• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ; ಉಚಿತ ಸೇವೆ ಮಾಡಲು ಬಂದ ಗುಜರಾತ್ ನರ್ಸಿಂಗ್ ವಿದ್ಯಾರ್ಥಿಗಳು

|
Google Oneindia Kannada News

ಬಳ್ಳಾರಿ, ಮೇ 20; ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳ್ಳಾರಿಯಲ್ಲಿ ಜಿಂದಾಲ್ 1 ಸಾವಿರ ಬೆಡ್‌ಗಳ ಆಸ್ಪತ್ರೆ ನಿರ್ಮಾಣ ಮಾಡಿದೆ. ದೇಶದಲ್ಲಿಯೇ ದೊಡ್ಡದಾದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಹಲವಾರು ಸಿಬ್ಬಂದಿಗಳು ಬೇಕು.

ಗುಜರಾತ್‌ ರಾಜ್ಯದ ಸೂರತ್‌ನಿಂದ 18 ವಿದ್ಯಾರ್ಥಿಗಳು ಸ್ವ-ಇಚ್ಚೆಯಿಂದ ಕೋವಿಡ್ ಸೋಂಕಿತರ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಬಳ್ಳಾರಿಯ ಬೆಸ್ಟ್ ನರ್ಸಿಂಗ್ ಕಾಲೇಜಿನ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಕೋವಿಡ್ ಕಾರಣಕ್ಕೆ ವಾಪಸ್ ತೆರಳಿದ್ದರು.

ಬಳ್ಳಾರಿ; 1000 ಬೆಡ್ ಆಸ್ಪತ್ರೆ ಆರಂಭ ಬಳ್ಳಾರಿ; 1000 ಬೆಡ್ ಆಸ್ಪತ್ರೆ ಆರಂಭ

ಈಗ ಬಳ್ಳಾರಿ ಜಿಲ್ಲೆಯ ಜಿಂದಾಲ್ ಎದುರು ಉದ್ಘಾಟನೆಗೊಂಡಿರುವ 1ಸಾವಿರ ಹಾಸಿಗೆಗಳ ಆಕ್ಸಿಜನ್ ಸಹಿತ ಕೋವಿಡ್ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ಬಳ್ಳಾರಿಗೆ ವಾಪಸ್ ಆಗಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ವ್ ತಂಡದ ಸದಸ್ಯರು ಮತ್ತು ಸ್ವಯಂ ಸೇವಕರು ಗುಲಾಬಿ ಹೂಮಳೆ ಸುರಿಸುವ ಮೂಲಕ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿದರು.

ಬಳ್ಳಾರಿ; ವಿಮ್ಸ್‌ನಲ್ಲಿ ಬೆಡ್ ಸಿಗದೇ ಆಸ್ಪತ್ರೆ ಮುಂದೆ ವ್ಯಕ್ತಿ ನರಳಾಟ ಬಳ್ಳಾರಿ; ವಿಮ್ಸ್‌ನಲ್ಲಿ ಬೆಡ್ ಸಿಗದೇ ಆಸ್ಪತ್ರೆ ಮುಂದೆ ವ್ಯಕ್ತಿ ನರಳಾಟ

ಕೋವಿಡ್ ಕಾರಣ ತವರಿಗೆ ತೆರಳಿದ್ದ ವಿದ್ಯಾರ್ಥಿಗಳು ಸೇವೆ ಸಲ್ಲಿಸಲು ಮುಂದೆ ಬಂದಿರುವುದು ಒಂದು ಉತ್ತಮ ಬೆಳವಣಿಗೆ. 18 ಜನ ನರ್ಸಿಂಗ್ ವಿದ್ಯಾರ್ಥಿಗಳ ಆಗಮನ 1 ಬೆಡ್‌ಗಳ ಆಕ್ಸಿಜನ್ ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರೆತೆಯನ್ನು ನೀಗಿಸಲಿದೆ. ಇದರಿಂದಾಗಿ ಜಿಲ್ಲಾಡಳಿತಕ್ಕೂ ಸಹಾಯಕವಾಗಿದೆ.

