ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾರ ಪರವಾಗಿಯೂ ಸಹಿ ಮಾಡಿಲ್ಲ; ಕರುಣಾಕರ ರೆಡ್ಡಿ

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಜೂನ್ 10; "ನಾನು ಯಾರ ಪರವಾಗಿಯೂ ಸಹಿ ಮಾಡಿಲ್ಲ. ನನ್ನನ್ನು ಯಾರು ಸಂಪರ್ಕಿಸಿಲ್ಲ. ನಮ್ಮ ನಾಯಕರು ಸಿಎಂ ಯಡಿಯೂರಪ್ಪನವರೇ" ಎಂದು ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಬಳ್ಳಾರಿಯಲ್ಲಿ ಶಾಸಕರ ಮಾಧ್ಯಮಗಳ ಜೊತೆ ಮಾತನಾಡಿದರು. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಬೇಕೆಂಬ ಪ್ರಯತ್ನಕ್ಕೆ ಸ್ವ ಪಕ್ಷದವರಿಂದಲೇ ಅಪಸ್ವರ ಕೇಳಿ ಬರುತ್ತಿದೆ. ಕೆಲ ಶಾಸಕರು ಸಿಎಂ ಹುದ್ದೆಯಿಂದ ಕಳಗೆ ಇಳಿಸುವುದಕ್ಕೆ ಸಹಿ ಮಾಡಿದ್ದಾರೆ ಎಂಬ ಮಾತುಗಳು ಹಬ್ಬಿವೆ.

ಯಡಿಯೂರಪ್ಪ ರಾಜೀನಾಮೆ ಹೇಳಿಕೆ ಸ್ವಾಗತಿಸಿದ ಎಚ್. ವಿಶ್ವನಾಥ್ ಯಡಿಯೂರಪ್ಪ ರಾಜೀನಾಮೆ ಹೇಳಿಕೆ ಸ್ವಾಗತಿಸಿದ ಎಚ್. ವಿಶ್ವನಾಥ್

ಈ ಕುರಿತು ಮಾತನಾಡಿದ ಶಾಸಕರು, "ಯಾರ ಪರವಾಗಿ ನಾನು ಸಹಿ ಮಾಡಿಲ್ಲ ಅದು ನನಗೆ ಗೊತ್ತಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ" ಎಂದು ಸ್ಪಷ್ಟಪಡಿಸಿದರು.

ವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್‌ವೈ ಮಾತು ವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್‌ವೈ ಮಾತು

Not Signed Favor Of Any Leader Says Karunakar Reddy

"ಯಡಿಯೂರಪ್ಪನವರೇ ನಮ್ಮ ನಾಯಕರು ಯಾವುದೇ ಅನುಮಾನ ಬೇಡ. ಬಿಜೆಪಿ ಪಕ್ಷದಿಂದ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅದರ ಬಗ್ಗೆ ನಮ್ಮದು ಯಾವುದೇ ತಕರಾರು ಇಲ್ಲ" ಎಂದರು.

ರಾಜ್ಯ ನಾಯಕತ್ವ ಬದಲಾವಣೆಗೆ ಕುರಿತು ಸಿಎಂ ಯಡಿಯೂರಪ್ಪ ಖಡಕ್ ಉತ್ತರ ರಾಜ್ಯ ನಾಯಕತ್ವ ಬದಲಾವಣೆಗೆ ಕುರಿತು ಸಿಎಂ ಯಡಿಯೂರಪ್ಪ ಖಡಕ್ ಉತ್ತರ

"ಯಡಿಯೂರಪ್ಪನವರೇ ಸ್ವತಃ ಹೇಳಿದ್ದಾರೆ. ಹೈ ಕಮಾಂಡ್ ಎಲ್ಲಿಯವರೆಗೆ ಸಿಎಂ ಆಗಿರೋಕೆ ಅವಕಾಶ ನಿಡುತ್ತದೆಯೋ ಅಲ್ಲಿಯವರೆಗೆ ಇರ್ತನೆ ಎಂದು. ಅವರೇ ಹೀಗೆ ಹೇಳಿದ ಮೇಲೆ ಬೇರೆ ರೀತಿಯ ಚರ್ಚೆ ಮಾಡುವ ಅಗತ್ಯವಿಲ್ಲ" ಎಂದು ಹೇಳಿದರು.

"ಪಕ್ಷದ ಮುಂದೆ ಎಲ್ಲರು ಒಂದೇ. ಯಾರು ದೊಡ್ಡವರಲ್ಲ, ನನ್ನನ್ನು ಒಳಗೊಂಡಂತೆ ಹೈ ಕಮಾಂಡ್ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಪಾಲಿಸುತ್ತೇನೆ. ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ, ನಾನು ಪಕ್ಷದ ಪರವಾಗಿ‌ ಇಂದು ಇರುತ್ತೇನೆ ಮತ್ತು ಮುಂದೆಯೂ ಇರುತ್ತೇನೆ" ಎಂದು ತಿಳಿಸಿದರು.

English summary
I am not signed in favor of any leader said Harapanahalli BJP MLA Karunakar Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X