ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಶ್ರೀರಾಮುಲು ಮನೆ ಮುಂದೆ ಧರಣಿ ಎರಡನೇ ದಿನಕ್ಕೆ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಫೆಬ್ರವರಿ 12: ಈಗಾಗಲೇ ಕೆಲಸದಿಂದ ತೆಗೆದಿರುವ ಸಿಬ್ಬಂದಿಯನ್ನು ನಿವೃತ್ತಿವರೆಗೆ ಮುಂದುವರಿಸಬೇಕು ಮತ್ತು 8 ತಿಂಗಳ ಬಾಕಿ ವೇತನವನ್ನು ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೂರಾರು ಸದಸ್ಯರು ಸಚಿವ ಬಿ.ಶ್ರೀರಾಮುಲು ಅವರ ಬಳ್ಳಾರಿಯ ಮನೆ ಮುಂದೆ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 3 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆದ ಕಾರಣ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ. ಸಿಬ್ಬಂದಿಯು ಇ.ಎಸ್.ಐ, ಪಿಎಫ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅವರನ್ನು ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರಿಸಬೇಕು. ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಚುನಾವಣೆಯ ಟ್ರಂಪ್ ಕಾರ್ಡ್ ಆಗಿತ್ತಾ ಚುನಾವಣೆಯ ಟ್ರಂಪ್ ಕಾರ್ಡ್ ಆಗಿತ್ತಾ "ಬಳ್ಳಾರಿ ವಿಭಜನೆ" ವಿಷಯ?

ನಿನ್ನೆಯಿಂದ ಆರಂಭವಾಗಿರುವ ಈ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟಿದ್ದು, ಭರವಸೆ ಈಡೇರಿಸುವವರೆಗೂ ಪ್ರತಿಭಟನೆ ಕೈ ಬಿಡುವ ಮಾತೇ ಇಲ್ಲ ಎಂಬುದು ಪ್ರತಿಭಟನಾ ನಿರತರ ವಾದ.

Protest Continue In Front Of Minister Sriramulu House In Ballary

ಸಚಿವರ ಮನೆ ಮುಂದೆ ಧರಣಿ ನಡೆಸಿದಾಗ ಪರಿಹಾರದ ಭರವಸೆ ಸಿಗುತ್ತದೆ. ಆದರೆ ನಂತರ ಅತಂತ್ರ ಸ್ಥಿತಿ ಮುಂದುವರಿಯುತ್ತದೆ. ಈಗ 3 ನೇ ಬಾರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಕೆಲಸವೂ ಇಲ್ಲದೇ, ವೇತನವೂ ಇಲ್ಲದೇ ಬದುಕು ಕಷ್ಟಕರವಾಗಿದೆ ಎಂದು ಕೆಲವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

English summary
Members of the State Government Hostel and Residential School Outreach Employees Union Protest in front of Minister B Sriramulu residence, have entered the second day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X