ಕೊವಿಡ್-19 ಪಾಸಿಟಿವಿಟಿ: ಟಾಪ್-5 ಪಟ್ಟಿಯಲ್ಲಿ ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ!ಕೊವಿಡ್-19 ಪಾಸಿಟಿವಿಟಿ: ಟಾಪ್-5 ಪಟ್ಟಿಯಲ್ಲಿ ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ!

ಇನ್ನೊಂದು ತಂಡ ಶೀಘ್ರವೇ ಆಗಮನ

ಇನ್ನೊಂದು ತಂಡ ಶೀಘ್ರವೇ ಆಗಮನ

18 ವಿದ್ಯಾರ್ಥಿಗಳ ತಂಡ ಮೊದಲ ಹಂತದಲ್ಲಿ ಬಳ್ಳಾರಿಗೆ ಆಗಮಿಸಿದೆ. "ಇನ್ನೊಂದು ತಂಡವು ಇದೇ ರೀತಿ ಸೇವೆ ಸಲ್ಲಿಸಲು ಜಿಲ್ಲೆಗೆ ಶೀಘ್ರವೇ ಆಗಮಿಸಲಿದೆ" ಎಂದು ರೆಡ್ ಕ್ರಾಸ್ ಕಾರ್ಯದರ್ಶಿ ಷಕೀಬ್ ಹೇಳಿದ್ದಾರೆ. ತಿಳಿಸಿದರು.

ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ

ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ

ಜಿಂದಾಲ್ ಬಳಿ ನಿರ್ಮಿಸಲಾಗಿರುವತಾತ್ಕಾಲಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಆಗಮಿಸಿದ ವಿದ್ಯಾರ್ಥಿಗಳನ್ನು ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಗುಲಾಬಿ ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದರು. ರೈಲ್ವೆ ನಿಲ್ದಾಣಕ್ಕೆ ಬಂದ ಎಲ್ಲಾ ವಿದ್ಯಾರ್ಥಿಗಳ ಕೋವಿಡ್ ಟೆಸ್ಟ್ ಮಾಡಲಾಗಿದೆ.

ಆಸ್ಪತ್ರೆ ಉದ್ಘಾಟಿಸಿದ ಯಡಿಯೂರಪ್ಪ

ಆಸ್ಪತ್ರೆ ಉದ್ಘಾಟಿಸಿದ ಯಡಿಯೂರಪ್ಪ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬುಧವಾರ ಜಿಂದಾಲ್ ಬಳಿಯ ವಿಶಾಲ ಮೈದಾನದಲ್ಲಿ ನಿರ್ಮಿಸಲಾಗಿರುವ 1 ಸಾವಿರ ಆಕ್ಸಿಜನ್ ಹಾಸಿಗೆ ಸೌಲಭ್ಯವುಳ್ಳ ತಾತ್ಕಾಲಿಕ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು.

ಸುಸಜ್ಜಿತ ವ್ಯವಸ್ಥೆಗಳು

ಸುಸಜ್ಜಿತ ವ್ಯವಸ್ಥೆಗಳು

1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಲಿಕ ಆಸ್ಪತ್ರೆ ಇದಾಗಿದೆ. ಕೋವಿಡ್ ಸಂದರ್ಭದಲ್ಲಿ ಜಿಂದಾಲ್ ಸಂಸ್ಥೆಯ ರಾಜ್ಯಕ್ಕೆ ನೀಡಿದ ಕೊಡುಗೆ ಇದಾಗಿದೆ. ಈ ಆಸ್ಪತ್ರೆಗೆ 4.8ಕಿ.ಮೀ ದೂರದಿಂದ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. 15 ದಿನಗಳ ಕಾಲ ಜಿಂದಾಲ್ ಹಾಗೂ ಜಿಲ್ಲಾಡಳಿತದ ನಿರಂತರ ಪರಿಶ್ರಮದ ಫಲವಾಗಿ ಈ ಆಸ್ಪತ್ರೆ ನಿರ್ಮಾಣವಾಗಿದೆ.

English summary
18 nursing students from Surath, Gujarat come to Ballari to serve for Covid patients. JSW Steel Limited is set up the 1,000 bed temporary hospital at Toranagallu, Ballari district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X