ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ರೆಡ್ಡಿ ಮಾಸ್ಟರ್ ಪ್ಲಾನ್, ಒಂದೇ ಕಲ್ಲಿಗೆ ಮೂರು ಹಕ್ಕಿ

|
Google Oneindia Kannada News

Recommended Video

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ನ ಬಗ್ಗು ಬಡಿಯಲು ರೆಡ್ಡಿ ಮಾಸ್ಟರ್ ಪ್ಲಾನ್ | Oneindia Kannada

ಬಳ್ಳಾರಿ, ಏಪ್ರಿಲ್ 16: ಕಾಂಗ್ರೆಸ್‍ನ ನಿಷ್ಠಾವಂತ ಮತ್ತು ಮಾಜಿ ಸಂಸದ, ನಿವೃತ್ತ ನ್ಯಾಯಾಧೀಶ ಎನ್.ವೈ. ಗೋಪಾಲಕೃಷ್ಣ ಕುಟುಂಬದ ಎಲ್ಲಾ ಸದಸ್ಯರು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿ, ಕೂಡ್ಲಿಗಿ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ನಿರ್ಧರಿಸಿದ್ದಾರೆ. ಮೊಳಕಾಲ್ಮೂರು ಮೂಲದ ಗೋಪಾಲಕೃಷ್ಣ 2014 ಉಪಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಕಾಂಗ್ರೆಸ್ ಅವರಿಗೆ ಎರಡೂ ಕಡೆಗಳಲ್ಲಿ ಟಿಕೆಟ್ ನೀಡಿರಲಿಲ್ಲ.

ಅಂದು ಗಾಲಿ ಜನಾರ್ದನ ರೆಡ್ಡಿ ಹಾಕಿದ್ದ ಸ್ಕೆಚ್ ಯಾವುದು? ಅಂದು ಗಾಲಿ ಜನಾರ್ದನ ರೆಡ್ಡಿ ಹಾಕಿದ್ದ ಸ್ಕೆಚ್ ಯಾವುದು?

ಬೆಂಗಳೂರಿನಲ್ಲಿ ಸೋಮವಾರ ಇಡೀ ದಿನ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಜಿ. ಜನಾರ್ಧನ ರೆಡ್ಡಿ ಸಮ್ಮುಖದಲ್ಲಿ ವಿವಿಧ ಹಂತದ ಚರ್ಚೆಗಳು ನಡೆದಿದ್ದು, ಎನ್.ವೈ. ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ತಮಗೆ ಕ್ಷೇತ್ರ ಇಲ್ಲದಂತೆ ಮಾಡಿರುವ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಲು ಅವರು ನಿರ್ಧಾರ ತೆಗೆದುಕೊಂಡಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

NY Gopalakrishna will join BJP, Contesting Election in Kudligi

ಎನ್.ವೈ. ಕುಟುಂಬದ ಸದಸ್ಯರು ಬಿಜೆಪಿ ಸೇರಿದಲ್ಲಿ ಮೊಳಕಾಲ್ಮೂರು ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಮತಗಳನ್ನು ಬಿಜೆಪಿ ಅಭ್ಯರ್ಥಿಗಳಿಗೆ ಹಾಕಿಸಬೇಕು. ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು. ಬಿ. ಶ್ರೀರಾಮುಲು, ಸಣ್ಣ ಫಕ್ಕೀರಪ್ಪ ಮತ್ತು ಎನ್.ವೈ. ಗೋಪಾಲಕೃಷ್ಣ ಗೆಲುವು ಸಾಧಿಸಬೇಕು ಎನ್ನುವುದು ಲೆಕ್ಕಾಚಾರವಾಗಿದೆ.

ದೆಹಲಿಯಲ್ಲಿ ಗಾಲಿ ರೆಡ್ಡಿಯಿಂದ ಹೊಸ ರಾಜಕೀಯ ತಂತ್ರದೆಹಲಿಯಲ್ಲಿ ಗಾಲಿ ರೆಡ್ಡಿಯಿಂದ ಹೊಸ ರಾಜಕೀಯ ತಂತ್ರ

ಒಂದು ಹಂತದಲ್ಲಿ ಎಸ್. ತಿಪ್ಪೇಸ್ವಾಮಿ (ಮೊಳಕಾಲ್ಮೂರು ಟಿಕೆಟ್ ವಂಚಿತ ಬಿಜೆಪಿ ಹಾಲಿ ಶಾಸಕ)ಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದರು. ಇದೇ ವೇಳೆಗೆ ಬಿಜೆಪಿಗೆ ಎನ್.ವೈ. ಗೋಪಾಲಕೃಷ್ಣ ಅವರನ್ನು ಕರೆಯಿಸಿಕೊಂಡು, ಪುನಃ ರಾಜಕೀಯ ಪುನರುಜ್ಜೀವನ ನೀಡಲು ನಿರ್ಧರಿಸಿರುವುದು ಡಿಕೆಶಿ ಏಟಿಗೆ ರೆಡ್ಡಿ ತಿರುಗೇಟು ನೀಡಿದಂತೆ ಆಗಿದೆ.

ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ: ಅಮಿತ್ ಶಾಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ: ಅಮಿತ್ ಶಾ

ಟಿಕೆಟ್ ಇಲ್ಲದೆ ಮೂಲೆ ಗುಂಪಾಗುತ್ತಿದ್ದ ಎನ್.ವೈ. ಗೋಪಾಲಕೃಷ್ಣ ಅವರಿಗೆ ಕೂಡ್ಲಿಗಿಯಿಂದ ಕಣಕ್ಕಿಳಿಸಿ, ಮೊಳಕಾಲ್ಮೂರು ಮತ್ತು ಬಳ್ಳಾರಿ ಗ್ರಾಮೀಣದ ಮೇಲೆ ಜಿ. ಜನಾರ್ದನ ರೆಡ್ಡಿ ಕಣ್ಣಿಟ್ಟಿದ್ದಾರೆ. ಶ್ರೀರಾಮುಲು, ರೆಡ್ಡಿ ಮತ್ತು ಬಿಜೆಪಿಯ ಈ ಲೆಕ್ಕಾಚಾರ ಬಹುತೇಕ ಯಶಸ್ಸನ್ನು ಸಾಧಿಸುವ ಸಾಧ್ಯತೆಗಳಿವೆ. ಹೀಗೆ ಒಂದೇ ಏಟಿಗೆ ಮೂರು ಹಕ್ಕಿ ಹೊಡೆಯಲು ರೆಡ್ಡಿ ಹೊರಟಿದ್ದಾರೆ.

English summary
Karnataka Elections: The loyal, former MP of Congress and the retired judge N.Y. Gopalakrishna and his family members decided to join BJP and to contest in the Kudligi ST reservation constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X