ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ ವೀಕ್ಷಣೆಗಿದ್ದ ನಿರ್ಬಂಧ ತೆರವು; ಆಫ್ ಲೈನ್ ಟಿಕೆಟ್ ಪುನರಾರಂಭ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಡಿಸೆಂಬರ್ 19: ಭಾರತೀಯ ಪುರಾತತ್ವ ಇಲಾಖೆ ಕೊರೊನಾ ಹಿನ್ನೆಲೆಯಲ್ಲಿ ತನ್ನ ವ್ಯಾಪ್ತಿಯ ಸ್ಮಾರಕಗಳ ವೀಕ್ಷಣೆಗೆ ಆನ್ ಲೈನ್ ನಲ್ಲಿ ಟಿಕೆಟ್ ಪಡೆದು ನೋಡಲು ಅವಕಾಶ ಕಲ್ಪಿಸಿತ್ತು. ಶನಿವಾರದಿಂದ ಆಫ್‌ಲೈನ್‌ನಲ್ಲೂ ಟಿಕೆಟ್ ಖರೀದಿಸುವ ಸೌಲಭ್ಯ ಒದಗಿಸಿದೆ. ಇದರಿಂದ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಹಂಪಿ ಸ್ಮಾರಕಗಳ ವೀಕ್ಷಣೆಗಿದ್ದ ಸಮಸ್ಯೆ ಬಗೆಹರಿದಂತಾಗಿದೆ.

ಹಂಪಿಯ ವಿಜಯ ವಿಠಲ ದೇವಸ್ಥಾನ ಹಾಗೂ ಕಮಲ ಮಹಲ್‌, ಕಮಲಾಪುರದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದ ಬಳಿಯ ಕೌಂಟರ್‌ನಲ್ಲಿ ಪ್ರವಾಸಿಗರು ಟಿಕೆಟ್ ಖರೀದಿಸಬಹುದಾಗಿದೆ. ಇದೇ ವೇಳೆ ಇಲಾಖೆ ಪ್ರತಿ ದಿನ ಟಿಕೆಟ್ ಖರೀದಿ ಮೇಲೆ ಹೇರಿದ್ದ ಮಿತಿ ಕೂಡ ತೆಗೆದು ಹಾಕಿದೆ ಎಂದು ಎಎಸ್ ‌ಐ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ತಿಳಿಸಿದ್ದಾರೆ.

ಲಾಕ್‌ಡೌನ್‌ ಸಡಿಲಗೊಂಡ ನಂತರ ಜುಲೈನಲ್ಲಿ ಹಂಪಿ ಸ್ಮಾರಕಗಳ‌ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು. ಆದರೆ, ಕೊರೊನಾ ಸೋಂಕು ಹರಡುತ್ತಿದ್ದರಿಂದ ಆನ್ ಲೈನ್ ನಲ್ಲಿ‌ ಮಾತ್ರ ಅದೂ ದಿನಕ್ಕೆ ಎರಡು ಸಾವಿರ ಪ್ರವಾಸಿಗರಿಗೆ ಟಿಕೆಟ್ ನೀಡುವ ವ್ಯವಸ್ಥೆ ಇತ್ತು. ಸ್ಮಾರಕ ನೋಡಲು ಬಯಸುವವರು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿ, ಡೌನ್‌ಲೋಡ್‌ ಮಾಡಿಕೊಂಡು ಸ್ಮಾರಕಗಳ ಪ್ರವೇಶ ದ್ವಾರದಲ್ಲಿನ ಭದ್ರತಾ ಸಿಬ್ಬಂದಿಗೆ ತೋರಿಸಬೇಕಿತ್ತು.

Offline Ticketing System Resumes to See Hampi

ಹಂಪಿಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಿಗದ ಕಾರಣ ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲಾಗದೆ ಹಿಂತಿರುಗುವ ಪರಿಸ್ಥಿತಿ ಸಹ ಇತ್ತು. ಆದರೆ ಇಂದಿನಿಂದ ಈ ಸಮಸ್ಯೆ ದೂರವಾಗಲಿದೆ.

English summary
Offline ticketing system has resumed again in hampi at ballari. Tickets are available from Dec 19, Saturday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X