ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಪೇಟೆ; ಅಂಗನವಾಡಿಯ ಪೌಷ್ಠಿಕ ಆಹಾರದಲ್ಲಿ ಹುಳ

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಏಪ್ರಿಲ್ 26; ಅಂಗನವಾಡಿಗೆ ಕೇಂದ್ರಗಳಿಗೆ ಪೂರೈಕೆ ಮಾಡುವ ಆಹಾರ ಪದಾರ್ಥಗಳು ಕಳಪೆ ಮಟ್ಟದಿಂದ ಕೂಡಿವೆ. ಆಹಾರದಲ್ಲಿ ಹುಳಗಳಿವೆ ಎಂದು ಮರಿಯಮ್ಮನಹಳ್ಳಿಯ ನಿವಾಸಿ ಪ್ರಕಾಶ ನಾಯ್ಕ್ ಆರೋಪಿಸಿದರು.

ಮರಿಯಮ್ಮನಹಳ್ಳಿಯ 7ನೇ ವಾರ್ಡ್‌ನಲ್ಲಿ 25ನೇ ಅಂಗನವಾಡಿ ಕೇಂದ್ರಕ್ಕೆ ಕಳೆದ ವಾರ ನನ್ನ ಮಗ ಹೋಗಿದ್ದ ಅಲ್ಲಿ ಕೊಟ್ಟಿರುವ ಪೌಷ್ಠಿಕಾಂಶಯುಕ್ತ ಆಹಾರದ ಪುಡಿಯಲ್ಲಿ ಮತ್ತು ಬರ್ಫಿಯನ್ನು ತಿಂದಿದ್ದಾನೆ ಎಂದು ಹೇಳಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಪುತ್ರನ ಡಾಕ್ಟರ್ ಕನಸು ನನಸು ಅಂಗನವಾಡಿ ಕಾರ್ಯಕರ್ತೆ ಪುತ್ರನ ಡಾಕ್ಟರ್ ಕನಸು ನನಸು

ಇದನ್ನು ತಿಂದ ಕೆಲವು ಹೊತ್ತಿನಲ್ಲೇ ಬೇದಿ ಶುರುವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇನೆ, ಏನಾಗಿದೆ ಎಂದು ವೈದ್ಯರನ್ನು ಕೇಳಿದರೆ? ಏನೋ ಊಟದಲ್ಲಿ ಹೆಚ್ಚು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ನಂತರ ಮನೆಗೆ ಬಂದು ಅಂಗನವಾಡಿಯಲ್ಲಿ ಕೊಟ್ಟಿರುವ ಪೌಷ್ಠಿಕಾಂಶ ಯುಕ್ತ ಆಹಾರದ ಪುಡಿ ಮತ್ತು ಬರ್ಫಿಯನ್ನು ನೋಡಿದಾಗ ಹುಳಗಳು ಕಂಡಿವೆ ಎಂದರು.

ಪ್ರಿಯಕರನಿಂದಲೇ ಅಂಗನವಾಡಿ ಟೀಚರ್ ಹತ್ಯೆ ಪ್ರಿಯಕರನಿಂದಲೇ ಅಂಗನವಾಡಿ ಟೀಚರ್ ಹತ್ಯೆ

Poor Quality Of Food Found Anganwadi Vijayanagara

ಇದಕ್ಕೂ ಮೊದಲು ಇದೇ ರೀತಿಯಾಗಿತ್ತು. ಆಗ ನಮ್ಮ ಮರಿಯಮ್ಮನಹಳ್ಳಿ ಭಾಗದ ಮೇಲ್ವಿಚಾರಿಕಿ ಅಂಬುಜಾರವರಿಗೆ ಗಮನಕ್ಕೆ ತರಲಾಗಿತ್ತು. ಆಗ ಅವರು ಇನ್ನೊಮ್ಮೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.

ಕೊರೊನಾ ಪರಿಸ್ಥಿತಿ; ಬಡವರಿಗೆ 2 ತಿಂಗಳು ಉಚಿತ ಆಹಾರ ಧಾನ್ಯ ಘೋಷಿಸಿದ ಕೇಂದ್ರಕೊರೊನಾ ಪರಿಸ್ಥಿತಿ; ಬಡವರಿಗೆ 2 ತಿಂಗಳು ಉಚಿತ ಆಹಾರ ಧಾನ್ಯ ಘೋಷಿಸಿದ ಕೇಂದ್ರ

ಈಗ ಮತ್ತೆ ಅದೇ ರೀತಿಯ ಘಟನೆ ಮರುಕಳಿಸಿದೆ ಸಣ್ಣ ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೇ ಅಧಿಕಾರಿಗಳೆ ಹೊಣೆ ಎಂದರು. ಕೂಡಲೇ ಆಹಾರ ಉತ್ಪಾನೆ ಮಾಡುವಲ್ಲಿ ಕಳಪೆ ಗುಣಮಟ್ಟದಲ್ಲಿ ಮಾಡುತ್ತಿದ್ದಾರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದರೇ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ.

ಈಗಾಗಲೇ ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿಗಳಿಗೆ ಮತ್ತು ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಹೊಸಪೇಟೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಯವರಿಗೆ ಈ ಕುರಿತು ದೂರು ನೀಡಲಾಗಿದೆ.

English summary
Poor quality of food found in anganwadi at Mariyanahalli, Vijayanagara. Complaint found to women and child development department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X