ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚಾಯಿತಿ ಚುನಾವಣೆ; ಎರಡೂ ಕೈ ಇಲ್ಲದ ಯುವತಿಯಿಂದ ಮತದಾನ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಡಿಸೆಂಬರ್ 27: ಎರಡೂ ಕೈಗಳಿಲ್ಲದ ಯುವತಿ ಲಕ್ಷ್ಮೀ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿದರು. ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿಯಾಗಿ ಲೋಕಸಭೆ ಚುನಾವಣೆಯಲ್ಲಿ ಲಕ್ಷ್ಮೀ ಕೆಲಸ ಮಾಡಿದ್ದರು.

ಭಾನುವಾರ ಬಳ್ಳಾರಿ ಜಿಲ್ಲೆಯ ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 47 ರಲ್ಲಿ ಲಕ್ಷ್ಮೀ ಮತದಾನ ಮಾಡಿದರು. ಎರಡೂ ಕೈಗಳು ಇಲ್ಲದ ಕಾರಣ ಕಾಲಿನ ಬೆರಳಿಗೆ ಮತಗಟ್ಟೆ ಅಧಿಕಾರಿಗಳು ಶಾಹಿ ಹಾಕಿದರು.

Gram Panchayat polls 2020 Voting Live: ಪಂಚಾಯಿತಿ ಫೈಟ್; ಬಿರುಸಿನಿಂದ ನಡೆದಿದೆ 2ನೇ ಹಂತದ ಮತದಾನGram Panchayat polls 2020 Voting Live: ಪಂಚಾಯಿತಿ ಫೈಟ್; ಬಿರುಸಿನಿಂದ ನಡೆದಿದೆ 2ನೇ ಹಂತದ ಮತದಾನ

ಎರಡೂ ಕೈಗಳು ಇಲ್ಲದಿದ್ದರೂ ಸಹ ಲಕ್ಷ್ಮೀ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿಯಾಗಿ ಯುವತಿ ಕೆಲಸ ಮಾಡಿದ್ದರು.

ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!

Physically Challenged Women Cast Vote For Gram Panchayat Election

ಅಭ್ಯರ್ಥಿಗಳ ಚಿಹ್ನೆ ಬದಲು; ಮತದಾನಕ್ಕೆ ಮತಗಟ್ಟೆಗೆ ಬಂದ ಮತದಾರರಿಗೆ ಭಾರೀ ಹಿನ್ನಡೆಯಾಗಿದೆ.
ಅಭ್ಯರ್ಥಿಗಳ ಚಿಹ್ನೆ ಅದಲು ಬದಲಾದ ಘಟನೆ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದ್ದು,
ಮತದಾನ ಮಾಡದಿರಲು ಜನರು ತೀರ್ಮಾನಿಸಿದ್ದಾರೆ.

ಪಂಚಾಯಿತಿ ಚುನಾವಣೆ; ಮೋದಿ ಫೋಟೋ, ಬಿಜೆಪಿ ಚಿಹ್ನೆ ಬಳಕೆ ಪಂಚಾಯಿತಿ ಚುನಾವಣೆ; ಮೋದಿ ಫೋಟೋ, ಬಿಜೆಪಿ ಚಿಹ್ನೆ ಬಳಕೆ

ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಪಂಚಾಯಿತಿ 1 ಮತ್ತು 2ನೇ ವಾರ್ಡ್‌ನಲ್ಲಿ ಚಿಹ್ನೆ ಬದಲಾಗಿದೆ.
ಒಂದನೇ ವಾರ್ಡಿನ ಅಭ್ಯರ್ಥಿಯ ಗುರುತು ಎರಡನೇ ವಾರ್ಡಿಗೆ, ಎರಡನೇ ವಾರ್ಡಿನ ಅಭ್ಯರ್ಥಿಯ ಗುರುತು ಒಂದನೇ ವಾರ್ಡಿಗೆ ಬಂದಿದೆ.

ಈ ಎರಡು ವಾರ್ಡುಗಳಿಗೆ ಮತದಾನ ಮಾಡದಿರಲು ಮತದಾರರು ತೀರ್ಮಾನಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರರು ಆಗಮಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

English summary
Physically challenged women Lakshmi cast vote for gram panchayat election in Ballari district Kanahosalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X