ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಕಾಏಕಿ ಎಲ್ಲಾ ಅಂಗಡಿ ಬಂದ್, ಹೊಸಪೇಟೆ ವ್ಯಾಪಾರಸ್ಥರು ಕಂಗಾಲು

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಏಪ್ರಿಲ್ 23: ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿ, ಉಳಿದ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ ಘಟನೆ ಗುರುವಾರ ನಡೆದಿದೆ.

ನಗರದಲ್ಲಿ ಕೊರೊನ ಪ್ರಕರಣಗಳು ಹೆಚ್ಚುತ್ತಿರೋ ಹಿನ್ನಲೆ ಹೊಸಪೇಟೆಯಲ್ಲಿ 549 ಸಕ್ರಿಯ ಪ್ರಕರಣಗಳಿದ್ದು ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿ, ಉಳಿದ ಅಂಗಡಿಗಳುನ್ನು ಬಂದ್ ಮಾಡಿಸಲಾಯಿತು.

ಇದರಿಂದ ವ್ಯಾಪಾರಸ್ಥರು ಕಕ್ಕಾಬಿಕ್ಕಿಯಾದರು ಸರ್ಕಾರವು ಮೇ.22 ರಿಂದ ಮೇ 4 ರವರಿಗೆ ರಾತ್ರಿ 9 ಗಂಟೆಯಿಂದ ಬೆಳಗ್ಗಿನ ಜಾವ 6 ಗಂಟೆಯವರೆಗೆ ಕರ್ಪ್ಯೂ ಜಾರಿ ಮಾಡಿದೆ.

Police shut commercial Non-essential services shop in Hospete

ಅಲ್ಲದೇ ಶನಿವಾರ ಮತ್ತು ಭಾನುವಾರ ಸಂಪೂರ್ಣ ಬಂದ್‌ಗೆ ಅದೇಶ ನೀಡಿರುವುದು ಸರಿ, ನೀವು ಏಕಾ ಏಕಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ವ್ಯಾಪಾರಸ್ಥರು ಪೊಲೀಸರನ್ನು ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ನಮಗೆ ಮೇಲಿನ ಅಧಿಕಾರಿಗಳಿಂದ ಅದೇಶ ಬಂದಿದ್ದು ಮೇಡಿಕಲ್‌ ಶಾಪ್, ಹೋಟಲ್, ಕಿರಾಣಿ ಅಂಗಡಿಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲು ತಿಳಿಸಿದ್ದಾರೆ ಹಾಗಾಗಿ ನೀವು ಮುಚ್ಚಲೇ ಬೇಕೆಂದು ಬಂದ್ ಮಾಡಿಸಿದರು.

Police shut commercial Non-essential services shop in Hospete

ನಗರದಲ್ಲಿ ಕೊರೊನ ಪ್ರಕರಣಗಳು ಹೆಚ್ಚುತ್ತಿರೋ ಹಿನ್ನಲೆಯಲ್ಲಿ ಗುರುವಾರ ಪೊಲೀಸರು ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿ, ಉಳಿದ ಅಂಗಡಿಗಳನ್ನು ಬಂದ್ ಮಾಡಿಸಿದರು.

English summary
Corona Curfew: Police shut commercial Non-essential services shop in Hospete on April 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X