಿಲ್ಲೆ ಕೊರೊನಾ ವಾರಿಯರ್ಸ್ ಗೆ ಮಾಸ್ಕ್, ಸ್ಯಾನಿಟೈಸರ್ ಕೊರತೆ

|
Google Oneindia Kannada News

ಹಗರಿಬೊಮ್ಮನಹಳ್ಳಿ, ಏಪ್ರಿಲ್ 13: ಸಾರ್ವಜನಿಕರ ಜೊತೆಗೆ ನಿರಂತರವಾಗಿ ಒಡನಾಟವಿಟ್ಟು ಕೋರೋನಾ ವೈರಸ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಕೊರೊನಾವಾರಿಯರ್ಸ್ ಗೆ ಸೂಕ್ತ ಭದ್ರತೆ, ಸುರಕ್ಷತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಪೋಲೀಸರು, ಪೌರ ಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಪ್ರೋತ್ಸಾಹಭತ್ಯೆ ಜೊತೆಗೆ ಗುಣಮಟ್ಟದ ಎನ್-95 ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಬೇಕಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಎಲ್ಲಾ ಇಲಾಖೆಗಳ ಸಿಬ್ಬಂದಿ ಬಳಸಿ ಬೀಸಾಡುವ ಮಾಸ್ಕ್‍ಗಳನ್ನು ಬಳಸುತ್ತಿದ್ದು ಜೊತೆಗೆ ದಿನಾಲು ರಸ್ತೆ ಬೀದಿ ಮನೆಮನೆ ತಿರುಗುವ ಸಿಬ್ಬಂದಿಯ ರಕ್ಷಣೆಗೆ ಸರ್ಕಾರ ಕಾಳಜಿ ವಹಿಸದಿದ್ದರೆ ಅವರಿಗೂ ಸೋಂಕು ತಗುಲಿ ಅವರೇ ಮನೆಮನೆಗೆ ರೋಗ ಹರಡುವ ಅಪಾಯವಿದ್ದು ಆರೋಗ್ಯ ಸಚಿವ ಶ್ರೀರಾಮುಲು ತಕ್ಷಣವೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೇವರು ಇದ್ದಾನೆಯೇ? ಯಾಕೆ ಕೊರೊನಾ ತೊಗಲಿಸುತ್ತಿಲ್ಲ: ಕಾಟ್ಜು ದೇವರು ಇದ್ದಾನೆಯೇ? ಯಾಕೆ ಕೊರೊನಾ ತೊಗಲಿಸುತ್ತಿಲ್ಲ: ಕಾಟ್ಜು

ತಮ್ಮ ಕುಟುಂಬದ ಆರೋಗ್ಯದ ಹಿತಾಶಕ್ತಿಯನ್ನು ಪಣಕ್ಖಿಟ್ಟು ರಾಜ್ಯದ ಜನತೆಯ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಪೋಲೀಸರು, ಪೌರ ಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಕುಟುಂಬ ವರ್ಗವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದ್ದು ಅವರ ಸುರಕ್ಷತೆಗೆ ಪ್ರಾಮುಖ್ಯತೆ ನೀಡಲು ಮನವಿ ಮಾಡಿದರು.

Provide PPE kit, Mask, Sanitizer to Corona warriors: Congress Spokesperson

ಅಲ್ಲದೇ ಸೋಂಕು ದೃಢಪಟ್ಟ ಪ್ರದೇಶಗಳಲ್ಲಿ ಸರ್ವೆ ನಡೆಸಲು ತೆರಳುವ ಸಿಬ್ಬಂದಿಗಳಿಗೆ ಹಾಗೂ ಭದ್ರತೆ ಮಾಡಲು ನಿಯೋಜಿಸಲ್ಪಟ್ಟ ಎಲ್ಲಾ ಪೋಲೀಸರಿಗೂ ಪಿಪಿಇ ಕಿಟ್ ವಿತರಿಸಿ ಅವರ ಸುರಕ್ಷತೆಗೆ ನಿಗಾ ವಹಿಸಲು ಪತ್ರೇಶ್ ಹಿರೇಮಠ್ ಆಗ್ರಹಿಸಿದರು.

English summary
Provide PPE kit, Mask, Sanitizer to Corona warriors in Ballari district demanded Congress Spokesperson Pathresh Hiremanth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X